Advertisement

OBC: ಜನಸಂಖ್ಯೆಗೆ ಹೋಲಿಸಿದರೆ ಒಬಿಸಿ ಪ್ರಾತಿನಿಧ್ಯ ತೀರಾ ಕಡಿಮೆ

12:21 AM Oct 07, 2023 | Team Udayavani |

ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಇತರ ಹಿಂದುಳಿದ ವರ್ಗಗಳು(ಒಬಿಸಿ) ಸಂಖ್ಯೆಯೇ ಅಧಿಕ. ಆದರೆ ಶಾಸನ ಸಭೆ, ಸರಕಾರಿ ಉದ್ಯೋಗ, ನ್ಯಾಯಾಂಗ ವ್ಯವಸ್ಥೆ ಹೀಗೆ ಪ್ರತಿಯೊಂದರಲ್ಲೂ ಒಬಿಸಿ ಸಮುದಾಯಗಳ ಪ್ರಾತಿನಿಧ್ಯ ತೀರಾ ಕಡಿಮೆ.

Advertisement

ರಾಜಕೀಯವಾಗಿ ಪ್ರತಿಯೊಂದೂ ಚುನಾ ವಣೆಯಲ್ಲೂ ಒಬಿಸಿ ಮತದಾರರು ಈ ಹಿಂದಿ ನಿಂದಲೂ ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸುತ್ತ ಬಂದಿದ್ದಾರೆ. ಈ ಕಾರಣದಿಂದಾಗಿಯೇ ಪ್ರಾದೇಶಿಕ ಪಕ್ಷಗಳು ಜಾತಿಗಣತಿಗೆ ಹೆಚ್ಚಿನ ಆಸಕ್ತಿ ತೋರುತ್ತಿವೆ. ಆದರೆ ಕಳೆದ ಮೂರು ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿ ಒಬಿಸಿ ಮತಗಳನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. 2009ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಶೇ.22ರಷ್ಟು ಒಬಿಸಿ ಮತಗಳನ್ನು ಪಡೆದುಕೊಂಡಿತ್ತು. 2019ರ ಚುನಾವಣೆಯಲ್ಲಿ ಇದು ದುಪ್ಪಟ್ಟಾಗಿದ್ದು ಶೇ. 44ರಷ್ಟು ಒಬಿಸಿ ಮತಗಳನ್ನು ಪಡೆದುಕೊಂಡಿತ್ತು. ಇದೇ ಅವಧಿಯಲ್ಲಿ ಪ್ರಾದೇಶಿಕ ಪಕ್ಷಗಳ ಒಬಿಸಿ ಮತಗಳಿಕೆ ಶೇ. 42ರಿಂದ ಶೇ. 27ಕ್ಕೆ ಕುಸಿದಿತ್ತು.

1980ರ ಮಂಡಲ್‌ ಆಯೋಗದ ವರದಿಯ ಪ್ರಕಾರ ದೇಶದಲ್ಲಿ ಒಬಿಸಿ ಜನಸಂಖ್ಯೆ ಸಾಮಾನ್ಯ ವರ್ಗದ ಜನಸಂಖ್ಯೆಗಿಂತ ಸುಮಾರು 2.5ರಷ್ಟು ಅಧಿಕವಾಗಿದೆ. ಆದರೆ ಸಂಸತ್‌ನಲ್ಲಿ ಒಬಿಸಿ ಮತ್ತು ಸಾಮಾನ್ಯ ವರ್ಗದ ಸಂಸದರ ಪ್ರಾತಿನಿಧ್ಯದಲ್ಲಿ ಅಗಾಧವಾದ ಅಂತರವಿದೆ.

ಹಾಲಿ ಲೋಕಸಭೆಯಲ್ಲಿ ಒಬಿಸಿ ಪ್ರಾತಿನಿಧ್ಯ
ವರ್ಗ            ಒಟ್ಟು ಜನ ಸಂಖ್ಯೆ(ಶೇ.)     ಸಂಸದರ ಸಂಖ್ಯೆ(ಶೇ.)
ಒಬಿಸಿ                      52                                 22
ಪರಿಶಿಷ್ಟ ಜಾತಿ      16.6                            15.83
ಪರಿಶಿಷ್ಟ ಪಂಗಡ   8.6                               9.57
ಸಾಮಾನ್ಯ               22.8                              42.72
ಶೇ. 9.57ರಷ್ಟು ಸಂಸದರು ಅಲ್ಪಸಂಖ್ಯಾಕರಾಗಿದ್ದು ಇವರಲ್ಲಿ ಕೆಲವರು ಒಬಿಸಿ ಸಮುದಾಯಕ್ಕೆ ಸೇರಿದವರಾಗಿರುವ ಸಾಧ್ಯತೆ ಇದೆ.

