Advertisement

Manipal: ಕೆಎಂಸಿಯಲ್ಲಿ ನ್ಯೂಟ್ರಿಷನ್ ಸ್ಟೀವರ್ಡ್‌ಶಿಪ್ ಕಾರ್ಯಕ್ರಮ

04:48 PM May 16, 2024 | Team Udayavani |

ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲವು, ಅಬಾಟ್ ಹೆಲ್ತ್‌ಕೇರ್ ಪ್ರೈ. ಲಿ. ನ ಸಹಯೋಗದೊಂದಿಗೆ ಕ್ಲಿನಿಕಲ್ ಪೌಷ್ಟಿಕಾಂಶ ಅಭ್ಯಾಸಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ನ್ಯೂಟ್ರಿಷನ್ ಸ್ಟೀವರ್ಡ್‌ಶಿಪ್ ಕಾರ್ಯಕ್ರಮವನ್ನು ಆಯೋಜಿಸಿತ್ತು.

Advertisement

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕೆಎಂಸಿ ಡೀನ್ ಡಾ.ಪದ್ಮರಾಜ್ ಹೆಗ್ಡೆ, ಅತಿಥಿಗಳಾಗಿ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ  ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಅವರು ಉಪಸ್ಥಿತರಿದ್ದರು. ಉಪ ವೈದ್ಯಕೀಯ ಅಧೀಕ್ಷಕರು ಮತ್ತು ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿಯ ಪ್ರಾಧ್ಯಾಪಕರಾದ ಡಾ.ಶಿರನ್ ಶೆಟ್ಟಿ ಮತ್ತು ಕ್ಲಿನಿಕಲ್ ನ್ಯೂಟ್ರಿಷನ್ ಮತ್ತು ಡಯೆಟಿಕ್ಸ್ ವಿಭಾಗದ ಪ್ರಭಾರಿ ಮತ್ತು ಸಹಾಯಕ ಪ್ರಾಧ್ಯಾಪಕರಾದ ಸುವರ್ಣ ಹೆಬ್ಬಾರ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ, ಡಾ.ಶಿರನ್ ಶೆಟ್ಟಿ ಅವರು ನ್ಯೂಟ್ರಿಷನ್ ಸ್ಟೀವರ್ಡ್‌ಶಿಪ್ ಕಾರ್ಯಕ್ರಮದ ಅವಲೋಕನವನ್ನು ನೀಡಿದರು. ನಿರಂತರ ಆರೈಕೆಯಲ್ಲಿ ಅಪೌಷ್ಟಿಕತೆ ಮತ್ತು ಸ್ನಾಯುವಿನ ನಷ್ಟವು ಪ್ರಚಲಿತವಾಗಿದೆ ಎಂದು ಅಭಿಪ್ರಾಯಪಟ್ಟರು. ಅವರು ವೈದ್ಯಕೀಯ ಅಭ್ಯಾಸದಲ್ಲಿ ಪೌಷ್ಟಿಕತೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ರೋಗಿಗಳಿಗೆ ಸಾರ್ಕೊಪೆನಿಯಾ ಮೌಲ್ಯಮಾಪನದ ಅಗತ್ಯವನ್ನು ಎತ್ತಿ ತೋರಿಸಿದರು.

ಈ ಸಂದರ್ಭದಲ್ಲಿ ಅಬಾಟ್ ಹೆಲ್ತ್‌ಕೇರ್‌ನ ಮನೋಜ್ ಅವರು ಕಸ್ತೂರ್ಬಾ ಆಸ್ಪತ್ರೆಗೆ ಪೌಷ್ಟಿಕಾಂಶದ ಮಾಪನ ಕಿಟ್ (ನ್ಯೂಟ್ರಿಷನ್ ಎಸ್ಸೇಸ್ಮೆಂಟ್ ಕಿಟ್) ಅನ್ನು ಹಸ್ತಾಂತರಿಸಿದರು, ಇದು ಪೌಷ್ಟಿಕಾಂಶದ ಆರೈಕೆಯನ್ನು ಮುಂದುವರಿಸಲು ಸಹಯೋಗದ ಬದ್ಧತೆಯನ್ನು ಸಂಕೇತಿಸುತ್ತದೆ. ಸುವರ್ಣ ಹೆಬ್ಬಾರ್ ವಂದನಾರ್ಪಣೆಗೈದರು.

Advertisement

Udayavani is now on Telegram. Click here to join our channel and stay updated with the latest news.

Next