Advertisement

ಹುತಾತ್ಮ ಯೋಧರಿಗೆ ಕಾಂಗ್ರೆಸ್‌ನಿಂದ ಶ್ರದ್ಧಾಂಜಲಿ

11:47 AM Jun 27, 2020 | Suhan S |

ಹುಬ್ಬಳ್ಳಿ: ಭಾರತ ಮತ್ತು ಚೀನಾ ಗಡಿಭಾಗದ ಗಲ್ವಾನ್‌ ಕಣಿವೆಯಲ್ಲಿ ಹುತಾತ್ಮರಾದ ವೀರಯೋಧರಿಗೆ ಕಾಂಗ್ರೆಸ್‌ ನಾಯಕರು ಕಿಮ್ಸ್‌ ಮುಂಭಾ ಗದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಶುಕ್ರವಾರ ಶ್ರದ್ಧಾಂಜಲಿ ಸಲ್ಲಿಸಿದರು.

Advertisement

ಮಾಜಿ ಸಂಸದ ಪ್ರೊ| ಐ.ಜಿ. ಸನದಿ ಮಾತನಾಡಿ, ಸಂಘರ್ಷದಲ್ಲಿ ದೇಶದ 20 ಸೈನಿಕರು ರಾಷ್ಟ್ರಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ಬಲಿದಾನಕ್ಕೆ ಇಡೀ ರಾಷ್ಟ್ರವೇ ಗೌರವ ಸೂಚಿಸಬೇಕು. ಈ ಘಟನೆಗೆ ಚೀನಾ ನೇರ ಹೊಣೆಯಾಗಿದ್ದು, ದೇಶದ ಜನರು ಚೀನಾ ವಸ್ತುಗಳ ಖರೀದಿ ಹಾಗೂ ಬಳಕೆ ತ್ಯಜಿಸಬೇಕು. ಚೀನಾ ಭಾರತದ ಮಾರುಕಟ್ಟೆಯನ್ನು ಬಹುವಾಗಿ ನೆಚ್ಚಿಕೊಂಡಿದ್ದು, ಚೀನಾ ಉತ್ಪಾದಿತ ವಸ್ತುಗಳನ್ನು ತಿರಸ್ಕರಿಸುವ ಮೂಲಕ ಆ ದೇಶಕ್ಕೆ ತಕ್ಕ ಉತ್ತರ ನೀಡಬೇಕು ಎಂದು ಹೇಳಿದರು.

ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಮಾತನಾಡಿ, ಚೀನಾ ವಸ್ತುಗಳನ್ನು ಜನರು ತಿರಸ್ಕರಿಸುವುದು ಒಂದು ಭಾಗವಾದರೆ ಕೇಂದ್ರ ಸರಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಿ ಚೀನಾ ವಸ್ತುಗಳ ಆಮದು ಮೇಲೆ ನಿರ್ಬಂಧ ಹೇರಬೇಕು. ದೇಶದ ಮೇಲೆ ಆಕ್ರಮಣ ಮಾಡುವಂತಹ ದೇಶದ ವಸ್ತುಗಳ ಬಳಕೆ ಅಗತ್ಯವಿಲ್ಲ. ಕೂಡಲೇ ಕೇಂದ್ರ ಸರಕಾರ ಈ ಕುರಿತು ಸೂಕ್ತ ನಿರ್ಧಾರ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಅಲ್ತಾಫ್‌ಹುಸೇನ ಹಳ್ಳೂರು, ಎಫ್‌.ಎಚ್‌. ಜಕ್ಕಪ್ಪನವರ, ಸದಾನಂದ ಡಂಗನವರ, ಪಾರಸಮಲ್‌ ಜೈನ್‌, ಸ್ವಾತಿ ಮಳಗಿ, ಶಾಕೀರ್‌ ಸನದಿ, ಮೋಹನ ಅಸುಂಡಿ, ಕಿರಣ ಮುಗಬಸವ, ಬಸವರಾಜ ಕಿತ್ತೂರ, ಅಬ್ದುಲ್‌ ಗನಿ, ಸಾಗರ ಹಿರೇಮನಿ, ಬಂಗಾರೇಶ ಹಿರೇಮಠ, ರಜತ ಉಳ್ಳಾಗಡ್ಡಿಮಠ, ಇಮ್ರಾನ್‌ ಎಲಿಗಾರ, ಶಿವು ಬೆಂಡಿಗೇರಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next