Advertisement
ಅಭಿವೃದ್ಧಿಗೆ ಒಂದೇ ದೃಷ್ಟಿಕೋನ ಎನ್ನುವ ಪಥದಲ್ಲಿ ಹೊರಟ ಅದೆಷ್ಟೋ ನಗರಗಳು ಇಂದು ಅಡ್ಡ ಪರಿಣಾಮಗಳನ್ನು ಅನುಭವಿಸುತ್ತಿವೆ. ಮುಂಬಯಿ, ಹೊಸದಿಲ್ಲಿ, ಬೆಂಗಳೂರು ಮುಂತಾದ ನಗರಗಳಲ್ಲಿ ನಗರ ಜೀವನ ನರಕ ಎನ್ನುವಂತಹ ವಾತಾವರಣವನ್ನು ಸೃಷ್ಟಿಸಿದೆ. ಇದಕ್ಕೆ ಕಾರಣ ಹೊರಟರೆ ಹಲವಾರು ಹೆಸರಿಸಬಹುದು. ಸದ್ಯ ಬೆಳೆಯತ್ತಿರುವ ನಗರಗಳಿಗೆ ಇದೊಂದು ಎಚ್ಚರಿಕೆಯ ಕರೆಗಂಟೆ ಇದ್ದಂತೆ. ಮುಂದಿನ ದಿನಗಳಲ್ಲಿನ ನಗರದ ಕಲ್ಪನೆಗೆ ಯಾವ ಅಂಶವನ್ನು ಸೇರಿಸಬೇಕೆನ್ನುವ ಪ್ರಬಲ ಸೂತ್ರವಿದ್ದಂತೆ. ಅಭಿವೃದ್ಧಿ ಹುಚ್ಚು ವೇಗದಲ್ಲಿ ನಾವು ಪರಿಸರವನ್ನು ಹಾಳುಗಡೆವಿ, ಅಸಮಪರ್ಕವಾಗಿ ಬಳಸಿಕೊಳ್ಳುತ್ತಿದ್ದೇವೆ ಇದರಿಂದ ಸುಸ್ಥಿರವಾದ ಬದುಕು ವಿನಾಶವಾಗುತ್ತದೆ ಎಂಬ ಎಚ್ಚರವೂ ಕೂಡ ನಮಗಿಲ್ಲ.
ಈ 4 ಓಷನ್ ಮೊಬೈಲ್ ಸ್ಕಿಮ್ಮರ್ ಎನ್ನುವ ತಂತ್ರಜ್ಞಾನ ಸಮುದ್ರದಲ್ಲಿನ ಪ್ಲಾಸ್ಟಿಕ್ ನಿರ್ಮೂಲನೆಗಾಗಿ ನಿರ್ಮಿತಗೊಂಡಿದೆ.ಮನುಷ್ಯ ಮಾಡಿಟ್ಟ ಬೇಜಾವಾಬ್ದಾರಿತನದಿಂದ ಸಮುದ್ರದಲ್ಲಿ ಪ್ಲಾಸ್ಟಿಕ್ ವಲಯ ಉಂಟಾಗಿದೆ ಅದೆಷ್ಟೋ ಸಮುದ್ರದ ಜೀವಿಗಳು ಪ್ಲಾಸ್ಟಿಕ್, ಬಾಟಲ್‌ಗಳನ್ನು ತಿಂದು ಸಾವೀಗೀಡಾಗುತ್ತಿದೆ, ಸಮುದ್ರದ ಸೌಂದರ್ಯ ಪ್ಲಾಸ್ಟಿಕ್ ಭೂತ ಹಾಳುಗೆಡವುತ್ತಿವೆ. ಮನುಷ್ಯನೇ ಮಾಡಿಟ್ಟ ಸಮಸ್ಯೆಗೆ ಪರಿಹಾರ ಕಂಡುಕೊಂಡದ್ದು ಈ 4 ಓಷನ್ ಮೊಬೈಲ್ ಸ್ಕಿಮ್ಮರ್ ಮೂಲಕ. ಸಮುದ್ರದಲ್ಲಿನ ಪ್ಲಾಸ್ಟಿಕ್‌ಗಳನ್ನು ಚಿತ್ರದಲ್ಲಿ ಕಾಣುವಂತೆ ತನ್ನ ಅಗಲದ ಕೈಗಳಿಂದ ಬಾಚಿ ಸೋಸಿ ಸಮುದ್ರವನ್ನು ಪ್ಲಾಸ್ಟಿಕ್ ಸ್ವಚ್ಛಗೊಳಿಸುತ್ತಿವೆ.
