Advertisement
ಈಗಿನ ಕಾಲದಲ್ಲಿ ವಿದ್ಯೆ ಎನ್ನುವುದು ಎಲ್ಲರ ಹಕ್ಕು ಹೌದು. ಆದರೆ ಅದು ಬಡತನದ ಕಾರಣದಿಂದಲೋ ಅಥವಾ ಕೀಳೆಂಬ ಮನೋಭಾವ ದಿಂದಲೋ ವಿದ್ಯೆಯೆನ್ನುವುದು ಸಮಾಜದ ಎಲ್ಲಾ ವರ್ಗದವರಿಗೆ ದಕ್ಕದೆ ಅದು ಕೆಲವರ ಸ್ವತ್ತಾಗಿ ಇರುವುದು ದುರಂತವೇ ಸರಿ. ಸರ್ಕಾರ ಶಿಕ್ಷಣಕ್ಕಾಗಿ ಎಲ್ಲಾ ಬಗೆ ಅನುಕೂಲವನ್ನು ಕೈಗೆಟಕುವ ರೀತಿಯಲ್ಲಿ ಅನುಷ್ಠಾನಗೊಳಿಸಿದ್ದರೂ ಅದು ಯಾವುದೋ ಒಂದು ಕಾರಣದಿಂದ ದೇಶದ ಎಲ್ಲಾ ಮನೆಯ ಬಾಗಿಲಿಗೆ ದಕ್ಕುವಲ್ಲಿ ವಿಫಲವಾಗಿಯೇ ಇದೆ. ಕಡ್ಡಾಯ ಶಿಕ್ಷಣ ಪದ್ಧತಿ ಇದ್ದರು ಕೆಲ ಮಕ್ಕಳು ಕಡ್ಡಾಯವಾಗಿ ಶಾಲೆಯ ದಾರಿಗೆ ದಾಪುಗಾಲು ಇಡುವ ಬದಲು ಶಿಕ್ಷಣದಿಂದ ವಂಚಿತರಾಗಿರುವುದು ವಿಪರ್ಯಾಸ.
Related Articles
Advertisement
ನಂದಾ ಅಜ್ಜ ವಿದ್ಯೆಯನ್ನು ಬೋಧಿಸುವುದು ನಿನ್ನೆ ಮೊನ್ನೆಯಿಂದಲ್ಲ. ಈ ಕ್ರಾಂತಿ ಆರಂಭವಾಗಿ 75 ವರ್ಷಗಳೇ ಸಂದಿವೆ. ಕಳೆದ 75 ವರ್ಷಗಳಿಂದ ತಮ್ಮ ಗ್ರಾಮದ ಮಕ್ಕಳಿಗೆ ವಿದ್ಯೆ ಬೋಧಿಸುತ್ತಾ ಎಷ್ಟೋ ಮಕ್ಕಳ ಪಾಲಿಗೆ ಗ್ರೇಟ್ ಟೀಚರ್ ಅನ್ನಿಸಿಕೊಂಡಿದ್ದಾರೆ. ವಿಶೇಷ ಅಂದರೆ ಕಳೆದ 15 ವರ್ಷಗಳಿಂದ ಮಕ್ಕಳಿಂದ ಆಗಲಿ, ಸರ್ಕಾರದ ಯೋಜನೆಯ ಲಾಭವಾಗಲಿ,ಸೌಕರ್ಯದ ಆಸರೆಯನ್ನಾಗಲಿ ಯಾವುದನ್ನು ಸಂದಾ ಅಜ್ಜ ಪಡೆದುಕೊಂಡಿಲ್ಲ. ಸದ್ಯ ನಂದಾ ಅವರು ತನ್ನ ಮೊದಲ ಬ್ಯಾಚ್ ನ ವಿದ್ಯಾರ್ಥಿಗಳ ಮೊಮ್ಮಕ್ಕಳಿಗೆ ವಿದ್ಯೆ ಕಲಿಸಿ ಕೊಡುತ್ತಿದ್ದಾರೆ. ಪ್ರಾಯ 104 ದಾಟಿದರೂ ಕಣ್ಣಿಗೆ ಕನ್ನಡಕ ಇಲ್ಲ. ಪ್ರತಿ ನಿತ್ಯ 30-40 ಮಕ್ಕಳು ಮರದಡಿ ಕೂತು ತಮ್ಮ ಮೆಚ್ಚಿನ ನಂದಾ ಅಜ್ಜನ ಪಾಠ ಕೇಳುತ್ತಾರೆ. ಇಷ್ಟು ಮಾತ್ರವಲ್ಲದೆ ರಾತ್ರಿಯ ವೇಳೆ ಶಿಕ್ಷಣದಿಂದ ವಂಚಿತರಾದ ಹಿರಿಯರಿಗೂ ನಂದಾ ಅವರು ಪಾಠ ಹೇಳಿ ಕೊಡುತ್ತಾರೆ.
ಕೃಷಿ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದ ನಂದಾ ತಮ್ಮ ಹಳ್ಳಿಯಲ್ಲಿ ಅನೇಕ ಅನಕ್ಷರಸ್ಥರನ್ನು ಇರುವುದನ್ನು ಕಾಣುತ್ತಾರೆ.ಸರಿಯಾಗಿ ಹೆಸರು ಬರೆಯಲು ಬಾರದವರನ್ನು ಕಂಡ ಅವರು ಸಹಿ ಹಾಕಲು ಕಲಿಸಲು ಕರೆಯುತ್ತಾರೆ. ಆಗ ಅನೇಕರು ಆಸಕ್ತಿಯಿಂದ ಬಂದರು ಹಾಗೂ ಭಗವದ್ಗೀತೆಯನ್ನು ಓದಲು ಕಲಿತರು ಎನ್ನುತ್ತಾರೆ.
ಉತ್ಸಾಹದಿಂದ ಪ್ರಾರಂಭಿಸಿದ ನಂದಾ ಪ್ರಸ್ಥಿಯ ಪಾಠ ಶಾಲೆಯ ಸುದ್ದಿ ಮಾಧ್ಯಮಗಳಲ್ಲಿ ಕಂಡದ್ದೆ ತಡ, ಎಲ್ಲಡೆಯಿಂದ ನಂದಾ ಅವರ ಕಲಿಕಾ ಕ್ರಮವನ್ನು ಮೆಚ್ಚಿಕೊಂಡು, ಪ್ರೋತ್ಸಾಹ ಹಾಗೂ ಸ್ಪೂರ್ತಿಯ ಮಾತುಗಳು ಕೇಳಿ ಬರುತ್ತಿದೆ. ಏನೇ ಆದರೂ ನಂದಾ ಪ್ರಸ್ಥಿ ಮಾತ್ರ ಯಾರ ಸಹಯವನ್ನಾಗಲಿ ಅಥವಾ ನೆರವನ್ನಾಗಲಿ ಬೇಡಿಕೊಂಡಿಲ್ಲ.ಇಂಥವರೇ ಅಲ್ವಾ ನಿಜವಾದ ಗುರು..