ನ್ಯಾಯಾಂಗದಲ್ಲಿ ಜಾತಿವಾರು ಪ್ರಾತಿನಿಧ್ಯ
ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲೂ ಸಾಮಾನ್ಯ ವರ್ಗಗಳಿಗೆ ಹೋಲಿಸಿದರೆ ಒಬಿಸಿ ಸಮುದಾಯದವರ ಪ್ರಾತಿನಿಧ್ಯ ತೀರಾ ಕಡಿಮೆಯಾಗಿದೆ. ಹೈಕೋರ್ಟ್‌ನಲ್ಲಿ ಸಾಮಾನ್ಯ ವರ್ಗಗಳಿಗೆ ಹೋಲಿಸಿದರೆ ಒಬಿಸಿ ಪ್ರಾತಿನಿಧ್ಯ 7ನೇ ಒಂದರಷ್ಟಿದೆ. ಕೆಳ ನ್ಯಾಯಾಲಯಗಳಲ್ಲಿ ಒಬಿಸಿಗೆ ಹೋಲಿಸಿದರೆ 2.5ರಷ್ಟು ಹೆಚ್ಚಿನ ಸಂಖ್ಯೆಯ ನ್ಯಾಯಾಧೀಶರು ಸಾಮಾನ್ಯ ವರ್ಗದವ ರಾಗಿದ್ದಾರೆ. ಒಬಿಸಿ ಜನಸಂಖ್ಯೆಯ ಅಂಕಿಅಂಶ 1980ರ ದಶಕದ ಮಂಡಲ್‌ ಆಯೋಗದ ಅಂಕಿಅಂಶವಾಗಿದ್ದರೆ ನ್ಯಾಯಾಂಗದಲ್ಲಿರುವ ಒಬಿಸಿ ಪ್ರಾತಿನಿಧ್ಯ ಅಂಕಿಅಂಶ ಇತ್ತೀಚೆಗಿನದಾಗಿದೆ. ಇನ್ನು ಎಸ್‌ಸಿ-ಎಸ್‌ಟಿ ಅಂಕಿಅಂಶ 20 11ರ ಜನಗಣತಿಯದ್ದಾಗಿದೆ.

Advertisement

ವರ್ಗ                 ಜನ ಸಂಖ್ಯೆ (ಶೇ.)          ಹೈಕೋರ್ಟ್‌ (ಶೇ.)        ಕೆಳ ನ್ಯಾಯಾಲಯ (ಶೇ.)
ಒಬಿಸಿ                                 52                       12                                23.8
ಎಸ್‌ಸಿ                                16.8                    3 1                                3.3
ಎಸ್‌ಟಿ                                 8.6                     1.5                                4.9
ಸಾಮಾನ್ಯ                           22.8                  83.5                               58

2022ರ ಮಾ. 17ರಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಅವರು ರಾಜ್ಯಸಭೆಗೆ ನೀಡಿದ ಲಿಖೀತ ಹೇಳಿಕೆಯ ಪ್ರಕಾರ ದೇಶದಲ್ಲಿ ಒಟ್ಟಾರೆ 5.12 ಲಕ್ಷ ಸರಕಾರಿ ಉದ್ಯೋಗಿ ಗಳ ಪೈಕಿ 2.83ಲಕ್ಷ ಮಂದಿ ಸಾಮಾನ್ಯ ವರ್ಗದವರಾಗಿದ್ದರೆ 1.03 ಲಕ್ಷ ಮಂದಿ ಒಬಿಸಿ, 90 ಸಾವಿರದಷ್ಟು ಎಸ್‌ಸಿ ಮತ್ತು ಎಸ್‌ಟಿಗೆ ಸೇರಿದವರಾಗಿದ್ದಾರೆ.

ರೈಲ್ವೇ ಮತ್ತು ಅಂಚೆ ಇಲಾಖೆಯಲ್ಲಿ 16 ಲಕ್ಷಗಳಿಗೂ ಅಧಿಕ ಉದ್ಯೋಗಿಗಳಿದ್ದಾರೆ. ಇವರನ್ನು ಹೊರತುಪಡಿಸಿ ದಂತೆ ಕೇಂದ್ರ ಸರಕಾರದ ಉದ್ಯೋಗಗಳಲ್ಲಿ ಗ್ರೂಪ್‌ ಬಿ ಮತ್ತು ಗ್ರೂಪ್‌ ಸಿ ಉದ್ಯೋಗಿಗಳ ಅಂಕಿಅಂಶಗಳು ಹೀಗಿವೆ.

ವರ್ಗ        ಜನಸಂಖ್ಯೆ (ಶೇ.)          ಗ್ರೂಪ್‌ ಬಿ (ಶೇ.)           ಗ್ರೂಪ್‌ ಸಿ (ಶೇ.)
ಒಬಿಸಿ                  52                            15.7                                 22.5
ಎಸ್ಸಿ                 16.6                           16.6                                  18.2
ಎಸ್ಟಿ                  8.6                           6.5                                     6.91
ಸಾಮಾನ್ಯ        22.8                         61                                        52

Advertisement

Udayavani is now on Telegram. Click here to join our channel and stay updated with the latest news.

Next