Advertisement

ಓಬಿರಾಯನ ಕಾಲದ್ದು!: ಪೇಜರ್‌

04:50 AM Jun 22, 2020 | Lakshmi GovindaRaj |

ಮೊಬೈಲುಗಳು ನಮ್ಮೆಲ್ಲರ ಜೇಬುಗಳನ್ನು ಅಲಂಕರಿಸುವುದಕ್ಕೂ ಮೊದಲು ಟೆಕ್ಸ್ಟ್ ಸಂದೇಶಗಳ ರವಾನೆಗಾಗಿ ಬಳಕೆಯಲ್ಲಿದ್ದ ಎಲೆಕ್ಟ್ರಾನಿಕ್‌ ಉತ್ಪನ್ನವೇ ಪೇಜರ್‌. ಅದನ್ನು ಬೀಪರ್‌ ಎಂದೂ ಕರೆಯುತ್ತಿದ್ದರು. ಸಂದೇಶ ಬಂದಾಗ ಅವು  ಬೀಪ್‌ ಬೀಪ್‌ ಎಂಬ ಸದ್ದು ಹೊರಡಿಸುತ್ತಿದ್ದುದರಿಂದ, ಅದಕ್ಕೆ ಬೀಪರ್‌ ಎಂಬ ಹೆಸರು ಬಂದಿತ್ತು.

Advertisement

ಅವುಗಳಲ್ಲಿ ಎರಡು ರೀತಿಯ ಉಪಕರಣಗಳು ಇದ್ದವು. ಒನ್‌ ವೇ ಪೇಜರ್‌ ಮತ್ತು ಟೂ ವೇ ಪೇಜರ್‌. ಮೊದಲನೆಯ ಪೇಜರ್‌ನಲ್ಲಿ  ಸಂದೇಶ ಸ್ವೀಕರಿಸಲು ಮಾತ್ರವೇ ಸಾಧ್ಯವಿತ್ತು. ಎರಡನೇ ಪೇಜರ್‌ನಲ್ಲಿ ಚುಟುಕಾಗಿ ರಿಪ್ಲೈ ಕಳಿಸುವ ಸೌಲಭ್ಯವೂ ಇತ್ತು. ಪೇಜರ್‌ಗಳು ಹೆಚ್ಚು ಜನಪ್ರಿಯಗೊಂಡಿದ್ದು 80ರ ದಶಕದಲ್ಲಿ. ಆದರೂ ಕೆಲ ದೇಶಗಳಲ್ಲಿ ಪೇಜರ್‌ಗಳ ಬಳಕೆ ಇನ್ನೂ ಇದೆ.

ತುರ್ತು ವೈದ್ಯಕೀಯ ಸಿಬ್ಬಂದಿಗಳು, ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ವರು ಸಂದೇಶ ಕಳಿಸಲು ಪೇಜರ್‌ ಅನ್ನು ಬಳಸುವುದಿದೆ. ಪೇಜರ್‌ ಗಳು ಮೊಬೈಲ್‌ ಟವರ್‌ಗಳನ್ನು ಬಳಸದೆ ಸ್ಯಾಟಲೈಟ್‌ ಕಮ್ಯುನಿಕೇಷನ್‌ ಸಹಾಯದಿಂದ  ಸಂದೇಶ ಗಳನ್ನು ಕಳಿಸುತ್ತವೆ. ಇದರಿಂದಾಗಿ ನೆಟ್‌ವರ್ಕ್‌ ಇಲ್ಲ ಎನ್ನುವ ಸಮಸ್ಯೆಯೇ ಇರುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next