ಮೂಲ್ಕಿ: ಅನಾದಿ ಕಾಲದಿಂದಲೂ ಗುರು ಶಿಷ್ಯರ ಪರಂಪರೆಗೆ ಇರುವ ಪವಿತ್ರತೆ ಮತ್ತು ಸಂಬಂಧ ಗುರುಗಳ ಬಗ್ಗೆ ಶಿಷ್ಯರಾದ ವರಿಗೆ ಇರಲೇಬೇಕಾದ ಗೌರವ ಮತ್ತು ವಿಧೇಯತೆ ಶಿಕ್ಷಣದ ಪರಿಪೂರ್ಣತೆಯನ್ನು ಆಧರಿಸಿದೆ ಎಂದು ಶಿರಾಳಿ ಶ್ರೀ ಮಹಮ್ಮಾಯಿ ಮತ್ತು ಗಣಪತಿ ದೇವಸ್ಥಾನದ ಅರ್ಚಕ ವೇ| ಮೂ| ಶಾಂತಕೃಷ್ಣ ಪದ್ಮನಾಭ ಭಟ್ ಹೇಳಿದರು.
ಅವರು ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತೆಯ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಸಂಸ್ಕೃತ ವೇದಪಾಠ ಶಾಲೆಯ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠದ ಅಧ್ಯಕ್ಷ ಕೆ.ನಾರಾಯಣ ಶೆಣೈ ಮಾತನಾಡಿ, ಸರ್ವ ಶ್ರೇಷ್ಠವಾದ ವಿದ್ಯಾದಾನವನ್ನು ಮಾಡುವ ಮಹಾ ಸಂಕಲ್ಪದಲ್ಲಿ ಇರುವ ದೇವಸ್ಥಾನದ ಆಡಳಿತೆಯು ಸಮಾಜ ದವರಿಗಾಗಿ ಸಂಸ್ಕೃತ ವೇದ ಪಾಠ ಶಾಲೆಯ ಜತೆಗೆ ಎಲ್ಲ ಸಮಾಜದವರಿಗೆ ಆಂಗ್ಲ ಮಾಧ್ಯಮ ಶಿಕ್ಷಣ ಸುಲಭವಾಗಿ ಸಿಗು ವಂತಾಗಲು ಶಾಲೆಯನ್ನು ಆರಂಭಿಸಿ ನಿರಂತವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದರು.
ವೇದ ಪಾಠ ಶಾಲೆಯ ಮಹಾ ಪೋಷಕರಾದ ವಿಶ್ವನಾಥ ಎನ್.ಶೆಣೈ ಅವರು ಅತಿಥಿಗಳಾಗಿ ಮಾತನಾಡಿ, ಸಂಸ್ಕೃತ ಭಾರತದ ಶ್ರೇಷ್ಠ ಸಂಪತ್ತು. ಇದರ ಅನುಭವ ಮತ್ತು ಶಕ್ತಿಯ ಬಗ್ಗೆ ವಿದೇಶಿಯರು ಸಾಕಷ್ಟು ಪ್ರಮಾಣದಲ್ಲಿ ನಿರಂತರ ಅಧ್ಯಯನ ಮಾಡುವುದನ್ನು ಮುಂದುವರಿಸಿ ಇದರ ಮಹತ್ವವನ್ನು ತಿಳಿದಿದ್ದಾರೆ. ನಾವು ಕೂಡ ನಮ್ಮ ಸಮೃದ್ಧವಾದ ಈ ಭಾಷೆಯನ್ನು ಅಭ್ಯಾಸ ಮಾಡುವ ಮೂಲಕ ಪವಿತ್ರರಾಗೋಣ ಎಂದರು.
ಸಮ್ಮಾನ
ಕರ್ಮಾಂಗ ಅಧ್ಯಾಪಕ ನವೀನ್ ಭಟ್ ಮತ್ತು ಸಂಸ್ಕೃತ ಅಧ್ಯಾಪಕ ಶಶಾಂಕ್ ಭಟ್ ಬಳಂಜ ಅವರನ್ನು ಪಾಠ ಶಾಲೆಯ ವತಿಯಿಂದ ಸಮ್ಮಾನಿಸಿ,ಗೌರವಿಸಲಾಯಿತು. ದೇವಸ್ಥಾನದ ಮೊಕ್ತೇಸರ ದಾಮೋದರ ಕುಡ್ವಾ,ಶಿಕ್ಷಣ ಕಾರ್ಯ ಯೋಜನೆಯ ಆರಂಭಿಕ ಯೋಜ ನೆಯ ವಿಷಯಗಳ ಬಗ್ಗೆ ಅವಲೋಕಿಸಿ ಮಾತನಾಡಿದರು. ಆನುವಂಶಿಕ ಮೊಕ್ತೇಸರ ಯು. ವಸಂತ ಶೆಣೈ ಮತ್ತು ವಾರ್ಡನ್ ಕಮಲಾಕ್ಷ ಶೆಣೈ ವೇದಿಕೆಯಲ್ಲಿದ್ದರು.
ನವನೀತ ಶರ್ಮಾ ಸ್ವಾಗತಿಸಿದರು.ಕೃಷ್ಣ ಪ್ರಸಾದ್ ಶರ್ಮಾ ನಿರೂಪಿಸಿದರು.ವೇದ ಪಾಠ ಶಾಲೆಯ ಆಡಳಿತೆಯ ಉಪಾಧ್ಯಕ್ಷ ಯು.ಬಾಬುರಾಯ ಶೆಣೈ ವರದಿ ಮಂಡಿಸಿದರು. ಕಾರ್ಯದರ್ಶಿ ಎಚ್. ರಾಮದಾಸ ಕಾಮತ್ ವಂದಿಸಿದರು.