Advertisement

ಯತಿಗಳಿಂದ ತಾತ್ಕಾಲಿಕ ಉಪನಗರಗಳ ವೀಕ್ಷಣೆ

03:31 PM Nov 27, 2017 | Team Udayavani |

ಚನ್ನರಾಯಪಟ್ಟಣ: 2018ರ ಮಹಾಮಸ್ತಕಾಭಿಷೇಕ ಮಹೋತ್ಸವದ ಅಂಗವಾಗಿ ನಿರ್ಮಾಣವಾಗುತ್ತಿರುವ ತಾತ್ಕಾಲಿಕ ಉಪನಗರಗಳಾದ ತ್ಯಾಗಿ ನಗರ, ಪಂಚಕಲ್ಯಾಣ ನಗರ, ಕಳಶಾನಗರವನ್ನು ಆಚಾರ್ಯ ವರ್ಧಮಾನಸಾಗರ ಮಹಾರಾಜರು ನೇತೃತ್ವದಲ್ಲಿ ಯತಿಗಳು ಹಾಗೂ ಮಾತಾಜಿಯವರು, ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಶಾಸಕ ಸಿ.ಎನ್‌.ಬಾಲಕೃಷ್ಣರೊಂದಿಗೆ ವೀಕ್ಷಿಸಿ ಕೆಲವು ಮಾರ್ಪಾಡುಗಳನ್ನು ಕೆಆರ್‌ಡಿಸಿಐಎಲ್‌ ಅಭಿಯಂತರಿಗೆ ಸೂಚಿಸಿದರು.

Advertisement

ಭಾನುವಾರ ಬೆಳಗ್ಗೆ ಶ್ರೀ ಮಠದಿಂದ ಕಾಲ್ನಡಿಗೆಯಲ್ಲಿ ಶ್ರವಣಬೆಳಗೊಳದಿಂದ ಹಿರೀಸಾವೆ ಬೆಂಗಳೂರು ಮಾರ್ಗದ ರಸ್ತೆಯ ಸಮೀಪದಲ್ಲಿರುವ ಹೊಸಹಳ್ಳಿ ಬಳಿ ನಿರ್ಮಾಣವಾಗುತ್ತಿರುವ ತಾತ್ಕಾಲಿಕ ಉಪನಗರಗಳ ಸ್ಥಳಕ್ಕೆ ಭೇಟಿ ನೀಡಿದ ಯತಿಗಳು ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಲಕ್ಷಾಂತರ ಜನ ಸೇರಲಿದ್ದು ಸರ್ಕಾರದವತಿಯಿಂದ ಯತಿಗಳು, ಮುನಿವರ್ಯರು, ಮಾತಾಜಿಗಳು, ಭಕ್ತರ ಉಳಿಯುವಿಕೆಗಾಗಿ 12 ತಾತ್ಕಾಲಿಕ ಉಪನಗರಗಳನ್ನು ನಿರ್ಮಿಸುತ್ತಿದ್ದು 28 ಸಾವಿರಕ್ಕೂ ಹೆಚ್ಚು ಜನ ಉಳಿಯುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು.

ಒಟ್ಟು 75 ಕೋಟಿ ವೆಚ್ಚದಲ್ಲಿ 12 ಉಪನಗರಗಳ ನಿರ್ಮಾಣ: 75 ಕೊಟಿ ವೆಚ್ಚದಲ್ಲಿ 12 ತಾತ್ಕಾಲಿಕ ಉಪನಗರಗಳನ್ನು ನಿರ್ಮಿಸುತ್ತಿದ್ದು. ಇದರ ಜವಬ್ದಾರಿಯನ್ನು ಕೆಆರ್‌ಡಿಸಿಐಎಲ್‌ಗೆ ವಹಿಸಲಾಗಿದೆ. ಈಗಾಗಲೇ 494 ಎಕರೆ ಜಮೀನಿನ ರೈತರಿಗೆ ಬೆಳೆಪರಿಹಾರ ನೀಡಿದ್ದು, ಕೊಳವೆ ಬಾವಿಯ ಪೈಪ್‌ಲೈನ್‌ ಇರುವ ರೈತರಿಗೆ ಪ್ರತ್ಯೇಕ ಪರಿಹಾರ ಹಾಗೂ ಕಾರ್ಯಕ್ರಮ ಮುಗಿದ ನಂತರ ಒಂದು ಗುಂಟೆಗೆ 100 ರೂ.ಗಳಂತೆ ಜಮೀನಿಗೆ ಬದು ನಿರ್ಮಿಸಲು ಹಣ ನೀಡಲಾಗಿದೆ ಎಂದು ತಿಳಿಸಿದರು.

