Advertisement

ಒಡಿಶಾ ಒಂದು ವರ್ಷದಲ್ಲಿ 1,149 ಅತ್ಯಾಚಾರ ಪ್ರಕರಣ ದಾಖಲು

09:55 AM Nov 26, 2019 | sudhir |

ಭುವನೇಶ್ವರ್‌: ಈ ವರ್ಷ ಒಡಿಶಾದಲ್ಲಿ 1,149 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ 604 ಪ್ರಕರಣಗಳಲ್ಲಿ ಅಪ್ರಾಪ್ತರು ಭಾಗಿಯಾಗಿದ್ದಾರೆ ಎಂದು ರಾಜ್ಯ ಸರಕಾರ ಹೇಳಿದೆ.

Advertisement

ಈ ವರ್ಷದ ಮೊದಲ ಆರು ತಿಂಗಳು ದಾಖಲಾದ ಪ್ರಕರಣಗಳ ಪಟ್ಟಿ ಇದಾಗಿದ್ದು, ಗೃಹ ರಾಜ್ಯ ಸಚಿವ ಡಿ.ಎಸ್‌. ಮಿಶ್ರಾ ಸೋಮವಾರ ರಾಜ್ಯ ವಿಧಾನಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿರುವಾಗ ಈ ಮಾಹಿತಿ ನೀಡಿದ್ದಾರೆ.

2018ರಲ್ಲಿ ರಾಜ್ಯದಲ್ಲಿ 2,502 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು. 2019ರ ಮೊದಲ 6 ತಿಂಗಳಲ್ಲಿ 1,149 ಘೋರ ಅಪರಾಧಗಳು ಸಂಭವಿಸಿದೆ. 2018ರಲ್ಲಿ ಒಟ್ಟು 2,502 ಅತ್ಯಾಚಾರ ಪ್ರಕರಣಗಳು ನಡೆದಿದ್ದು, ಅದರಲ್ಲಿ 1,430 ಪ್ರಕರಣಗಳು ಅಪ್ರಾಪ್ತ ಬಾಲಕಿಯರನ್ನು ಒಳಗೊಂಡಂತೆ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next