Advertisement
“ಶಾರ್ಜಾ ಕ್ರಿಕೆಟ್ ಮೈದಾನ’ದಲ್ಲಿ ಭಾನುವಾರ ರಾತ್ರಿ ನಡೆದ ದ್ವಿತೀಯ ಪಂದ್ಯದಲ್ಲಿ ಆಸ್ಟ್ರೇಲಿಯ 8 ವಿಕೆಟ್‌ಗಳ ಭರ್ಜರಿ ಜಯ ಗಳಿಸಿತು. ಮೊದಲ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 7 ವಿಕೆಟಿಗೆ 284 ರನ್ ದಾಖಲಿಸಿದರೆ, ಆಸ್ಟ್ರೇಲಿಯ 47.5 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 285 ರನ್ ಬಾರಿಸಿತು. ಮೊದಲ ಪಂದ್ಯದಲ್ಲಿ 116 ರನ್ ಗಳಿಸಿ ಮೆರೆದಾಡಿದ ಫಿಂಚ್ ಮತ್ತೂಮ್ಮೆ ಸಿಡಿದು ಜೀವನಶ್ರೇಷ್ಠ ಅಜೇಯ 153 ರನ್ ಬಾರಿಸಿದರು. 143 ಎಸೆತಗಳ ಈ ಇನಿಂಗ್ಸ್‌ನಲ್ಲಿ 11 ಬೌಂಡರಿ, 6 ಸಿಕ್ಸರ್ ಸೇರಿದ್ದವು. 3ನೇ ಶತಕದ ನಿರೀಕ್ಷೆಯಲಿದ್ದ ಖವಾಜ ಕೇವಲ 12 ರನ್‌ಗಳ ಅಂತರದಲ್ಲಿ ಈ ಅವಕಾಶ ಕಳೆದುಕೊಂಡರು. ಖವಾಜ ಗಳಿಕೆ 109 ಎಸೆತಗಳಲ್ಲಿ 88 ರನ್. ಇವರಿಬ್ಬರ ಮೊದಲ ವಿಕೆಟ್ ಜತೆಯಾಟದಲ್ಲಿ 209 ರನ್ ಹರಿದು ಬಂತು. ಇದು ಆಸ್ಟ್ರೇಲಿಯದ ಚೇಸಿಂಗ್ ವೇಳೆ ಆರಂಭಿಕ ಜತೆಯಾಟದಲ್ಲಿ ಒಟ್ಟುಗೂಡಿದ ಅತ್ಯಧಿಕ ರನ್ ಆಗಿದೆ. ಈ ಗೆಲುವಿನ ಮೂಲಕ ಆಸ್ಟೇಲಿಯ ಸತತ 5ನೇ ಜಯ ದಾಖಲಿಸಿದೆ. ಭಾರತದ ವಿರುದ್ಧ ಏಕದಿನ ಸರಣಿಯ ಕೊನೆಯ 3 ಪಂದ್ಯಗಳನ್ನು ಗೆದ್ದು ಸರಣಿ ಜಯಿಸಿತ್ತು.
Advertisement
ಏಕದಿನ: ಪಾಕ್ ವಿರುದ್ಧ ಆಸೀಸ್‌ಗೆ 2-0 ಮುನ್ನಡೆ
09:45 PM Mar 25, 2019 | Sriram |
Advertisement
Udayavani is now on Telegram. Click here to join our channel and stay updated with the latest news.