Advertisement

ಒಬೆರಾಯ್‌ ಟ್ವೀಟ್‌ ವಿವಾದ: ನೋಟಿಸ್‌

02:03 AM May 21, 2019 | sudhir |

ಲೋಕಸಭೆ ಚುನಾವಣೆ ಕುರಿತು ಟ್ವೀಟ್‌ ಮಾಡುವ ವೇಳೆ ಬಾಲಿವುಡ್‌ ನಟಿ ಐಶ್ವರ್ಯಾ ರೈ ಬಚ್ಚನ್‌ ಅವರಿಗಿದ್ದ ಸಂಬಂಧಗಳ ಕುರಿತು ಮೀಮ್‌ ರಚಿಸುವ ಮೂಲಕ ಬಾಲಿವುಡ್‌ ನಟ ವಿವೇಕ್‌ ಒಬೆರಾಯ್‌ ಕೀಳು ಅಭಿರುಚಿಯನ್ನು ಪ್ರದರ್ಶಿಸಿದ್ದಾರೆ. ಅವರ ಟ್ವೀಟ್‌ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಅಲ್ಲದೆ ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ ಅವರು ಒಬೆರಾಯ್‌ಗೆ ನೋಟಿಸ್‌ ಕೂಡ ಜಾರಿ ಮಾಡಿದ್ದಾರೆ.

Advertisement

ಟ್ವೀಟ್‌ನಲ್ಲಿ ಒಬೆರಾಯ್‌ 3 ಫೋಟೋಗಳನ್ನು ಅಪ್‌ಲೋಡ್‌ ಮಾಡಿದ್ದಾರೆ. ಮೊದಲ ಫೋಟೋದಲ್ಲಿ ಐಶ್ವರ್ಯಾ ರೈ ಮತ್ತು ಸಲ್ಮಾನ್‌ ಜತೆಗಿದ್ದರೆ, ಎರಡನೇ ಚಿತ್ರದಲ್ಲಿ ಐಶ್ವರ್ಯಾ ವಿವೇಕ್‌ ಒಬೆರಾಯ್‌ ಜತೆಗಿದ್ದಾರೆ. ಮೂರನೇ ಫೋಟೋದಲ್ಲಿ ಐಶ್‌ ತಮ್ಮ ಪತಿ ಅಭಿಷೇಕ್‌ ಮತ್ತು ಪುತ್ರಿ ಆರಾಧ್ಯಾ ಜತೆಗಿದ್ದಾರೆ. ಬಳಿಕ ಮೂರೂ ಫೋಟೋಗಳಿಗೂ ಕ್ರಮವಾಗಿ “ಜನಾಭಿಪ್ರಾಯ’, “ಮತಗಟ್ಟೆ ಸಮೀಕ್ಷೆ’ ಮತ್ತು “ಫ‌ಲಿತಾಂಶ’ ಎಂದು ಶೀರ್ಷಿಕೆ ಬರೆಯಲಾಗಿದೆ.

ಒಬೆರಾಯ್‌ ಅವರ ಈ ಟ್ವೀಟ್‌ಗೆ ಸೆಲೆಬ್ರಿಟಿಗಳಾದ ಸೋನಂ ಕಪೂರ್‌, ಊರ್ಮಿಳಾ ಮಾತೋಂಡ್ಕರ್‌, ಜ್ವಾಲಾ ಗುಟ್ಟಾ ಮಾತ್ರ ವಲ್ಲದೆ, ರಾಷ್ಟ್ರೀಯ ಮಹಿಳಾ ಆಯೋಗ, ಮಹಾರಾಷ್ಟ್ರ ಮಹಿಳಾ ಆಯೋಗ, ದಿಲ್ಲಿ ಮಹಿಳಾ ಆಯೋಗ ಕೂಡ ಆಕ್ರೋಶ ವ್ಯಕ್ತಪಡಿಸಿದೆ. ಚುನಾವಣೆಯನ್ನು ಮಹಿಳೆಯೊಬ್ಬರ ವೈಯಕ್ತಿಕ ಬದುಕಿಗೆ ಹೋಲಿಕೆ ಮಾಡಿದ್ದಕ್ಕೆ ಹಾಗೂ ಈ ವಿಚಾರದಲ್ಲಿ ಇನ್ನೂ ಅಪ್ರಾಪ್ತಳಾದ ಆರಾಧ್ಯಳನ್ನು ಬಳಸಿಕೊಂಡಿದ್ದಕ್ಕೆ ಟೀಕೆಗಳು ಕೇಳಿಬಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next