Advertisement

ಬೊಜ್ಜು ಕಳೆವ ಯೋಗ

12:18 PM Jul 21, 2020 | mahesh |

ಎಲ್ಲಾರು ಮಾಡುವುದು ಹೊಟ್ಟೆಗಾಗಿ ಅನ್ನೋದೇನೋ ಸತ್ಯ. ಇವತ್ತಿನ ಯುವಜನರಿಗೆ ಹೊಟ್ಟೆಯದ್ದೇ ಸಮಸ್ಯೆ. ಅರ್ಥಾತ್‌ ಬೊಜ್ಜು ಇನ್ನಿಲ್ಲದಂತೆ ಕಾಡುತ್ತದೆ. ಇದು ವ್ಯಕ್ತಿಯ ಔಟ್‌ಲುಕ್‌ ಅನ್ನು ಬದಲಿಸಿಬಿಡುತ್ತದೆ. ಎಷ್ಟೋ ಜನ ಇನ್‌ಷರ್ಟ್‌ ಮಾಡೋದನ್ನೇ ಬಿಟ್ಟು ಬಿಟ್ಟಿದ್ದಾರೆ- ಹೊಟ್ಟೆ ಕಾಣುತ್ತೆ ಅಂತ… ಬೊಜ್ಜು ಅಸಹ್ಯ ಕೂಡ. ಕೂತರೆ ಎದ್ದೇಳಲು ಆಗದು, ಅಂಗಾತ ಮಲಗಲು ಕಷ್ಟ. ಹೆಚ್ಚೆಚ್ಚು ಬೊಜ್ಜಿದ್ದವರು ಉಸಿರಾಟದ ಸಮಸ್ಯೆಯನ್ನೂ ಎದುರಿಸುವುದುಂಟು.
ಅಂದಹಾಗೆ, ಬೊಜ್ಜು ಕರಗಿಸಲು ಯೋಗದಲ್ಲಿ ಮದ್ದಿದೆ. ನೌಕಾಸನ ಇದರಲ್ಲಿ ಮುಖ್ಯವಾದದ್ದು.

Advertisement

ಮೊದಲು ಪದ್ಮಾಸನ ಅಥವಾ ಸುಖಾಸನದಲ್ಲಿ ಕುಳಿತುಕೊಳ್ಳಿ. ಎರಡೂ ಕಾಲುಗಳನ್ನು ಮುಂದಕ್ಕೆ ಚಾಚಿ. ನಂತರ ಕಾಲನ್ನು ನಿಧಾನಕ್ಕೆ ಮೇಲೆತ್ತಿ. ಆಮೇಲೆ,
ಎರಡೂ ಕೈಗಳನ್ನು ಕಣ್ಣ ಉದ್ದಕ್ಕೆ ಕಾಲಿನ ಕಡೆ ಚಾಚಿ. ಇಡೀ ದೇಹ ಪೃಷ್ಟದ ಮೇಲೆ ನಿಲ್ಲುವಂತೆ ಮಾಡಿ. ನೌಕಾಸನ ಮಾಡುವುದರಿಂದ ದೇಹದ ಸಕ್ಕರ ಲೆವೆಲ್‌
ನಿಯಂತ್ರಣಕ್ಕೆ ಬರುತ್ತದೆ. ಹೊಟ್ಟೆ, ಕಣ್ಣು, ಕೈಗಳಲ್ಲಿ ರಕ್ತ ಸಂಚಾರ ಸರಾಗವಾಗಿ ಆಗುತ್ತದೆ. ಮುಖ್ಯವಾಗಿ, ಹೊಟ್ಟೆಯ ಭಾಗದ ಕೊಬ್ಬಿನ ಅಂಶ  ಕಡಿಮೆಯಾಗುತ್ತದೆ.

ಅಧೋ ಮುಖಾಸನ ಅಂದರೆ, ನೇರವಾಗಿ ನಿಂತು ಎರಡೂ ಕಾಲು ಗಳನ್ನು ಹಿಂದಕ್ಕೆ ಚಾಚಿ, ಎರಡೂ ಕೈಗಳನ್ನು ನೆಲಕ್ಕೆ ಊರಿ, ಸೊಂಟವನ್ನು ಎಷ್ಟು
ಸಾಧ್ಯವೋ ಅಷ್ಟು ಮೇಲಕ್ಕೆ ಎತ್ತುವುದು. ಈ ಆಸನ ಮಾಡುವಾಗ, ಎರಡೂ ಕಾಲಿನ ಪಾದಗಳನ್ನು ನೆಲದ ಮೇಲೆ ಊರುವ ಪ್ರಯತ್ನ ಮಾಡಬೇಕು. ಆಗ ಹೊಟ್ಟೆಯ ಬೊಜ್ಜು ಕರಗುವ ಪ್ರಕ್ರಿಯೆ ಶುರುವಾಗುತ್ತದೆ. ಇದರ ಜೊತೆಗೆ ಪವನ ಮುಕ್ತಾಸನ, ಉತ್ತಮ ಪಾದಾಸನ, ಪಶ್ಚಿಮೋ ತ್ತಾಸನ
ಮಾಡುವುದ ರಿಂದಲೂ ಬೊಜ್ಜನ್ನು ಕರಗಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next