Advertisement

Duleep Trophy Cricket: ಇಂದಿನಿಂದ 3ನೇ ಸುತ್ತಿನ ಸ್ಪರ್ಧೆ

12:43 AM Sep 19, 2024 | Team Udayavani |

ಅನಂತಪುರ: ದುಲೀಪ್‌ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿಯ 3ನೇ ಹಾಗೂ ಅಂತಿಮ ಸುತ್ತಿನ ಸ್ಪರ್ಧೆ ಗುರುವಾರ ಆರಂಭ ವಾಗಲಿದೆ. ಅನಂತಪುರದಲ್ಲಿ ನಡೆಯುವ ಮುಖಾ ಮುಖೀಯಲ್ಲಿ ಇಂಡಿಯಾ ಬಿ-ಇಂಡಿಯಾ ಡಿ ಹಾಗೂ ಇಂಡಿಯಾ ಎ-ಇಂಡಿಯಾ ಸಿ ತಂಡಗಳು ಪರಸ್ಪರ ಎದುರಾಗಲಿವೆ.

Advertisement

ಯಾವುದೇ ನಾಕೌಟ್‌ ಪಂದ್ಯಗಳು ಇಲ್ಲದ ಕಾರಣ ಅತ್ಯಧಿಕ ಅಂಕ ಗಳಿಸಿದ ತಂಡವನ್ನು ಚಾಂಪಿಯನ್‌ ಎಂದು ಘೋಷಿಸಲಾಗುವುದು. ಸದ್ಯ ಋತುರಾಜ್‌ ಗಾಯಕ್ವಾಡ್‌ ನಾಯಕತ್ವದ ಇಂಡಿಯಾ ಸಿ 9 ಅಂಕಗಳೊಂದಿಗೆ ಅಗ್ರಸ್ಥಾನ ದಲ್ಲಿದೆ. ಇಂಡಿಯಾ ಬಿ 7 ಅಂಕ ಹೊಂದಿದ್ದು, ದ್ವಿತೀಯ ಸ್ಥಾನದಲ್ಲಿದೆ. ಇಂಡಿಯಾ ಎ 6 ಅಂಕಗಳೊಂದಿಗೆ ತೃತೀಯ ಸ್ಥಾನಿಯಾಗಿದೆ. ಇನ್ನೂ ಅಂಕದ ಖಾತೆಯನ್ನೇ ತೆರೆಯದ ಇಂಡಿಯಾ ಡಿ ಕೂಟದಿಂದ ನಿರ್ಗಮಿಸಿದೆ.

ಬಾಂಗ್ಲಾ ಟೆಸ್ಟ್‌ ಸರಣಿಯಿಂದ ಕಡೆಗಣಿಸಲ್ಪಟ್ಟ ಶ್ರೇಯಸ್‌ ಅಯ್ಯರ್‌, ಸಂಜು ಸ್ಯಾಮ್ಸನ್‌, ರಿಂಕು ಸಿಂಗ್‌, ಪ್ರಸಿದ್ಧ್ ಕೃಷ್ಣ, ರಿಯಾನ್‌ ಪರಾಗ್‌ ಅವರಿಗೆ ತಮ್ಮ ಸಾಮರ್ಥ್ಯವನ್ನು ತೋರಿಸಲು ಇದು ಮತ್ತೂಂದು ಅವಕಾಶವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next