Advertisement

Album Song: ಓ ಏ ಲಡ್ಕಿ ಎಂಬ ಸ್ಟೈಲಿಶ್‌ ಆಲ್ಬಂ!

11:31 AM Aug 14, 2024 | Team Udayavani |

“ಓ ಏ ಲಡ್ಕಿ’ ಎಂಬ ಆಲ್ವಂ ಸಾಂಗ್‌ವೊಂದು ಇತ್ತೀಚೆಗೆ ಬಿಡುಗಡೆಯಾಗಿದೆ. ಅಧೀರ ಸಂತು ಈ ಆಲ್ಬಂ ಅನ್ನು ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಈ ಹಾಡನ್ನು ನಟಿ ರಾಗಿಣಿ ದ್ವಿವೇದಿ ಅವರು  ಬಿಡುಗಡೆ ಮಾಡಿದರು.  ಈ ಹಾಡಲ್ಲಿ ಉಗ್ರಂ ರವಿ ಖಳನಾಯಕನಾಗಿ ನಟಿಸಿದ್ದಾರೆ.

Advertisement

ಎನ್ನಾರೈ ಯುವತಿಯಾಗಿ ಅಮೃತಾ, ಡೆಲಿವರಿ ಬಾಯ್‌ ಆಗಿ  ಸಮೀರ್‌ ನಗರದ್‌ ಅಭಿನಯಿಸಿದ್ದಾರೆ.

ಆಕಾಶ್‌ ಆಡಿಯೋ ಮೂಲಕ ‘ಓ ಏ ಲಡ್ಕಿ’ ಹಾಡು ಬಿಡುಗಡೆಯಾಗಿದೆ.  ಈ ಹಾಡಲ್ಲಿ ಸಾಮಾನ್ಯ  ಡೆಲಿವರಿ ಬಾಯ್‌ ಒಬ್ಬ ತನ್ನ ನೃತ್ಯ ಪ್ರತಿಭೆಯ ಮೂಲಕ  ಎನ್‌ಆರ್‌ಐ. ಹುಡುಗಿಯ ಮನಸ್ಸನ್ನು ಹೇಗೆ ಗೆಲ್ಲುತ್ತಾನೆ ಎಂಬುದನ್ನು ಹೇಳಲಾಗಿದೆ.

ಎಂ ಎಸ್‌. ತ್ಯಾಗರಾಜ್‌ ಈ ಹಾಡಿಗೆ ಸಂಗೀಥ ನೀಡಿದ್ದು, ಹಾಲೇಶ್‌ ಛಾಯಾಗ್ರಹಣವಿದೆ. ಹಾಡಿನ  ಕುರಿತಂತೆ  ಮಾತನಾಡಿದ ನಿರ್ಮಾಪಕ, ನಿರ್ದೇಶಕ  ಅಧೀರ ಸಂತು, ನಾನು ಚಿತ್ರರಂಗಕ್ಕೆ ಹೊಸಬನೇನಲ್ಲ, ಸ್ನೇಹಿತರ ಸಹಕಾರದಿಂದ ಈ ಸಾಂಗ್‌ ನಿರ್ದೇಶನ ಮಾಡಿದ್ದೇನೆ ಎಂದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next