Advertisement

ODI; ಮೊಹಮ್ಮದ್‌ ನಬಿ ನಂ.1 ಆಲ್‌ರೌಂಡರ್‌

11:26 PM Feb 14, 2024 | Team Udayavani |

ದುಬಾೖ: ಅಫ್ಘಾನಿಸ್ಥಾನದ ಮೊಹಮ್ಮದ್‌ ನಬಿ ಏಕದಿನದ ನಂ.1 ಆಲ್‌ರೌಂಡರ್‌ ಸ್ಥಾನ ಅಲಂಕರಿಸಿದ್ದಾರೆ (314 ಅಂಕ). ಇದರೊಂದಿಗೆ ದಾಖಲೆ 1,739 ದಿನಗಳ ಕಾಲ ಈ ಸ್ಥಾನದಲ್ಲಿದ್ದ ಶಕಿಬ್‌ ಅಲ್‌ ಹಸನ್‌ ಕೆಳಗಿಳಿದರು (310 ಅಂಕ). ಶಕಿಬ್‌ 2019ರ ಮೇ 19ರಂದು ನಂ.1 ಆಲ್‌ರೌಂಡರ್‌ ಆಗಿ ಮೂಡಿಬಂದಿದ್ದರು.

Advertisement

ಶ್ರೀಲಂಕಾ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ 136 ರನ್‌ ಬಾರಿಸುವ ಮೂಲಕ ಮೊಹಮ್ಮದ್‌ ನಬಿ ರ್‍ಯಾಂಕಿಂಗ್‌ ಯಾದಿಯ ಅಗ್ರಸ್ಥಾನಕ್ಕೆ ನೆಗೆದರು. ಅವರೀಗ ಏಕದಿನದಲ್ಲಿ ನಂ.1 ರ್‍ಯಾಂಕಿಂಗ್‌ ಸ್ಥಾನ ಅಲಂಕರಿಸಿದ ವಿಶ್ವದ ಅತೀ ಹಿರಿಯ ಕ್ರಿಕೆಟಿಗನಾಗಿದ್ದಾರೆ. ರವೀಂದ್ರ ಜಡೇಜ 10ನೇ ಸ್ಥಾನದಲ್ಲಿದ್ದಾರೆ (209).

Advertisement

Udayavani is now on Telegram. Click here to join our channel and stay updated with the latest news.

Next