Advertisement
ಮುಂದೆ ಸಾಲು ಸಾಲು ಚಿತ್ರಗಳು ಬಿಡುಗಡೆಯಾಗುವುದು ಖಚಿತ. ಅಕ್ಟೋಬರ್ 6ರಂದು ಐದು ಸಿನಿಮಾಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ. ಈ ಐದು ಸಿನಿಮಾಗಳಲ್ಲಿ ಕೆಲವು ಸಿನಿಮಾಗಳು ನಾನಾ ಕಾರಣಗಳಿಗಾಗಿ ಗಮನ ಸೆಳೆದಿದೆ. ಅಕ್ಟೋಬರ್ 6 ರಂದು ತೆರೆಗೆ ಬರುತ್ತಿರುವ ಐದು ಸಿನಿಮಾಗಳ ವಿವರ ಇಲ್ಲಿವೆ …
Related Articles
Advertisement
ಆ ಚಿತ್ರ ನೋಡಿದಾಗ ಈ ಪಾತ್ರವನ್ನು ತಾನು ಮಾಡಬಹುದು ಮತ್ತು ತನಗೆ ಹೊಂದಿಕೆಯಾಗುತ್ತದೆಂದೆನಿಸಿ ಈಗ ಆ ಚಿತ್ರವನ್ನು ರೀಮೇಕ್ ಮಾಡಿದ್ದಾರೆ. ಸಣ್ಣ ಸಣ್ಣ ವಿಚಾರಕ್ಕೆ ಕೋಪ ಮಾಡಿಕೊಂಡರೆ ಏನೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬ ಅಂಶದೊಂದಿಗೆ ಚಿತ್ರ ಸಾಗುತ್ತದೆಯಂತೆ. ಇದರಲ್ಲಿ ಭುವನ್ ಚಂದ್ರ ಕಿಡಿಕಾರುವ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ರಘು ನಿರ್ದೇಶಿಸಿದ್ದಾರೆ.
ಸುಮಾರು 15 ವರ್ಷಗಳ ಕಾಲ ಕೊರಿಯೋಗ್ರಾಫರ್ ಆಗಿದ್ದ ರಘ “ಕಿಡಿ’ ಮೂಲಕ ನಿರ್ದೇಶಕರಾಗಿದ್ದಾರೆ. ಚಿತ್ರವನ್ನು ನಾಗರಾಜು, ಮಲ್ಲಿಕಾರ್ಜುನ ಮತ್ತು ಧನಂಜಯ ಸೇರಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ವಿಲನ್‌ಗಳಾಗಿ “ಉಗ್ರಂ’ ಮಂಜು ಹಾಗೂ ಡ್ಯಾನಿ ಕುಟ್ಟಪ್ಪ ನಟಿಸಿದ್ದಾರೆ. ಈ ಚಿತ್ರದ ಹಾಡುಗಳಿಗೆ ಎಮಿಲ್ ಸಂಗೀತ ಸಂಯೊಜನೆ ಮಾಡಿದ್ದಾರೆ. ವಿ.ನಾಗೇಂದ್ರಪ್ರಸಾದ್, ಕೆ.ಕಲ್ಯಾಣ್, ಲೋಕೇಶ್, ಕವಿರಾಜ್ ಸಾಹಿತ್ಯ ರಚನೆ ಮಾಡಿದ್ದಾರೆ.
ವೈರ : ಈ ಹಿಂದೆ “ರಥಾವರ’ ನಿರ್ಮಿಸಿದ್ದ ಧರ್ಮಶ್ರೀ ಮಂಜುನಾಥ್ ನಿರ್ಮಿಸಿರುವ “ವೈರ’ ಕೂಡಾ ಅಕ್ಟೋಬರ್ 6 ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ ಮತ್ತು ನಿರ್ದೇಶನದ ಹೊಣೆಯನ್ನು ನವರಸನ್ ನಿಭಾಯಿಸಿದ್ದಾರೆ. ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ನಾಯಕನಾಗಿಯೂ ನವರಸನ್ ಕಾಣಿಸಿಕೊಂಡಿರೋದು ವಿಶೇಷ. ಈ ಚಿತ್ರ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಎಲಿಮೆಂಟ್ ಹೊಂದಿದೆ.
ನಿತಿನ್ ಛಾಯಾಗ್ರಹಣ ಮತ್ತು ರವಿ ಬಸ್ರೂರ್ ಸಂಗಿತ ಈ ಚಿತ್ರಕ್ಕಿದೆ. ಧರ್ಮಶ್ರೀ ಎಂಟರ್ ಪ್ರೈಸಸ್ ಮತ್ತು ಗೀತಾ ಎಂಟರ್ ಟೈನರ್ ಅಡಿಯಲ್ಲಿ ತಯಾರಾಗಿರೋ ಈ ಚಿತ್ರಕ್ಕೆ ಮಹೇಶ್ ಸಂಕಲನ, ಅಲ್ಟಿಮೇಟ್ ಶಿವು ಸಾಹಸ, ರವಿ ಪೂಜಾರ್ ಕಲೆ ಹಾಗೂ ಕಿನಾಲ್ ರಾಜ್ ಗೀತ ರಚನೆ ಇದೆ. ನವರಸನ್, ಪ್ರಿಯಾಂಕಾ ಮಲ್ನಾಡ್, ಕೆಂಪೇಗೌಡ, ತಬಲಾ ನಾಣಿ, ಕೌತಾರ್, ಮಂಜುಳಾ, ಹ್ಯಾರಿ ಮುಂತಾದವರ ತಾರಾಗಣ ಈ ಚಿತ್ರದಲ್ಲಿದೆ.
