Advertisement

ಎಚ್ಚರದಿಂದ ಓಡಾಡಿ ಮನಸಿನ ಮಾತಿಗೆ ಕಿವಿಗೊಡಿ

03:45 AM Feb 15, 2017 | Harsha Rao |

– ದೂರದ ನಗರದಲ್ಲಿ ಉದ್ಯೋಗಕ್ಕೆ ಬಂದು ಅಥವಾ ಅನಿವಾರ್ಯ ಕಾರಣಗಳಿಂದಾಗಿ ಏಕಾಂಗಿಯಾಗಿ ಬದುಕಬೇಕಾದ ಪರಿಸ್ಥಿತಿ ಕೆಲವರಿಗೆ ಎದುರಾಗಿರಬಹುದು. ಒಬ್ಬರೇ ಮನೆಯಲ್ಲಿರುವುದು ಕಷ್ಟವಲ್ಲ. ಆದರೆ, ಚುಡಾಯಿಸುವವರು, ಕಾಮುಕರು, ದುಷ್ಕರ್ಮಿಗಳ ಕೆಟ್ಟ ಕಣ್ಣು ಬಿದ್ದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಒಂದಲ್ಲ ಒಂದು ಕಡೆ ರಿಸ್ಕ್ಗಳು, ಸಮಸ್ಯೆಗಳು ನಿಮ್ಮನ್ನು ಎಡತಾಕಬಹುದು. ಹಾಗಾಗಿ, ನಿಮ್ಮ ಸುರಕ್ಷತೆ ದೃಷ್ಟಿಯಿಂದ ಕೆಲ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಒಳ್ಳೆಯದು.

Advertisement

ಕೀಗಳನ್ನು ಇಡುವಾಗ:
ಮನೆಯಿಂದ ಹೊರಹೋಗುವಾಗ ಕೀಗಳನ್ನು ಡೋರ್‌ ಮ್ಯಾಟ್‌ನ ಕೆಳಗೆ, ಹೂಕುಂಡದಲ್ಲಿ, ಕಿಟಕಿ ಬದಿ ಇಟ್ಟು ಹೋಗಬೇಡಿ. ಮನೆಯ ಇತರೆ ಸದಸ್ಯರಿಗೆ ಕೀಯನ್ನು ಕೊಡಬೇಕೆಂದಿದ್ದಲ್ಲಿ, ಒಂದು ನಕಲಿ ಕೀ ಮಾಡಿಸಿಕೊಳ್ಳಿ. ನಕಲಿ ಮಾಡಿಸುವಾಗಲೂ ಅತ್ಯಂತ ಜಾಗ್ರತೆ ವಹಿಸಿ. ಕೀ ಮಾಡಿಕೊಡುವ ವ್ಯಕ್ತಿಗೆ ನಿಮ್ಮ ಮನೆ ಯಾವುದೆಂದು ತಿಳಿಯದಂತೆ ನೋಡಿಕೊಳ್ಳಿ.

ನಿಗಾ ವಹಿಸಿ:
ಬಾಗಿಲು ಹಾಕುವ ವೇಳೆ ಅತ್ತಿತ್ತ ಒಮ್ಮೆ ಕಣ್ಣಾಡಿಸಿ. ನಿಮ್ಮನ್ನು ಯಾರೂ ಗಮನಿಸುತ್ತಿಲ್ಲ ಎಂಬುದು ದೃಢವಾದ ಬಳಿಕವೇ ಮುಂದಿನ ಹೆಜ್ಜೆಯಿಡಿ. ಯಾವಾಗಲೂ ಇಯರ್‌ ಫೋನ್‌ ಹಾಕಿಕೊಂಡು ಲೋಕದ ಪರಿವೆಯೇ ಇಲ್ಲದಂತೆ ಸಂಚರಿಸುವುದು ಬಹಳ ಅಪಾಯಕಾರಿ.