ಬೃಹತ್‌ ವೇದಿಕೆ ನಿರ್ಮಾಣ: ತ್ಯಾಗಿನಗರ, ಪಂಚಕಲ್ಯಾಣ ನಗರ, ಎರಡು ಕಳಸಾನಗರಗಳು, ಅಧಿಕಾರಿಗಳ ನಗರ, ಸ್ವಯಂ ಸೇವಕ ನಗರ, ಜನಪ್ರತಿನಿಧಿಗಳ ನಗರ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಸ್ತುಪ್ರದರ್ಶನ,
ಬೋಜನಾಲಯ, ಮಾಧ್ಯಮ ನಗರ, ಪೊಲೀಸ್‌, ಅಗ್ನಿ ಶಾಮಕ, ವಾಹನ ನಿಲಾœಣ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಇನ್ನೂ ಮುಂತಾದ 12 ಉಪ ನಗರಗಳನ್ನು ನಿರ್ಮಿಸುತ್ತಿದ್ದು 1 ಲಕ್ಷ ಚದರ ಅಡಿಯಲ್ಲಿ ಮುಖ್ಯ ಸಭಾಂಗಣವನ್ನು ನಿರ್ಮಿಸುವ ಯೋಜೆನೆಯಿದೆ, ಅಂದರೆ 210 ಅಡಿ ಅಗಲ 600 ಅಡಿ ಉದ್ದದ ಬೃಹತ್‌ ವೇದಿಕೆಯನ್ನು ನಿರ್ಮಾಣ ಮಾಡಲಾಗುತ್ತದೆ.

ಧೂಳು ಏಳದಂತೆ ಕ್ರಮಕ್ಕೆ ಸೂಚನೆ: ರಸ್ತೆಗಳಲ್ಲಿ ಹೆಚ್ಚು ಧೂಳು ಏಳದಂತೆ ನಿರಂತರವಾಗಿ ನೀರು ಹಾಯಿಸುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸದರು. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಶಾಸಕರ ನೇತೃತ್ವದಲ್ಲಿ
ಪ್ರತಿದಿನ ಮುಂಜಾನೆ ಅಧಿಕಾರಿಗಳು ಇಲ್ಲಿಯೇ ವಾಯುವಿಹಾರ ಮಾಡುವಂತೆ ತಿಳಿಸಿದರು.

Advertisement

ಈ ವೇಳೆ ಸ್ಥಳದಲ್ಲಿ ಮಹಾಮಸ್ತಾಕಾಭಿಷೇಕ ವಿಶೇಷಾಧಿಕಾರಿ ಬಿ.ಎನ್‌. ವರಪ್ರಸಾದರೆಡ್ಡಿ ಕೆಆರ್‌ ಡಿಸಿಐಎಲ್‌ನ್‌ ಮುಖ್ಯ ಅಭಿಯಂತರಾದ ಎಸ್‌ .ಸಿ.ಪುಟ್ಟಸ್ವಾಮಿ, ಸಹಾಯಕ ಅಭಿಯಂತರಾದ ಪ್ರಸನ್ನ ಇನ್ನೂ ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದ ಮಾರ್ಪಾಡನ್ನು ಗುರುತುಹಾಕಿಕೊಂಡರು. ಮಹಾಮಸ್ತಕಾಭಿಷೇಕದ ವಸತಿ ಉಪಸಮಿತಿ ಅಧ್ಯಕ್ಷ ಅನಿಲ್‌ ಸೇಠ್ಠ, ಶಾಸಕ ಸಿ.ಎನ್‌.ಬಾಲಕೃಷ್ಣ, ಗುತ್ತಿಗೆದಾರ ಸೋಮೇಶ್‌, ರಾಜಸ್ವ ನಿರೀಕ್ಷಕ ಮೋಹನ್‌ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next