ಗೆದ್ದರೆ ಭಯೋತ್ಪಾದನೆ, ಭ್ರಷ್ಟಾಚಾರಕ್ಕೆ ಪುಷ್ಟಿ ನೀಡಿದಂತಾಗುತ್ತದೆ ಎಂದು ಲೋಕಸಭೆ ಚುನಾವಣೆ ಬಿಜೆಪಿ ತಾಲೂಕು ಉಸ್ತುವಾರಿ ಅಶೋಕ ಹೋಕ್ರಣೆ ಹೇಳಿದರು.
Advertisement
ಸಂತಪೂರ ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಹೋಬಳಿ ಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು. ಲೋಕಸಭೆಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ನಾವೆಲ್ಲರೂ ದುಡಿಯಲು ಮುಂದಾಗಬೇಕು ಎಂದರು. ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಣ್ಣ, ಅತಿ ಸಣ್ಣ ರೈತರಿಗೆ ಪ್ರತಿವರ್ಷ
ಆರು ಸಾವಿರ ರೂ. ಸಹಾಯ ಧನ ನೀಡುವ ಮೂಲಕ ಆರ್ಥಿಕವಾಗಿ ಬೆನ್ನೆಲುಬಾಗಿ ನಿಂತಿದೆ. ಇದರಿಂದ ನಮ್ಮ ರೈತರು ಮುಂಗಾರು ಹಾಗೂ ಹಿಂಗಾರು ಬಿತ್ತನೆ ಸಮಯದಲ್ಲಿ ಬಡ್ಡಿ ಹಣ
ತಂದು ಸಾಲದ ಸುಳಿಯಲ್ಲಿ ಸಿಲುಕುವುದು ಶಾಶ್ವತವಾಗಿ ನಿಲ್ಲುತ್ತದೆ. ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಘೋಷಣೆಯಾದ ರೈತರ ಸಾಲಮನ್ನಾ ಯೋಜನೆ ಸಾಮಾಜಿಕ ಜಾಲತಾಣಕ್ಕೆ ಹಾಗೂ ಸರ್ಕಾರಿ ಕಚೇರಿಯ ಕಡತಗಳಿಗೆ
ಸೀಮಿತವಾಗಿ ಉಳಿದುಕೊಂಡಿದೆ ಎಂದರು.
ನಿಸ್ವಾರ್ಥವಾಗಿ ದುಡಿದು ದೇಶದ ಅಖಂಡತೆ ಹಾಗೂ ಭದ್ರತೆಗೆ ಬುನಾದಿ ಹಾಕಲು ಮುಂದಾಗಬೇಕು ಎಂದರು. ಕಾಂಗ್ರೆಸ್ ಪಕ್ಷ ಕುಟುಂಬದ ಸದಸ್ಯರಿಂದ ಕೂಡಿದ ಪಕ್ಷವಾಗಿದೆ. ಬಿಜೆಪಿ ದೇಶದ ಅಖಂಡತೆ, ಸೈನಿಕರ ರಕ್ಷಣೆಗೆ ನಿಂತ ಹೆಮ್ಮೆಯ ಪಕ್ಷವಾಗಿದೆ. ಹಿಗಾಗಿಯೇ ಲೋಕಸಭೆ ಚುನಾವಣೆಯಲ್ಲಿ ಬೀದರ
ಜಿಲ್ಲೆಯಲ್ಲಿ ಔರಾದ ತಾಲೂಕಿನಿಂದ ಅತಿ ಹೆಚ್ಚು ಮತಗಳನ್ನು ಭಗವಂತ ಖೂಬಾಅವರಿಗೆ ನೀಡಿ ನಮ್ಮ ಶಕ್ತಿ ಪ್ರದರ್ಶನ ಮಾಡಬೇಕಾಗಿದೆ ಎಂದು ಸಲಹೆ ನೀಡಿದರು.
Related Articles
ತಾಲೂಕಿನಲ್ಲಿ ನಡೆದ ಅಭಿವೃದ್ಧಿ ಕೆಲಸಗಳು ಹಾಗೂ ಮೋದಿ ಅವವರು ದೇಶದ ಭದ್ರತೆಯ ವಿಷಯದಲ್ಲಿ ತೆಗೆದುಕೊಂಡ ತೀರ್ಮಾನಗಳೇ ಖೂಬಾ ಅವರಿಗೆ ಶ್ರೀರಕ್ಷೆ ಆಗಲಿವೆ ಎಂದರು.
ಸಂಸದ ಭಗವಂತ ಖೂಬಾ ಮಾತನಾಡಿ, ಬೀದರ ಜಿಲ್ಲೆ ಸೇರಿದಂತೆ ದೇಶದ ರಕ್ಷಣೆ ಮಾಡುವುದೇ ನಮ್ಮ ಹಾಗೂ ಪಕ್ಷದ ಕರ್ತವ್ಯವಾಗಿದೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ನಮ್ಮ ತಾಲೂಕಿನ ಏಕತೆ ಹಾಗೂ ಒಗ್ಗಟ್ಟು ಪ್ರದರ್ಶನ
ಮಾಡಲು ನಾವೆಲ್ಲರೂ ಒಂದಾಗಬೇಕಾಗಿದೆ ಎಂದರು.
Advertisement
ಪಕ್ಷದ ತಾಲೂಕು ಅಧ್ಯಕ್ಷ ಸತೀಶ ಪಾಟೀಲ, ಬಾಬುರಾವ್ ಮದಕಟ್ಟಿ, ಅಮರನಾಥ ಪಾಟೀಲ, ಅಶೋಕ ಅಲ್ಮಾಜೆ, ಪ್ರಕಾಶ ಅಲ್ಮಾಜೆ, ಅರಿಹಂತ ಸಾವಳೆ, ಕಿರಣ ಪಾಟೀಲ, ಶರಣಪ್ಪ ಪಂಚಾಕ್ಷರೆ, ಸುನೀಲಕುಮಾರ ದೇಶಮುಖ, ಅನೀಲ ಗುಂಡಪ್ಪ,ವಸಂತ ಬಿರಾದಾರ ಹಾಗೂ ಪಕ್ಷದ ಕಾರ್ಯಕರ್ತರು, ಮುಖಂಡರು ಇದ್ದರು.