ಭುವನೇಶ್ವರ್: ಕೋವಿಡ್ 19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ ಜುಲೈ 1ರವರೆಗೆ ಕೋವಿಡ್ ಲಾಕ್ ಡೌನ್ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಒಡಿಶಾ ಸರ್ಕಾರ ಬುಧವಾರ(ಜೂನ್ 16) ಘೋಷಿಸಿದೆ.
ಇದನ್ನೂ ಓದಿ:ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಶೇ. 11 ರಷ್ಟು ಆರ್ಥಿಕ ಸಂಪತ್ತು ಹೆಚ್ಚಳ ..!
ಕೋವಿಡ್ ನಿರ್ಬಂಧ ಜುಲೈ 1ರ ಬೆಳಗ್ಗೆ 5ಗಂಟೆವರೆಗೆ ಜಾರಿಯಲ್ಲಿರಲಿದೆ ಎಂದು ಒಡಿಶಾ ಮುಖ್ಯ ಕಾರ್ಯದರ್ಶಿ ಎಸ್.ಸಿ.ಮೋಹಾಪಾತ್ರ ತಿಳಿಸಿದ್ದಾರೆ. ಜೂನ್ ಅಂತ್ಯದವರೆಗೂ ರಾಜ್ಯಾದ್ಯಂತ ಶನಿವಾರ, ಭಾನುವಾರದ ವಾರಾಂತ್ಯದ ಲಾಕ್ ಡೌನ್ ಮುಂದುವರಿಯಲಿದೆ ಎಂದು ಪ್ರಕಟನೆ ಹೇಳಿದೆ.
ಒಡಿಶಾ ಸರ್ಕಾರ ಕೋವಿಡ್ ಪಾಸಿಟಿವಿಟಿ ದರವನ್ನು ಎರಡು ವಿಭಾಗಗಳನ್ನಾಗಿ ವಿಭಜಿಸಿದೆ. ಕೆಟಗರಿ ಎನಲ್ಲಿ ದಕ್ಷಿಣ ಮತ್ತು ಪಶ್ಚಿಮದ 17 ಜಿಲ್ಲೆಗಳನ್ನೊಳಗೊಂಡಿದ್ದು ಈ ಪ್ರದೇಶದಲ್ಲಿ ಶೇ.5ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇದೆ. ಕೆಟಗರಿ ಬಿಯಲ್ಲಿ 13 ಜಿಲ್ಲೆಗಳಿವೆ ಎಂದು ವರದಿ ತಿಳಿಸಿದೆ.
ಕೆಟಗರಿ ಎಯಲ್ಲಿ ಇರುವ ಜಿಲ್ಲೆಗಳಲ್ಲಿ ಅಂಗಡಿ ಹಾಗೂ ತುರ್ತು ಸೇವೆಗಳು ಬೆಳಗ್ಗೆ 6ರಿಂದ ಸಂಜೆ 5ರವರೆಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಕೆಟಗರಿ ಬಿಯಲ್ಲಿ ಇರುವ ಜಿಲ್ಲೆಗಳಲ್ಲಿರುವ ಅಂಗಡಿಗಳು ಬೆಳಗ್ಗೆ 6ರಿಂದ ಮಧ್ಯಾಹ್ನ 1ಗಂಟೆವರೆಗೆ ತೆರೆಯಲು ಅವಕಾಶ ನೀಡಲಾಗಿದೆ.