ಲಕ್ಷ್ಮೀನಾರಾಯಣರ ಪ್ರಪಂಚನೇ ಬೇರೆ: ವಿನಯಪ್ರಸಾದ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಹಿರಿಯ ನಟಿ ವಿನಯಾ ಪ್ರಸಾದ್ ಹಾಗೂ ಜ್ಯೋತಿ ಪ್ರಕಾಶ್ ಅತ್ರೆ ಅವರು ನಿರ್ಮಿಸಿರುವ ಚಿತ್ರ “ಲಕ್ಷ್ಮೀನಾರಾಯಣರ ಪ್ರಪಂಚನೇ ಬೇರೆ ಚಿತ್ರ ಅಕ್ಟೋಬರ್ 6 ರಂದು ತೆರೆಗೆ ಬರುತ್ತಿದೆ. ವಿನಯಾ ಪ್ರಸಾದ್ ಚೊಚ್ಚಲ ನಿರ್ದೇಶನದ ಈ ಚಿತ್ರಕ್ಕೆ ಜೆ.ಜೆ.ಕೃಷ್ಣ ಅವರ ಛಾಯಾಗ್ರಹಣವಿದೆ.
ಈ ಹಾಸ್ಯಭರಿತ ಕೌಟುಂಬಿಕ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಜ್ಯೋತಿ ಪ್ರಕಾಶ್ ಅತ್ರೆ ಅವರು ಸಂಗೀತ ನಿರ್ದೇಶನ ಹಾಗೂ ಕ್ರಿಯಾತ್ಮಕ ನಿರ್ದೇಶನ ಸಹ ಮಾಡಿದ್ದಾರೆ. ಮಂಜುನಾಥ್ ಹೆಗಡೆ, ವಿನಯಾ ಪ್ರಸಾದ್, ಜ್ಯೋತಿ ಪ್ರಕಾಶ್ ಅತ್ರೆ, ಪ್ರಥಮ ಪ್ರಸಾದ್ ರಾವ್, ಋತು, ಶೈಲಜಾ ಜೋಶಿ, ದೀಪಕ್ ಕುಮಾರ್ ಜೆ.ಕೆ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಏಪ್ರಿಲ್‌ನ ಹಿಮ ಬಿಂದು: ಶಿವ ಜಗನ್ ನಿರ್ದೇಶನದ “ಏಪ್ರಿಲ್‌ನ ಹಿಮಬಿಂದು’ ಚಿತ್ರ ಕೂಡಾ ಅಕ್ಟೋಬರ್ 6ರಂದು ತೆರೆಗೆ ಬರುತ್ತಿದೆ. ಹಿರಿಯ ನಟ ದತ್ತಣ್ಣ ಮುಖ್ಯಭೂಮಿಕೆಯಲ್ಲಿರೋ ಈ ಚಿತ್ರ ನವಿರಾದೊಂದು ಕಾಡುವ ಕಥಾ ಎಳೆ ಹೊಂದಿದೆ.. ಅಂದಹಾಗೆ ನಿರ್ದೇಶಕ ಶಿವ ಜಗನ್ ಬದುಕಿನಲ್ಲಿ ಕಂಡ ಮತ್ತು ಖುದ್ದಾಗಿ ಅನುಭವಿಸಿದ ಘಟನಾವಳಿಗಳನ್ನಿಟ್ಟುಕೊಂಡೇ ಈ ಚಿತ್ರವನ್ನು ರೂಪಿಸಿದ್ದಾರಂತೆ.
ಶಿವು ಜಗನ್ ಅಸೋಸಿಯೇಷನ್ ಅಡಿಯಲ್ಲಿ ನಿರ್ಮಾಣಗೊಂಡಿರೋ ಈ ಚಿತ್ರಕ್ಕೆ ಭರತ್ ಸಂಗೀತ ನಿರ್ದೇಶನ ಇದೆ. ದತ್ತಣ್ಣ, ಶ್ರೀಧರ್, ಬಾಬು ಹಿರಣ್ಣಯ್ಯ, ದತ್ತಣ್ಣನ ಸಹೋದರ ಸೋಮಶೇಖರ ರಾವ್, ಸಚಿನ್, ಗಣೇಶ್, ಮುತ್ತಣ್ಣ, ಚಿದಾನಂದ, ಚಂದನಾ, ಶ್ವೇತಾ, ಸ್ಪಂದನಾ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.