ಭುವನೇಶ್ವರ: ಒಡಿಶಾದ ಬಾಲಸೋರ್‌ನಲ್ಲಿ ರೈಲು ದುರಂತ ಸಂಭವಿಸಿ ಎರಡು ತಿಂಗಳು ಕಳೆದರೂ ಇನ್ನೂ 29 ಮೃತದೇಹಗಳು ಗುರುತು ಪತ್ತೆಯಾಗಿಲ್ಲ. ಮೃತದೇಹಗಳನ್ನು ಭೂಪನೇಶ್ವರದ ಏಮ್ಸ್‌ನಲ್ಲಿ ಇರಿಸಲಾಗಿದೆ.
ಎಐಐಎಂಎಸ್ ಭುವನೇಶ್ವರದ ವೈದ್ಯಕೀಯ ಅಧಿಕ್ಷಕ ದಿಲೀಪ್ ಕುಮಾರ್ ಪರಿದಾ ಮಾತನಾಡಿ, ರಾಷ್ಟ್ರೀಯ ಸಂಸ್ಥೆಯು ಎರಡು ಹಂತಗಳಲ್ಲಿ 162 ದೇಹಗಳನ್ನು ಸ್ವೀಕರಿಸಿತ್ತು ಅದರಲ್ಲಿ 133 ಮೃತದೇಹಗಳನ್ನು ಅವರವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದ್ದು ಇನ್ನುಳಿದ 29 ಮೃತದೇಹಗಳ ಗುರುತು ಪತ್ತೆ ಕಾರ್ಯ ನಡೆಯಬೇಕಿದೆ ಎಂದು ಹೇಳಿದ್ದಾರೆ.
ಜೂನ್ 2 ರಂದು ಕೋರಮಂಡಲ್-ಚೆನ್ನೈ ಎಕ್ಸ್‌ಪ್ರೆಸ್, ಯಶವಂತಪುರ-ಹೌರಾ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ಮತ್ತು ಸರಕು ಸಾಗಣೆ ರೈಲು ಬಹನಾಗಾ ಬಜಾರ್ ರೈಲು ನಿಲ್ದಾಣದ ಬಳಿ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ 295 ಜನರು ಸಾವನ್ನಪ್ಪಿದ್ದರು.
ಸಿಗ್ನಲ್ ವೈಫಲ್ಯವೇ ಬಾಲಸೋರ್ ದುರಂತಕ್ಕೆ ಕಾರಣ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದರು.
ಇದನ್ನೂ ಓದಿ: ದಾಂಡೇಲಿಯಲ್ಲಿ ಸೋರುತ್ತಿರುವ ಗ್ರಂಥಾಲಯ : ದುರಸ್ತಿಗೆ ಮನವಿ