Advertisement

ODI; ಐಡನ್‌ ಮಾರ್ಕ್‌ರಮ್‌ ಅಜೇಯ ಶತಕ: ದಕ್ಷಿಣ ಆಫ್ರಿಕಾ ಜಯ

12:58 AM Sep 14, 2023 | Team Udayavani |

ಪೊಚೆಫ್ಸೂಮ್‌: ಐಡನ್‌ ಮಾರ್ಕ್‌ರಮ್‌ ಅವರ ಅಜೇಯ ಶತಕ ಹಾಗೂ ಯಶಸ್ವಿ ಸ್ಪಿನ್‌ ದಾಳಿಯ ನೆರವಿನಿಂದ ದಕ್ಷಿಣ ಆಫ್ರಿಕಾ ತೃತೀಯ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು 111 ರನ್ನುಗಳಿಂದ ಉರುಳಿಸಿ ಸರಣಿಯನ್ನು ಜೀವಂತವಾಗಿರಿಸಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ದಕ್ಷಿಣ ಆಫ್ರಿಕಾ 6 ವಿಕೆಟಿಗೆ 338 ರನ್‌ ರಾಶಿ ಹಾಕಿತು. ಮೊದಲೆರಡು ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಳ್ಳುವ ಹಾದಿಯಲ್ಲಿದ್ದ ಆಸ್ಟ್ರೇಲಿಯ 34.3 ಓವರ್‌ಗಳಲ್ಲಿ 227ಕ್ಕೆ ಆಲೌಟ್‌ ಆಯಿತು.

ಕ್ವಿಂಟನ್‌ ಡಿ ಕಾಕ್‌ (82) ಮತ್ತು ನಾಯಕ ಟೆಂಬ ಬವುಮ (57) ಮೊದಲ ವಿಕೆಟಿಗೆ 22.5 ಓವರ್‌ಗಳಿಂದ 146 ರನ್‌ ಒಟ್ಟುಗೂಡಿಸಿದ ಬಳಿಕ ಐಡನ್‌ ಮಾರ್ಕ್‌ರಮ್‌ ಅಮೋಘ ಬ್ಯಾಟಿಂಗ್‌ ಪ್ರದರ್ಶನವಿತ್ತರು. ಇವರದು ಅಜೇಯ 102 ರನ್‌ ಸಾಧನೆ. 74 ಎಸೆತಗಳ ಈ ಪಂದ್ಯಶ್ರೇಷ್ಠ ಆಟದಲ್ಲಿ 9 ಫೋರ್‌ ಹಾಗೂ 4 ಸಿಕ್ಸರ್‌ ಒಳಗೊಂಡಿತ್ತು.

ಆಸ್ಟ್ರೇಲಿಯದ ಚೇಸಿಂಗ್‌ ಕೂಡ ಭರ್ಜರಿಯಾಗಿತ್ತು. 15 ಓವರ್‌ ಮುಗಿಯುವಷ್ಟರಲ್ಲಿ ಸ್ಕೋರ್‌ 140ಕ್ಕೆ ಏರಿತ್ತು. ಆಗ 78 ರನ್‌ ಮಾಡಿದ ಡೇವಿಡ್‌ ವಾರ್ನರ್‌ ರನೌಟ್‌ ಆದದ್ದು ಪಂದ್ಯಕ್ಕೆ ತಿರುವು ಕೊಟ್ಟಿತು.

Advertisement

Udayavani is now on Telegram. Click here to join our channel and stay updated with the latest news.

Next