Advertisement

ಜಲಿಯನ್ ‌ವಾಲಾಬಾಗ್‌ ಗ್ಯಾಲರಿಯಲ್ಲಿ ಅರೆ ನಗ್ನ ಫೋಟೋ ಪ್ರದರ್ಶನಕ್ಕೆ ಆಕ್ಷೇಪ

02:00 PM Jul 21, 2020 | mahesh |

ಅಮೃತಸರ: ಜಲಿಯನ್‌ವಾಲಾ ಬಾಗ್‌ನ ನವೀ ಕರಿಸಿದ ಫೋಟೊ ಗ್ಯಾಲರಿಯಲ್ಲಿ ಎರಡು ಅರೆ ಬೆತ್ತಲೆ ಮಹಿಳೆಯರ ಭಾವಚಿತ್ರ ಇಡಲಾಗಿದ್ದು, ಇದು ವಿವಾದಕ್ಕೆ ಕಾರಣವಾ ಗಿದೆ. ಈ ಭಾವ ಚಿತ್ರಗಳು ಅಜಂತಾ ಮತ್ತು ಎಲ್ಲೋರಾ ಗುಹೆ ಗಳಲ್ಲಿ ಚಿತ್ರಿಸಲಾದ ಶಿಲ್ಪ ಕಲೆಯ ಕೆತ್ತನೆಯನ್ನು ಹೋಲುತ್ತವೆ.

Advertisement

ಅಂತಾರಾಷ್ಟ್ರೀಯ ಸರ್ವ್‌ ಕಾಂಬೋಜ್‌ ಸಮಾಜದ ಅಧ್ಯಕ್ಷ ಬಾಬಿ ಕಾಂಬೋಜ್‌ ಅವರು ಈ ಸಂಬಂಧ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ಹಾಗೂ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರಿಗೆ ಪತ್ರ ಬರೆದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ವೀರರು, ಸಿಖ್‌ ಧರ್ಮ ಸಂಸ್ಥಾಪಕ ಗುರು ನಾನಕ್‌ ದೇವ್‌ ಅವರಂತಹ ಮಹನೀಯರ ಭಾವಚಿತ್ರಗಳಿರುವ ಜಾಗದಲ್ಲಿ ಇಂತಹ ಅರೆನಗ್ನ ಮಹಿಳೆಯರ ಭಾವ ಚಿತ್ರಗಳನ್ನು ಇಟ್ಟಿ ರುವುದು ಅವಮಾನಕರ. ತಕ್ಷಣವೇ ಇವುಗಳ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದ್ದಾರೆ. ನವೀಕರಣದ ಉಸ್ತುವಾರಿ, ಸಂಸದ, ಜಲಿಯನ್‌ವಾಲಾ ಬಾಗ್‌ ಸ್ಮಾರಕ ಟ್ರಸ್ಟ್‌ನ ಟ್ರಸ್ಟಿ, ಶ್ವೇತ್‌ ಮಲ್ಲಿಕ್‌ ಈ ಬಗ್ಗೆ ಪ್ರತಿಕ್ರಿಯಿಸಿ, ಇದು ತಮ್ಮ ಗಮನಕ್ಕೆ ಬಂದಿಲ್ಲ. ಈ ಭಾವ ಚಿತ್ರಗಳ ತೆರವಿಗೆ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ಪ್ರಧಾನಿ ಮೋದಿಯವರು ಜಲಿಯನ್‌ವಾಲಾ ಬಾಗ್‌ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷರಾಗಿ ದ್ದಾರೆ. ಜಲಿಯನ್‌ವಾಲಾ ಬಾಗ್‌ ಸ್ಮಾರಕದ ನವೀಕರಣ ಕಾರ್ಯಕ್ಕೆ ಕಳೆದ ಫೆಬ್ರವರಿ 15ರಂದು ಚಾಲನೆ ನೀಡಲಾಗಿದ್ದು, ಜುಲೈ 31ಕ್ಕೆ ಇದನ್ನು ಸಾರ್ವಜನಿಕರ ಪ್ರವೇಶಕ್ಕೆ ತೆರೆಯಲಾ ಗುವುದು. ಇದರ ನವೀಕರಣಕ್ಕೆ ಕೇಂದ್ರ ಸರಕಾರ ಮೊದಲ ಹಂತದಲ್ಲಿ 20 ಕೋಟಿ ರೂ.ಗಳನ್ನು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next