Advertisement

ODI; ಸಂಜು ಸ್ಯಾಮ್ಸನ್‌ ಚೊಚ್ಚಲ ಅಂತಾರಾಷ್ಟ್ರೀಯ ಶತಕ: ಹರಿಣಗಳಿಗೆ 297 ರನ್ ಗುರಿ

08:23 PM Dec 21, 2023 | Team Udayavani |

ಪಾರ್ಲ್ : ಇಲ್ಲಿನ ಬೋಲ್ಯಾಂಡ್ ಪಾರ್ಕ್ ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಎದುರಿನ ಸರಣಿ ನಿರ್ಣಾಯಕ ಏಕದಿನ ಸರಣಿಯ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರು ಚೊಚ್ಚಲ ಅಂತಾರಾಷ್ಟ್ರೀಯ ಅಮೋಘ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ ಪಟ್ಟ ಭಾರತ  ಆತಿಥೇಯ ಹರಿಣಗಳಿಗೆ ಗೆಲ್ಲಲು 297 ರನ್ ಗಳ ಗುರಿ ಮುಂದಿಟ್ಟಿದೆ.

Advertisement

ಒನ್ ಡೌನ್ ಆಟಗಾರನಾಗಿ ಬಂದ ಸ್ಯಾಮ್ಸನ್ ಅವಕಾಶವನ್ನು ಭರಪೂರವಾಗಿ ಬಳಸಿಕೊಂಡರು. ಅಮೋಘ ಇನ್ನಿಂಗ್ಸ್ ಆಡಿದ ಅವರು 108 ರನ್ ಗಳಿಸಿ ಔಟಾದರು. 114 ಎಸೆತಗಳಲ್ಲಿ6 ಬೌಂಡರಿ ಮತ್ತು 3 ಆಕರ್ಷಕ ಸಿಕ್ಸರ್ ಗಳು ಅವರ ಇನ್ನಿಂಗ್ಸ್ ನಲ್ಲಿ ಒಳಗೊಂಡಿತ್ತು.

ಆರಂಭಿಕರಾದ ರಜತ್ ಪಾಟಿದಾರ್ 22, ಸಾಯಿ ಸುದರ್ಶನ್ 10 ರನ್ ಗೆ ಔಟಾದರು. ನಾಯಕ ಕೆಎಲ್ ರಾಹುಲ್ 21 ರನ್ ಗಳಿಗೆ ಪೆವಿಲಿಯನ್ ಗೆ ಮರಳಿದರು. ಆ ಬಳಿಕ ಸ್ಯಾಮ್ಸನ್ ಅವರಿಗೆ ಸಾಥ್ ನೀಡಿದ ತಿಲಕ್ ವರ್ಮ 52 ರನ್ ಗಳಿಸಿ ಔಟಾದರು. ರಿಂಕು ಸಿಂಗ್ 38, ವಾಷಿಂಗ್ಟನ್ ಸುಂದರ್ 14, ಅರ್ಷದೀಪ್ ಸಿಂಗ್ ಔಟಾಗದೆ 7 ರನ್ ಗಳಿಸಿದರು. 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 296 ರನ್ ಕಲೆ ಹಾಕಿತು.

Advertisement

Udayavani is now on Telegram. Click here to join our channel and stay updated with the latest news.

Next