Advertisement

India 1.25 ಕೋಟಿ ಮಕ್ಕಳಿಗೆ ಬೊಜ್ಜು ಸಮಸ್ಯೆ : ಅಧ್ಯಯನ ವರದಿ

11:21 PM Mar 01, 2024 | Team Udayavani |

ನವದೆಹಲಿ: ಅಪೌಷ್ಟಿಕತೆ ಅಥವಾ ಸತ್ವರಹಿತ ಆಹಾರದ ಮತ್ತೂಂದು ರೂಪವಾದ ಬೊಜ್ಜು, 2022ರ ಹೊತ್ತಿಗೆ ಭಾರತದ ಮಕ್ಕಳಲ್ಲಿ ಭಾರೀ ಪ್ರಮಾಣದಲ್ಲಿ ಏರಿದೆ. ಹೀಗೆಂದು ಲ್ಯಾನ್ಸೆಟ್‌ ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿ ಹೇಳಿದೆ.

Advertisement

1990ರಲ್ಲಿ ಭಾರತದಲ್ಲಿ ಕೇವಲ 4 ಲಕ್ಷ ಮಕ್ಕಳಿಗೆ ಬೊಜ್ಜು ಇತ್ತು. ಈಗ ಆ ಪ್ರಮಾಣ 1.25 ಕೋಟಿಗೇರಿದೆ. ಅಧ್ಯಯನದಲ್ಲಿ 5 ವರ್ಷದಿಂದ 19 ವರ್ಷದೊಳಗಿನ ಮಕ್ಕಳನ್ನು ಪರಿಗಣಿ ಸಲಾಗಿದೆ. ಪ್ರಸ್ತುತ 73 ಲಕ್ಷ ಗಂಡು ಮಕ್ಕಳು, 52 ಲಕ್ಷ ಹೆಣ್ಣು ಮಕ್ಕಳು ವಿಪರೀತ ಬೊಜ್ಜಿನಿಂದ ಪರದಾ ಡುತ್ತಿದ್ದಾರೆ ಎಂದು ಅಧ್ಯಯನ ಹೇಳಿದೆ. ಜಗತ್ತಿನ ಪ್ರಮುಖ ವಿಜ್ಞಾನಿಗಳಿರುವ ಎನ್‌ಸಿಡಿ-ರಿಸ್ಕ್ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದಲ್ಲಿ ಜಗತ್ತಿನಾದ್ಯಂತ ಅಧ್ಯಯನ ನಡೆಸ ಲಾಗಿದೆ. ಅದು ನೀಡಿರುವ ಮಾಹಿತಿ ಪ್ರಕಾರ, 1990 ರಿಂದ 2022ರ ನಡುವೆ ಬೊಜ್ಜಿನ ಪ್ರಮಾಣ 4 ಪಟ್ಟು ಏರಿದೆ. ಅಪೌಷ್ಟಿಕತೆ ಯಿಂದ ಜನ ಕೃಶ ಗೊಳ್ಳು ತ್ತಾರೆ. ವಿಪರೀತ ಸತ್ವರಹಿತ ಆಹಾರ ಸೇವನೆಯಿಂದ ಬೊಜ್ಜು ಬರು ತ್ತದೆ ಎಂದು ತಜ್ಞರು ಹೇಳಿದ್ದಾರೆ. ವಿಶ್ವಾದ್ಯಂತ 100 ಕೋಟಿಗೂ ಅಧಿಕ ಮಂದಿ ಅತಿಕಾಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next