Advertisement

ODI; ವೆಸ್ಟ್‌ಇಂಡೀಸ್‌ ಎದುರು ಆಸ್ಟ್ರೇಲಿಯಕ್ಕೆ 83 ರನ್‌ ಜಯ

11:14 PM Feb 04, 2024 | Team Udayavani |

ಸಿಡ್ನಿ: ಸೀನ್‌ ಅಬೋಟ್‌ ಅವರ ಅಮೋಘ ಆಟದಿಂದಾಗಿ ಆಸ್ಟ್ರೇಲಿಯ ತಂಡವು ರವಿವಾರ ನಡೆದ ವೆಸ್ಟ್‌ಇಂಡೀಸ್‌ ತಂಡದೆ ದುರಿನ ದ್ವಿತೀಯ ಏಕದಿನ ಪಂದ್ಯ ದಲ್ಲಿ 83 ರನ್ನುಗಳ ಗೆಲುವು ದಾಖಲಿಸಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಆಸ್ಟ್ರೇಲಿಯ ತಂಡವು ಸೀನ್‌ ಅಬೋಟ್‌ ಅವರ 69 ರನ್‌ ನೆರವಿನಿಂದ 9 ವಿಕೆಟಿಗೆ 258 ರನ್ನುಗಳ ಸಾಧಾರಣ ಮೊತ್ತ ಪೇರಿಸಿತು. ಅಬೋಟ್‌ 63 ಎಸೆತಗಳಿಂದ ಒಂದು ಬೌಂಡರಿ ಮತ್ತು 4 ಸಿಕ್ಸರ್‌ ನೆರವಿನಿಂದ 69 ರನ್‌ ಗಳಿಸಿದ್ದರು.

ಇದಕ್ಕುತ್ತರವಾಗಿ ಅಬೋಟ್‌ ಸಹಿತ ಆಸ್ಟ್ರೇಲಿಯ ಬೌಲರ್‌ಗಳ ದಾಳಿಗೆ ಕುಸಿದ ವೆಸ್ಟ್‌ಇಂಡೀಸ್‌ ತಂಡವು 43.3 ಓವರ್‌ಗಳಲ್ಲಿ 175 ರನ್ನಿಗೆ ಆಲೌಟಾಗಿ ಸೋಲನ್ನು ಕಂಡಿತು. ಈ ಗೆಲುವಿನಿಂದ ಆಸ್ಟ್ರೇಲಿಯ ಮೂರು ಪಂದ್ಯಗಳ ಈ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ ಸರಣಿ ತನ್ನದಾಗಿಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next