ಯಾದಗಿರಿ: ಪ್ರತಿಯೊಬ್ಬ ಗರ್ಭಿಣಿ ಮತ್ತು ಮಗುವಿನ ಉತ್ತಮ ಆರೋಗ್ಯಕ್ಕೆ ಪೌಷ್ಟಿಕ ಆಹಾರದ ಅಗತ್ಯವಿದೆ ಎಂದು ಕಿರಿಯ ಆರೋಗ್ಯ ಸಹಾಯಕ ಮಲ್ಲೇಶ ಕುರಕುಂದಿ ಹೇಳಿದರು. ಜಿಲ್ಲೆಯ ಶಹಾಪುರ ತಾಲೂಕಿನ ವನದುರ್ಗಾ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಹೊಸಕೇರಾ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಡೆದ ಪೋಷಣ್ ಅಭಿಯಾನ ಯೋಜನೆಯನ್ನು ಅನುಷ್ಠಾನಗೊಳಿಸಲು ಮಾಡ್ನೂಲ್ -10 ವಲಯ ಮಟ್ಟದ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಹಾಯಕಿಯಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಅಪೌಷ್ಟಿಕ ಮಕ್ಕಳ ಕಂಡು ಬರುತ್ತಿದ್ದು, ತಾಯಿ-ಮಗುವಿನ ಸಾವು ನಿಯಂತ್ರಿಸಲು ಸರ್ಕಾರ ಅಪೌಷ್ಟಿಕತೆ ನಿವಾರಣೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇದರಲ್ಲಿ ರಾಷ್ಟ್ರೀಯ ಪೋಷಣ್ ಅಭಿಯಾನ ಒಂದಾಗಿದ್ದು, ಪ್ರತಿ ವರ್ಷ ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ನಿಯಮಿತ ಪೌಷ್ಟಿಕ ಆಹಾರ, ಆರೋಗ್ಯ ಮತ್ತು 5 ವರ್ಷದೊಳಗಿನ ಮಕ್ಕಳಿಗೆ ಸಾಂಕ್ರಾಮಿಕ ರೋಗ ತಡೆಗಟ್ಟಲು ಲಸಿಕೆ ಹಾಕಿಸುವುದು ಬಹುಮುಖ್ಯವಾಗಿದ್ದು, ಅಂಗನವಾಡಿ ಕಾರ್ಯಕರ್ತೆಯರು ಪ್ರಾಮಾಣಿಕವಾಗಿ ಈ ಯೋಜನೆಗಳನ್ನು ಜಾರಿ ಮಾಡಿ ತಾಯಿ-ಮಗುವನ್ನು ರಕ್ಷಿಸಿ ಮರಣ ಪ್ರಮಾಣ ಕಡಿಮೆ
ಮಾಡಬೇಕೆಂದರು.
ಅಂಗನವಾಡಿ ಮೇಲ್ವಿಚಾರಕಿ ಕವಿತಾ ಬಡಿಗೇರ ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆಯರಾದ ಶಾಂತಮ್ಮ ಹಿರೇಮಠ, ಶಾಮಲಾ ಬಾಯಿ, ತಾಯಮ್ಮ, ಮಂಜುಳಾ ಉದ್ದಾರ, ಹಣಮಂತಿ, ಭೀಮಬಾಯಿ ಕಕ್ಕಸಗೇರಾ, ಮಹಾದೇವಿ ಆಲ್ದಾಳ, ಶ್ರೀದೇವಿ ಶೆಟ್ಟಿಕೇರಾ, ಕಲ್ಲಮ್ಮ ವನದುರ್ಗಾ, ಬಾರತಿ ಬೂದನೂರ, ಪ್ರಮೀಳಾ ಚನ್ನೂರ, ವೇದಾವತಿ, ಭಾಗವಹಿಸಿದ್ದರು ಅನೂಸುಯಾ ವನದುರ್ಗಾ ನಿರೂಪಿಸಿದರು.