Advertisement

ಕೊಹಿನೂರ್ ಪುರಿ ಜಗನ್ನಾಥ್ ದೇವರಿಗೆ ಸೇರಿದ್ದು: ಪ್ರಧಾನಿ, ರಾಷ್ಟ್ರಪತಿ ಮಧ್ಯಸ್ಥಿಕೆಗೆ ಮನವಿ

02:34 PM Sep 13, 2022 | Team Udayavani |

ಭುವನೇಶ್ವರ್: ಇಡೀ ಜಗತ್ತಿನಲ್ಲಿ ಬೆಲೆ ಕಟ್ಟಲಾರದ ಕೊಹಿನೂರ್ ವಜ್ರ ಪುರಿಯ ಜಗನ್ನಾಥ್ ದೇವರಿಗೆ ಸೇರಿರುವುದಾಗಿ ಒಡಿಶಾದ ಸಾಮಾಜಿಕ-ಸಾಂಸ್ಕೃತಿಕ ಸಂಘಟನೆ ಹೇಳಿಕೆ ನೀಡಿದ್ದು, ಕೊಹಿನೂರ್ ವಜ್ರವನ್ನು ಯುನೈಟೆಡ್ ಕಿಂಗ್ ಡಮ್ ನಿಂದ ಐತಿಹಾಸಿಕ ಪುರಿ ದೇವಸ್ಥಾನಕ್ಕೆ ವಾಪಸ್ ತರಲು ರಾಷ್ಟ್ರಪತಿ ದ್ರೌಪದಿ ಮುರ್ಮು ಮಧ್ಯಸ್ಥಿಕೆ ವಹಿಸಬೇಕೆಂದು ಮನವಿ ಮಾಡಿಕೊಂಡಿದೆ ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಗಣಪತಿ ವಿಸರ್ಜನೆ ವೇಳೆ ಡ್ಯಾನ್ಸ್‌ ಮಾಡಲು ನಿರಾಕರಣೆ: ಯುವಕರಿಗೆ ಕೈಕಾಲು ಕಟ್ಟಿ ಥಳಿತ

ಇಂಗ್ಲೆಂಡ್ ರಾಣಿ ಎಲಿಜಬೆತ್ II ನಿಧನರಾದ ನಂತರ ಪುತ್ರ ಪ್ರಿನ್ಸ್ ಚಾರ್ಲ್ಸ್ ರಾಜನಾಗಿ ಆಡಳಿತ ನಡೆಸಲಿದ್ದಾರೆ. ನಿಯಮಗಳ ಪ್ರಕಾರ 105 ಕ್ಯಾರೆಟ್ ಕೊಹಿನೂರ್ ವಜ್ರ ಚಾರ್ಲ್ಸ್ ಪತ್ನಿ ಡಚೆಸ್ಸ್ ಆಫ್ ಕಾರ್ನ್ ವಾಲ್ ಕ್ಯಾಮಿಲ್ಲಾಗೆ ಸೇರಲಿದೆ.

ಏತನ್ಮಧ್ಯೆ ಪುರಿ ಮೂಲದ ಶ್ರೀ ಜಗನ್ನಾಥ್ ಸೇನಾ, 12ನೇ ಶತಮಾನದಲ್ಲಿ ಪುರಿ ದೇವಾಲಯದಲ್ಲಿದ್ದ ಕೊಹಿನೂರ್ ವಜ್ರವನ್ನು ಮರಳಿ ತರಲು ರಾಷ್ಟ್ರಪತಿ ದ್ರೌಪದಿ ಮುರ್ಮು ಮಧ್ಯಸ್ಥಿಕೆ ವಹಿಸಬೇಕೆಂದು ಮನವಿ ಸಲ್ಲಿಸಿರುವುದಾಗಿ ವರದಿ ವಿವರಿಸಿದೆ.

“ಕೊಹಿನೂರ್ ವಜ್ರ ಶ್ರೀ ಜಗನ್ನಾಥ್ ದೇವರಿಗೆ ಸೇರಿದ್ದಾಗಿದೆ. ಆದರೆ ಕೊಹಿನೂರ್ ಇಂಗ್ಲೆಂಡ್ ರಾಣಿಯ ಕಿರೀಟದಲ್ಲಿ ಸೇರಿದೆ. ಈ ನಿಟ್ಟಿನಲ್ಲಿ ಕೊಹಿನೂರ್ ವಜ್ರವನ್ನು ಮರಳಿ ಭಾರತಕ್ಕೆ ತರಲು ಪ್ರಧಾನಿ ನರೇಂದ್ರ ಮೋದಿ ಅವರು ಕ್ರಮ ತೆಗೆದುಕೊಳ್ಳಬೇಕಾಗಿದೆ. ಮಹಾರಾಜ ರಣಜಿತ್ ಸಿಂಗ್ ಅವರ ಇಚ್ಛೆಯ ಮೇರೆಗೆ ಪುರಿ ಜಗನ್ನಾಥ್ ದೇವರಿಗೆ ಕೊಹಿನೂರ್ ವಜ್ರವನ್ನು ದಾನವಾಗಿ ನೀಡಿದ್ದರು” ಎಂದು ಜಗನ್ನಾಥ್ ಸೇನಾ ಸಂಚಾಲಕ ಪ್ರಿಯ ದರ್ಶನ್ ಪಟ್ನಾಯಕ್ ಮನವಿಯಲ್ಲಿ ತಿಳಿಸಿದ್ದಾರೆ.

Advertisement

“ಅಫ್ಘಾನಿಸ್ತಾನದ ನಾದಿರ್ ಷಾ ವಿರುದ್ಧದ ಯುದ್ಧದಲ್ಲಿ ಪಂಜಾಬ್ ನ ಮಹಾರಾಜ ರಣಜೀತ್ ಸಿಂಗ್ ಜಯಗಳಿಸಿದ ಹಿನ್ನೆಲೆಯಲ್ಲಿ ಕೊಹಿನೂರ್ ವಜ್ರವನ್ನು ಪುರಿ ಜಗನ್ನಾಥ್ ದೇವರಿಗೆ ದಾನವಾಗಿ ನೀಡಿದ್ದರು” ಎಂದು ಪಟ್ನಾಯಕ್ ವಿವರಿಸಿದ್ದಾರೆ.

ಈ ಬಗ್ಗೆ ರಾಣಿ ಎಲಿಜಬೆತ್ ಗೆ ಪತ್ರವನ್ನೂ ಕೂಡಾ ಬರೆಯಲಾಗಿತ್ತು. ನಂತರ 2016ರ ಅಕ್ಟೋಬರ್ 19ರಂದು ಬಕಿಂಗ್ ಹ್ಯಾಮ್ ಅರಮನೆಯಿಂದ ಪತ್ರ ಬಂದಿತ್ತು. ಕೊಹಿನೂರ್ ವಜ್ರ ಮರಳಿಸುವ ಬಗ್ಗೆ ನೇರವಾಗಿ ಯುನೈಟೆಡ್ ಕಿಂಗ್ ಡಮ್ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುವಂತೆ ತಿಳಿಸಿದ್ದು, ಇದೊಂದು ರಾಜಕೀಯೇತರ ಪ್ರಕ್ರಿಯೆಯಾಗಿದೆ ಎಂದು ಸಲಹೆ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next