Advertisement
ಸಕ್ಕರೆ ಬೆರೆಸದೆ ಕುಡಿದರೆ, ಸಕ್ಕರೆ ಕಾಯಿಲೆ ಹತೋಟಿಗೆ ಬರುತ್ತದೆ. ಮಹಿಳೆಯರಿಗೆ ಬೇಕಾದ ಫೋಲೇಟ್, ನಿಯಾಸಿನ್, ವಿಟಮಿನ್-ಇ ಪೋಷಕಾಂಶಗಳು ಇದರಲ್ಲಿದೆ. ಜತೆಗೆ ಮುಟ್ಟಿನ ಹೊಟ್ಟೆ ನೋವು ನಿವಾರಣೆಗೆ ಇದು ಅತ್ಯುತ್ತಮ ಔಷಧವಾಗಿದ್ದು, ಅನೇಕ ಹೆಣ್ಣು ಮಕ್ಕಳು ಮಟ್ಟಾಗುವ ಸಂದರ್ಭದಲ್ಲಿ ಅತಿಯಾದ ಹೊಟ್ಟೆ ನೋವನ್ನು ಅನುಭವಿಸುತ್ತಾರೆ. ಅಂಥವರು ಮುಟ್ಟಿನ ದಿನ ಸಮೀಪ ಬಂದಾಗ ನೀರಿಗೆ ತಂಪು ಬೀಜ ಹಾಕಿ ಕುಡಿಯುತ್ತ ಇದ್ದರೆ ಹೊಟ್ಟೆ ನೋವು ನಿವಾರಣೆಯಾಗುತ್ತದೆ.
ಅಧಿಕ ಕೊಲೆಸ್ಟ್ರಾಲ್ ಮಟ್ಟ ಮತ್ತು ಅಧಿಕ ರಕ್ತದೊತ್ತಡವು ಹೃದಯದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದರಿಂದ ಪ್ರತಿದಿನ ಕಾಮ ಕಸ್ತೂರಿ ಬೀಜಗಳನ್ನು ನೆನಸಿ ಸೇವಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು.
Related Articles
Advertisement
ಒತ್ತಡ ನಿವಾರಣೆ: ಒತ್ತಡ ನಿವಾರಕವಾಗಿಯೂ ಕಾಮ ಕಸ್ತೂರಿ ಸಹಕಾರಿ. ಮಾನಸಿಕ ಒತ್ತಡ ಮತ್ತು ಖನ್ನತೆಯಿಂದ ಬಳಲುವವರ ಚಿಕಿತ್ಸೆಗಾಗಿ ಕಾಮಕಸ್ತೂರಿಬೀಜಗಳನ್ನು ಬಳಸಲಾಗುತ್ತದೆ. ಜೀರ್ಣಕ್ರಿಯೆಗೆ ಸಹಕಾರಿ
ಕಾಮ ಕಸ್ತೂರಿಯಲ್ಲಿರುವ ನಾರಿನಾಂಶ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಉದರ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ಜತೆಗೆ ಮಲಬದ್ಧತೆ ಮತ್ತು
ಭೇದಿ ನಿವಾರಿಸಲು ಸಹಾಯಕವಾಗಿದೆ.