ಸಂಬಲ್ಪುರ : ಆನೆ ನಡೆದದ್ದೇ ದಾರಿ ಎಂಬಂತೆ ರೈತರ ಅಪಾರ ಪ್ರಮಾಣದ ಬೆಳೆಗಳನ್ನು ಹಾಳುಮಾಡಲು ಪ್ರಾರಂಭಿಸಿದ ಕಾಡಾನೆಯನ್ನು ಅಳುಕದೆ, ಅಂಜದೆ ಹಿಮ್ಮೆಟ್ಟಿಸಿದ ಅರಣ್ಯ ರಕ್ಷಕರೊಬ್ಬರು ಸಾಮಾಜಿಕ ತಾಣಗಳಲ್ಲಿ ಹೀರೋ ಆಗಿ ಹೊರ ಹೊಮ್ಮಿದ್ದಾರೆ.
ಗ್ರಾಮಕ್ಕೆ ನುಗ್ಗಿದ ದೈತ್ಯ ಕೆರಳಿದ ಆನೆಯನ್ನು ಓಡಿಸುವಲ್ಲಿ ಸಾಕಷ್ಟು ಛಲ ಮತ್ತು ಧೈರ್ಯ ತೋರಿದ ಅರಣ್ಯ ಸಿಬ್ಬಂದಿ ಅದನ್ನು ಮಾಡಲು ಏಕಾಂಗಿಯಾಗಿ ಶಕ್ತಿ ತೋರಿಸಿದ್ದಾರೆ.
ಫಾರೆಸ್ಟ್ ಗಾರ್ಡ್ ಚಿತ್ತ ರಂಜನ್ ಮಿರಿ ಅವರು ಕೇವಲ ಬೆಂಕಿಯ ದೊಂದಿನ್ನು ತೋರಿಸುವ ಮೂಲಕ ಕೋಪಗೊಂಡ ಆನೆಯನ್ನು ಓಡಿಸಿದ್ದಾರೆ.
Related Articles
ಒಡಿಶಾ ಬೈಟ್ಸ್ ಪ್ರಕಾರ,ಈ ಘಟನೆ ಸಂಬಲ್ಪುರ ಜಿಲ್ಲೆಯ ರೆಧಾಖೋಲ್ ಅರಣ್ಯ ವಿಭಾಗದ ಚಡ್ಚಡಿ ಮತ್ತು ಅಂಗಬೀರಾ ಗ್ರಾಮದಲ್ಲಿ ನಡೆದಿದೆ.