Related Articles
Advertisement
ಪ್ಲಾಸ್ಟಿಕ್ ಮಾರಕಪ್ಲಾಸ್ಟಿಕ್ ಎಷ್ಟು ಮಾರಕವೆನ್ನುವುದು ಮನುಷ್ಯನಿಗೆ ಗೊತ್ತಿದ್ದರೂ ಅದರ ಅರಿವಾದದ್ದು ತುಂಬಾ ತಡವಾಗಿ ದೇಶ ವಿದೇಶದಲ್ಲಿ ಪ್ಲಾಸ್ಟಿಕ್ ಬಗ್ಗೆ ಬಹು ಗಂಭೀರವಾದ ಆಕ್ರೋಶ,ಚರ್ಚೆ, ಅಭಿಯಾನ ಎಲ್ಲಾ ಮೂಲೆಗಳನ್ನು ತಟ್ಟುತ್ತಿವೆ. ಪ್ಲಾಸ್ಟಕ್ ವಿರೋಧಿಸಿ ಅಭಿಯಾನ ಕೇವಲ ಮಾತಿಗಷ್ಟೇ ಸೀಮಿತವಾಗದೆ ಹೊಸ ಹೊಸ ಆವಿಷ್ಕಾರಗಳು ಪ್ಲಾಸ್ಟಿಕ್ ವಿರುದ್ಧವಾಗಬೇಕು. ಇಂತಹ ತಂತ್ರಜ್ಞಾನಗಳು ತಡವಾಗದೆ ನಮ್ಮ ನಗರವನ್ನು ಪ್ರವೇಶಿಸಬೇಕು. ಸಮಸ್ಯೆಯನ್ನು ಈಗಲೇ ಹೋಗಲಾಡಿಸುವಂತಹ ಎಲ್ಲದ ಕ್ರಮಗಳಿಗೆ ನಾವು ಸಿದ್ಧರಾಗಬೇಕು. ಪ್ಲಾಸ್ಟಿಕ್ ಕೇವಲ ಇದುಮಾರಕವಷ್ಟೇ ಅಲ್ಲ, ಇಡೀ ಜೀವಿ ಸಂಕುಲವನ್ನು ನಾಶದತ್ತ ಹೋಗುವಂತೆ ಮಾಡುತ್ತದೆ. ಪ್ಲಾಸ್ಟಿಕ್, ಕಟ್ಟಡ ತ್ಯಾಜ್ಯದತ್ತ ವಿನಾಶಕಾರಿ ವಸ್ತುಗಳನ್ನು ಸಮುದ್ರಕ್ಕೆ ಎಸೆಯುವುದರಿಂದ ಸಮುದ್ರದ ಜೀವ ಸಂಕುಲಕ್ಕೂ ಹಾಗೂ ಜಲಚರ ಜೀವಿಗಳಿಗೂ ತೊಂದರೆಯಾಗುತ್ತದೆ. ಅವುಗಳ ಪ್ರಾಣಕ್ಕೆ ಅಪಾಯವಾಗುತ್ತದೆ. ನಮ್ಮ ನಗರಕ್ಕೂ ಬರಲಿ
ನಗರವೆಂದು ಗುರುತಿಸಿಕೊಂಡಿರುವ ಅನೇಕ ನಗರಗಳು ಸಮುದ್ರಕ್ಕೆ ಅಂಟಿಕೊಂಡೇ ನಿರ್ಮಾಣವಾಗಿವೆ. ನಗರಾಡಳಿತ ಮಂಡಳಿಗಳು ಎಲ್ಲಾ ಸ್ತರದಲ್ಲೂ ಯೋಚಿಸುವಂತೆ ನಗರದ ಬೆಳವಣಿಗೆಗೆ ಸಮುದ್ರವನ್ನು ಕೈ ಬಿಡದೆ ಸಮುದ್ರದ ಸಮಸ್ಯೆಗಳಿಗೆ ಇಂತಹ ಯೋಜಿತ ತಂತ್ರಜ್ಞಾನವನ್ನು ಪರಿಚಯಿಸುವ ಮೂಲಕ ಕಿವಿಯಾಗಬೇಕು. - ವಿಶ್ವಾಸ್ ಅಡ್ಯಾರು