Advertisement
ಬೇಕಾಗುವ ಸಾಮಗ್ರಿಗಳುಓಟ್ಸ್- 1 ಕಪ್, ಗೋಧಿ ಹಿಟ್ಟು- ಒಂದುವರೆ ಕಪ್, ಜೀರಿಗೆ ಹುಡಿ- ಅರ್ಧ ಚಮಚ, ಧನಿಯಾ ಹುಡಿ- ಅರ್ಧ ಚಮಚ, ಅಚ್ಚ ಖಾರದ ಹುಡಿ- 1 ಚಮಚ, ಚಿಕ್ಕದಾಗಿ ಹೆಚ್ಚಿದ ಈರುಳ್ಳಿ- 1, ಕೊತ್ತಂಬರಿ ಸೊಪ್ಪು, ಕರಿಬೇವು, ಅಗತ್ಯಕ್ಕೆ ತಕ್ಕಷ್ಟು ಉಪ್ಪು, ಎಣ್ಣೆ ಅಥವಾ ತುಪ್ಪ.
ಮಿಕ್ಸಿಯಲ್ಲಿ ಓಟ್ಸ್ ಹಾಕಿ ನುಣ್ಣಗೆ ಪುಡಿಮಾಡಿ. ಓಟ್ಸ್ ಹಿಟ್ಟಿಗೆ, ಗೋಧಿ ಹಿಟ್ಟು, ಜೀರಿಗೆ ಪುಡಿ, ಧನಿಯಾ ಪುಡಿ, ಖಾರದ ಪುಡಿ, ಈರುಳ್ಳಿ, ಕರಿಬೇವು, ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ ಸ್ವಲ್ಪ ಸ್ವಲ್ಪ ನೀರು ಹಾಕಿ ಕಲಸಿ. ಹಿಟ್ಟು ಚಪಾತಿ ಹಿಟ್ಟಿನ ಹದಕ್ಕೆ ಇರಲಿ. ಹಿಟ್ಟನ್ನು ಕಾಲು ಗಂಟೆ ಹಾಗೇ ಬಿಟ್ಟು, ಅನಂತರ ಉಂಡೆ ಮಾಡಿಕೊಳ್ಳಿ. ಗೋಧಿ ಹಿಟ್ಟನ್ನು ಉದುರಿಸಿಕೊಂಡು ಚಪಾತಿ ಲಟ್ಟಿಸಿ. (ಹಿಟ್ಟನ್ನು ಮೊದಲು ತ್ರಿಕೋನ ಮಾಡಿ ಲಟ್ಟಿಸಿದರೆ ಮೆತ್ತಗಿರುತ್ತದೆ) ಕಾವಲಿ ಬಿಸಿ ಮಾಡಿ, ತುಪ್ಪ ಹಾಕಿ ಬೇಯಿಸಿದರೆ ಓಟ್ಸ್ ಮಸಾಲೆ ಚಪಾತಿ ರೆಡಿ.