Advertisement

ಏಕದಿನ ಬೌಲಿಂಗ್‌ ರ್‍ಯಾಂಕಿಂಗ್‌: ಬುಮ್ರಾ ವಿಶ್ವದ ನಂಬರ್‌-1 ಬೌಲರ್‌

12:03 PM Jul 14, 2022 | Team Udayavani |

ದುಬಾೖ: ಇಂಗ್ಲೆಂಡ್‌ ಎದುರಿನ ಓವಲ್‌ ಏಕದಿನ ಪಂದ್ಯದಲ್ಲಿ 19 ರನ್ನಿಗೆ 6 ವಿಕೆಟ್‌ ಉಡಾಯಿಸಿ ಅಮೋಘ ಸಾಧನೆಗೈದ ಯಾರ್ಕರ್‌ ಸ್ಪೆಷಲಿಸ್ಟ್‌ ಜಸ್‌ಪ್ರೀತ್‌ ಬುಮ್ರಾ ನೂತನ ಏಕದಿನ ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ ವಿಶ್ವದ ನಂಬರ್‌ ವನ್‌ ಬೌಲರ್‌ ಆಗಿ ಮೂಡಿಬಂದಿದ್ದಾರೆ. ಅವರು 4ನೇ ಸ್ಥಾನದಿಂದ ಈ ಎತ್ತರ ತಲುಪಿದರು. ಅವರೀಗ 718 ಅಂಕ ಹೊಂದಿದ್ದಾರೆ.

Advertisement

ಇಷ್ಟು ಸಮಯ ಅಗ್ರಸ್ಥಾನಿಯಾಗಿದ್ದ ನ್ಯೂಜಿಲ್ಯಾಂಡಿನ ಟ್ರೆಂಟ್‌ ಬೌಲ್ಟ್ ದ್ವಿತೀಯ ಸ್ಥಾನಕ್ಕೆ ಇಳಿದರೆ, ಪಾಕಿಸ್ಥಾನದ ಶಾಹೀನ್‌ ಅಫ್ರಿದಿ ಎರಡರಿಂದ 3ನೇ ಸ್ಥಾನಕ್ಕೆ ಜಾರಿದರು. ಇವರಿಬ್ಬರು ಕ್ರಮವಾಗಿ 712 ಹಾಗೂ 681 ಅಂಕ ಹೊಂದಿದ್ದಾರೆ.

ಇದೇ ವೇಳೆ ಜೋಶ್‌ ಹೇಝಲ್‌ವುಡ್‌ (4), ಮುಜೀಬ್‌ ಉರ್‌ ರೆಹಮಾನ್‌ (5) ಮತ್ತು ಮೆಹೆದಿ ಹಸನ್‌ (6) ಒಂದೊಂದು ಸ್ಥಾನದ ಪ್ರಗತಿ ಸಾಧಿಸಿದ್ದಾರೆ. ತೃತೀಯ ಸ್ಥಾನದಲ್ಲಿದ್ದ ಕ್ರಿಸ್‌ ವೋಕ್ಸ್‌ ಏಳಕ್ಕೆ ಕುಸಿದಿದ್ದಾರೆ. ಮ್ಯಾಟ್‌ ಹೆನ್ರಿ, ಮೊಹಮ್ಮದ್‌ ನಬಿ ಮತ್ತು ರಶೀದ್‌ ಖಾನ್‌ ಕ್ರಮವಾಗಿ 8ರಿಂದ 10ನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ.

Koo App

Well done Jasprit Bumrah for ranking number one ICC Bowlers in the ODI. He has definitely been in superb form in the past series as well. Let’s bag the series at the lords today. #JaspritBumrah #ENGvIND #CricketOnKoo

Advertisement

mona meshram (@monameshram30) 14 July 2022

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next