Advertisement

ODI World Cup 2023; ಹೈದರಾಬಾದ್ ಕ್ರಿಕೆಟ್ ಮಂಡಳಿ ಮನವಿ ತಿರಸ್ಕರಿಸಿದ ಬಿಸಿಸಿಐ

05:09 PM Aug 22, 2023 | Team Udayavani |

ಮುಂಬೈ: ಭಾರತದ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಗೆ ಸಕಲ ಸಿದ್ದತೆಗಳು ನಡೆಯುತ್ತಿದೆ. ಈ ವರ್ಷದ ಅಕ್ಟೋಬರ್ ನಲ್ಲಿ ಆರಂಭವಾಗಲಿರುವ ಮೆಗಾ ಕ್ರಿಕೆಟ್ ಕೂಟಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸರ್ವ ಸಜ್ಜಾಗಿದ್ದು, ಸುಸೂತ್ರವಾಗಿ ಪಂದ್ಯಾವಳಿ ನಡೆಸಲು ಯೋಜನೆ ರೂಪಿಸಿದೆ.

Advertisement

ಐಸಿಸಿ ಮತ್ತು ಬಿಸಿಸಿಐ ಆರಂಭದಲ್ಲಿ ಒಂದು ವೇಳಾಪಟ್ಟಿ ಬಿಡುಗಡೆ ಮಾಡಿತ್ತು. ಆದರೆ ಕೆಲವು ಸದಸ್ಯ ರಾಷ್ಟ್ರಗಳು ಮತ್ತು ಆತಿಥ್ಯ ವಹಿಸುವ ಕೆಲವು ರಾಜ್ಯ ಸಂಸ್ಥೆಗಳ ಮನವಿಯ ಮೇರೆಗೆ ಭಾರತ- ಪಾಕ್ ಪಂದ್ಯ ಸೇರಿ ಹಲವು ಪಂದ್ಯಗಳನ್ನು ದಿನಾಂಕ ಬದಲಾವಣೆ ಮಾಡಲಾಗಿತ್ತು. ಆದರೆ ಇದೀಗ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಶನ್ ಮತ್ತೆ ದಿನಾಂಕ ಬದಲಾವಣೆಗೆ ಮನವಿ ಮಾಡಿದ್ದು, ಆದರೆ ಅದನ್ನು ಬಿಸಿಸಿಐ ತಿರಸ್ಕರಿಸಿದೆ.

ಅಕ್ಟೋಬರ್ 9 ಮತ್ತು 10 ರಂದು ಹೈದರಾಬಾದ್ ನ ಉಪ್ಪಲ್ ಕ್ರೀಡಾಂಗಣದಲ್ಲಿ ಬ್ಯಾಕ್-ಟು-ಬ್ಯಾಕ್ ಪಂದ್ಯಗಳನ್ನು ಆಯೋಜಿಸುವ ಕುರಿತು ಮಂಡಳಿಯು ಕಳವಳ ತೋರಿತ್ತು.

ಇದನ್ನೂ ಓದಿ:ಗ್ಲಾಮರ್‌ ಗಾಡಿಯಲ್ಲಿ ಮಾರಕಾಸ್ತ್ರ: ಡಬ್ಬಿಂಗ್‌ ರೈಟ್ಸ್‌ನಲ್ಲಿ ನಿರ್ಮಾಪಕರು ಅರ್ಧ ಸೇಫ್

“ನಾವು ಬಿಸಿಸಿಐ ಜೊತೆ ಚರ್ಚೆಯಲ್ಲಿ ತೊಡಗಿದ್ದೇವೆ ಮತ್ತು ವೇಳಾಪಟ್ಟಿಯನ್ನು ಬದಲಾಯಿಸುವುದು ಈ ಹಂತದಲ್ಲಿ ಕಾರ್ಯಸಾಧ್ಯವಲ್ಲ ಎಂದು ಅವರು ಸೂಚಿಸಿದ್ದಾರೆ. ಆದ್ದರಿಂದ, ನಾವು ಸಹಕರಿಸಲು ಸಮ್ಮತಿಸಿದ್ದೇವೆ” ಮೂಲಗಳು ಹೇಳಿದೆ.

Advertisement

ಹೈದರಾಬಾದ್ ಅಕ್ಟೋಬರ್ 9 ರಂದು ನ್ಯೂಜಿಲೆಂಡ್ ಮತ್ತು ನೆದರ್ಲ್ಯಾಂಡ್ಸ್ ನಡುವಿನ ಪಂದ್ಯವನ್ನು ಆಯೋಜಿಸಲಿದೆ. ಅದರ ಮರುದಿನ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಪಂದ್ಯವನ್ನು ಆಯೋಜಿಸಲಿದೆ. ಎರಡೂ ಪಂದ್ಯಗಳು ಹಗಲು/ರಾತ್ರಿ ಪಂದ್ಯಗಳಾಗಿವೆ.

“ಶ್ರೀಲಂಕಾ ಮತ್ತು ಪಾಕಿಸ್ತಾನವು ಉಪ್ಪಲ್ ಕ್ರೀಡಾಂಗಣದಲ್ಲಿಯೇ ಅಭ್ಯಾಸ ಮಾಡಲು ಬಯಸುತ್ತದೆ ಎಂದು ನಾವು ಊಹಿಸಿದ್ದೇವೆ, ಆದರೆ ವೇಳಾಪಟ್ಟಿಯ ಕಾರಣ ಇದು ಸಾಧ್ಯವಿಲ್ಲ. ಆದರೆ, ಪರ್ಯಾಯ ಸ್ಥಳದಲ್ಲಿ ಅಭ್ಯಾಸ ಸೌಲಭ್ಯಗಳನ್ನು ವ್ಯವಸ್ಥೆಗೊಳಿಸಬಹುದು ಎಂದು ನಮಗೆ ತಿಳಿಸಲಾಗಿದೆ. ನಾವು ಜಿಮ್ಖಾನಾ ಮೈದಾನದಲ್ಲಿ ಆಯೋಜಿಸುತ್ತೇವೆ” ಎಂದು ಆಂಧ್ರಪ್ರದೇಶದ ಮಾಜಿ ಹಿರಿಯ ಪೊಲೀಸ್ ಅಧಿಕಾರಿ ಪ್ರಸಾದ್ ಉಲ್ಲೇಖಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next