Advertisement

ಇಳಿವಯಸ್ಸಿನ ಏಕಾಂಗಿ ಸಾಹಸ : ಮಚ್ಚಿನ ಗ್ರಾ.ಪಂ. ರಸ್ತೆಗೆ ನಾಣ್ಯಪ್ಪ ಗೌಡರ ಕರಸೇವೆ

12:09 AM Mar 21, 2021 | Team Udayavani |

ಬೆಳ್ತಂಗಡಿ: ಹತ್ತಾರು ಮಂದಿ ನಿತ್ಯ ಅವಲಂಬಿಸುವ ಗ್ರಾಮ ಪಂಚಾಯತ್‌ ರಸ್ತೆಯನ್ನು 74ರ ಇಳಿವಯಸ್ಸಿನಲ್ಲೂ ಏಕಾಂಗಿಯಾಗಿ ಹಾರೆ, ಪಿಕ್ಕಾಸು ಹಿಡಿದು ಮೂರು ತಿಂಗಳುಗಳ ಅವಧಿಯಲ್ಲಿ ದುರಸ್ತಿ ಮಾಡಿದ ಹೆಗ್ಗಳಿಕೆ ಬೆಳ್ತಂಗಡಿ ತಾಲೂಕು ಮಚ್ಚಿನ ಗ್ರಾಮದ ಕೋಡಿ ನಾಣ್ಯಪ್ಪ ಗೌಡರದು.

Advertisement

ನಾಗರಿಕ ಸಮಾಜ ಬದಲಾಗುತ್ತಿದೆ; ಪ್ರತಿಫಲಾಪೇಕ್ಷೆಯಿಲ್ಲದೆ ಒಡಹುಟ್ಟಿದವರೂ ಕಷ್ಟಕ್ಕೆ ಆಗದ ಕಾಲವಿದು. ಈ ನಡುವೆ ನಾಣ್ಯಪ್ಪ ಗೌಡರ ಪರೋಪಕಾರ ಬುದ್ಧಿ ಮಾದರಿಯಾಗಿದೆ.

ಮಚ್ಚಿನ ಗ್ರಾಮದ ಕೋಡಿ ನಿವಾಸಿ ನಾಣ್ಯಪ್ಪ ಗೌಡರಿಗೆ 74 ವರ್ಷ. ಇಬ್ಬರು ಪುತ್ರರಿದ್ದಾರೆ, ಪತ್ನಿ ಈ ಹಿಂದೆಯೇ ನಿಧನ ಹೊಂದಿದ್ದಾರೆ.

ಗ್ರಾಮದ ಜನರು ಸಾಗುವ ಗ್ರಾ.ಪಂ. ಕಚ್ಚಾ ರಸ್ತೆ ತೀರಾ ಹದಗೆಟ್ಟಿರುವುದು ನಾಣ್ಯಪ್ಪ ಗೌಡರನ್ನು ಸುಮ್ಮನಿರಲು ಬಿಡಲಿಲ್ಲ.

ರಸ್ತೆ ದುರಸ್ತಿ, ಬಿದಿರು ಮೆಳೆ ತೆರವು: ಮಚ್ಚಿನ ಗ್ರಾಮದ ವಾರ್ಡ್‌ ನಂ. 5ರ ನೇರೊಳ್‌ಪಲ್ಕೆ-ಕುಕ್ಕಿಲ, ಮಾಯಿಲೋಡಿಗೆ ಸಾಗುವ ಸುಮಾರು 1 ಕಿ.ಮೀ. ಮಣ್ಣಿನ ರಸ್ತೆ ಹಾಳಾಗಿತ್ತು. ಗೌಡರು ಆರಂಭದ ಒಂದು ತಿಂಗಳು ರಸ್ತೆಗೆ ವಾಲಿಕೊಂಡಿದ್ದ ಬಿದಿರು ಮೆಳೆಗಳನ್ನು ಸವರಿದರು. ಕಚ್ಚಾ ರಸ್ತೆಯಾದ್ದರಿಂದ ಮಳೆ ನೀರು ಹರಿಯಲು ಅಡ್ಡಲಾಗಿ ಟ್ರೆಂಚ್‌ ನಿರ್ಮಿಸಿದರು. ರಸ್ತೆಯನ್ನೂ ಸಮತಟ್ಟುಗೊಳಿಸಿದರು. ಮೋರಿ ಸಮೀಪ ಬಿರುಕು ಬಿಟ್ಟಲ್ಲಿಗೆ ತಾವೇ ಕಲ್ಲುಗಳನ್ನು ಆಯ್ದು ತಂದು ತುಂಬಿ ಸಮತಟ್ಟು ಮಾಡಿದ್ದಾರೆ.

Advertisement

ಗ್ರಾ.ಪಂ.ಗೆ ಲಕ್ಷ ರೂ. ಉಳಿತಾಯ: ಗೌಡರು 3 ತಿಂಗಳ ಈ ಕೆಲಸಗಳನ್ನು ತಾವೊಬ್ಬರೇ ನಡೆಸಿದ್ದಾರೆ. ಇದೇ ಕೆಲಸ ಗ್ರಾ.ಪಂ.ನಿಂದ ಕಾರ್ಮಿಕರನ್ನು ನಿಯೋಜಿಸಿ ಮಾಡುವುದಿದ್ದರೆ ಅಂದಾಜು 1 ಲಕ್ಷ ರೂ. ವೆಚ್ಚ ತಗಲುತ್ತದೆ.

ಗ್ರಾ.ಪಂ. ಅಭಿನಂದನೆ: ನಾಣ್ಯಪ್ಪ ಗೌಡರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಗ್ರಾ.ಪಂ. ಒಂದು ತಿಂಗಳ ಗೌರವಧನ ನೀಡಲು ಮುಂದಾಗಿದೆ.

ಫಲಾಪೇಕ್ಷೆಯಿಲ್ಲದೆ  ಗ್ರಾ.ಪಂ. ರಸ್ತೆ ಅಭಿವೃದ್ಧಿ ಮತ್ತು ಸ್ವತ್ಛತೆಯಲ್ಲಿ ನಾಣ್ಯಪ್ಪ  ಗೌಡರ ಸೇವೆ ಶ್ಲಾಘನೀಯ. ಮಚ್ಚಿನ ಗ್ರಾ.ಪಂ.ನ ಸ್ವಂತ ನಿಧಿಯಡಿ ಮುಂದಿನ ದಿನಗಳಲ್ಲಿ 5 ಸಾವಿರ ರೂ. ಸಹಾಯ ಧನಕ್ಕೆ ನರೇಗಾದಡಿ ಅವಕಾಶ ಕಲ್ಪಿಸಿಕೊಡ ಲಾಗುವುದು.ಗೌರಿಶಂಕರ್‌,  ಮಚ್ಚಿನ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ

 

ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next