 ಮನಸ್ಸಿನ ಮಾತಿಗೆ ಕಿವಿಗೊಡಿ
ಕೆಲವೊಮ್ಮೆ ಏನೋ ಅಪಾಯದ ಸಾಧ್ಯತೆಯಿದೆ ಎಂಬ ಸುಳಿವನ್ನು ನಿಮ್ಮ ಮನಸ್ಸೇ ನೀಡಬಹುದು. ಆಗ ನಿರ್ಲಕ್ಷÂ ವಹಿಸಬೇಡಿ. ಮನೆಗೆ ನಡೆದುಕೊಂಡು ಹೋಗುವುದು, ಹಿಂದಿನಿಂದ ಆಗಮಿಸುತ್ತಿರುವ ವ್ಯಕ್ತಿ, ಆ ಪ್ರದೇಶ… ಹೀಗೆ ಏನೇ ಆಗಲಿ ಸರಿಯಿಲ್ಲ ಎಂಬ ಭಾವನೆ ಬಂದೊಡನೆ, ಪರ್ಯಾಯ ಮಾರ್ಗದ ಬಗ್ಗೆ ಯೋಚಿಸಿ, ಮುನ್ನೆಚ್ಚರಿಕೆ ಕ್ರಮ ವಹಿಸಿ.

ಸಾಕು ಪ್ರಾಣಿಗಳಿರಲಿ:
ಡಾಗ್‌ ಈಸ್‌ ಮ್ಯಾನ್ಸ್‌ ಬೆಸ್ಟ್‌ ಫ್ರೆಂಡ್‌ ಎಂಬ ಮಾತಿದೆ. ಏಕಾಂಗಿಯಾಗಿ ಇರುವವರಿಗಂತೂ ಸಾಕು ಪ್ರಾಣಿಗಳು ಹೆಚ್ಚು ಹಿತವನ್ನೂ, ರಕ್ಷಣೆಯನ್ನೂ ನೀಡುತ್ತವೆ. ಹಾಗಾಗಿ, ನಾಯಿ, ಬೆಕ್ಕಿನಂಥ ಪ್ರಾಣಿಗಳನ್ನು ಮನೆಯಲ್ಲಿಟ್ಟುಕೊಳ್ಳಿ. ಅವುಗಳ ಸೂಕ್ಷ¾ ಪ್ರಜ್ಞೆ ಹಾಗೂ ವರ್ತನೆಯು ಹೆಚ್ಚಿನ ಸಂದರ್ಭಗಳಲ್ಲಿ ಅಪಾಯವನ್ನು ಗ್ರಹಿಸಲು ಸಹಕಾರಿ.

Advertisement

ಸಣ್ಣ ಪುಟ್ಟ ನಾಟಕಗಳು
ಒಬ್ಬರೇ ಇರುವಾಗ ದುಷ್ಕರ್ಮಿಗಳಿಂದ ರಕ್ಷಿಸಿಕೊಳ್ಳಲು ಕೆಲವೊಂದು ನಾಟಕಗಳನ್ನು ಮಾಡಬೇಕಾಗುತ್ತದೆ. ಮನೆಯಲ್ಲಿ ಒಬ್ಬರೇ ಇದ್ದರೂ, ಹೊರಗೆ ಒಂದೆರಡು ಜೋಡಿ ಶೂಗಳು, ಚಪ್ಪಲಿಗಳನ್ನು ಇಟ್ಟುಬಿಡಿ. ಒಳಗಿರುವುದು ನೀವೊಬ್ಬರೇ ಅಲ್ಲ ಎಂಬ ಭಾವನೆ ಬರುವಂತೆ ಮಾಡಿ. ರಾತ್ರಿ ಹೊತ್ತು ನೀವು ಕುಳಿತಿರುವ ಕೋಣೆಯ ದೀಪವನ್ನಷ್ಟೇ ಹಾಕಿಡಬೇಡಿ. ಅಕ್ಕ-ಪಕ್ಕದ ಕೋಣೆಯಲ್ಲೂ ದೀಪ ಉರಿಯುತ್ತಿರಲಿ. ಹೊರಗೆ ಏನಾದರೂ ಶಬ್ದವಾದರೆ, ಯಾರೋ ನಿಮ್ಮ ಮನೆ ಬಾಗಿಲಿಗೆ ಬಂದಿ¨ªಾರೆ ಎಂದು ಅನಿಸಿದರೆ, ಕೂಡಲೇ ಮನೆಯೊಳಗಿನ ಯಾರನ್ನೋ ಕೂಗಿ ಕರೆದಂತೆ ಸುಮ್ಮನೆ ನಟಿಸಿ. ಇಂಥ ನಾಟಕಗಳು ನಿಮ್ಮನ್ನು ಹಲವು ಬಾರಿ ಅಪಾಯದಿಂದ ರಕ್ಷಿಸಬಲ್ಲವು.

Advertisement

Udayavani is now on Telegram. Click here to join our channel and stay updated with the latest news.

Next