ಒಡಿಶಾ : ಬಾಗಿಲು ಹಾಕಿದ್ದ ಮನೆಯೊಂದರಲ್ಲಿ ಒಂದೇ ಕುಟುಂಬದ ನಾಲ್ವರ ಶವಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಒಡಿಶಾದ ಬರ್ಗರ್ ಜಿಲ್ಲೆಯ ಭೇದನ್ ಬ್ಲಾಕ್‌ನ ಜಮ್ಡೋಲಾ ಗ್ರಾಮದಲ್ಲಿ ಬೆಳೆಕಿಗೆ ಬಂದಿದೆ.
ಮೃತರನ್ನು ಶೇಷಾದೇಬ್ ಮೆಹರ್ (55 ವರ್ಷ), ಪತ್ನಿ ಖಿರೇಶ್ವರಿ(48 ವರ್ಷ) ಇಬ್ಬರು ಮಕ್ಕಳಾದ ಅರಬಿಂದಾ ಮೆಹರ್(28 ವರ್ಷ) ಮತ್ತು ಶಿಬಾನಿ ಮೆಹರ್ (20 ವರ್ಷ) ಎಂದು ಗುರುತಿಸಲಾಗಿದೆ.
ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಸ್ಪಷ್ಟವಾಗಿಲ್ಲ, ಕಳೆದ ಮೂರು ನಾಲ್ಕು ದಿನಗಳಿಂದ ಮನೆ ಮಂದಿ ಅಕ್ಕಪಕ್ಕದವರಿಗೆ ಕಾಣಿಸಲಿಲ್ಲ ಅಲ್ಲದೆ ನೆರೆಹೊರೆಯವರು ಈ ಮನೆಯವರು ಎಲ್ಲಿಗೋ ಹೋಗಿರಬಹುದು ಎಂದು ತಿಳಿದಿದ್ದರು ಆದರೆ ಮೂರು ನಾಲ್ಕು ದಿನಗಳು ಕಳೆಯುತ್ತಿದ್ದಂತೆ ವಾಸನೆ ಬರಲು ಶುರುವಾಗಿದೆ ಇದರಿಂದ ಸಂಶಯಗೊಂಡ ನೆರೆಹೊರೆಯವರು ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ, ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಮನೆಯ ಬಾಗಿಲು ಮುರಿದು ಒಳಹೊಕ್ಕಾಗ ಕೋಣೆಯೊಳಗೆ ನಾಲ್ವರ ಮೃತ ದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇಬ್ಬರು ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದರೆ ಮತ್ತಿಬ್ಬರು ನೆಲದ ಮೇಲೆ ಬಿದ್ದಿದ್ದರು ಎನ್ನಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಿದ್ದಾರೆ, ಅಲ್ಲದೆ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಪೋಲೀಸರ ತನಿಖೆಯಿಂದ ಗೊತ್ತಾಗಬೇಕಿದೆ.
ಇದನ್ನೂ ಓದಿ : ಹಿಂಗಾರು ಆಗಮನ; ಹಲವೆಡೆ ಮಳೆ, ಕೃಷಿ ಚಟುವಟಿಕೆಗಳಿಗೆ ತೊಂದರೆ