ಮಾಲ್ಕನ್‌ಗಿರಿ: ದಿನದಿಂದ ದಿನಕ್ಕೆ ಟಿಕ್ ಟಾಕ್ ಗೀಳು ಜೋರಾಗುತ್ತಿದ್ದು, ಒಡಿಶಾದ ಜಿಲ್ಲಾಸ್ಪತ್ರೆಯ ನವಜಾತಶಿಶುಗಳ ತುರ್ತು ನಿಗಾ ಘಟಕದಲ್ಲಿ ಟಿಕ್ ಟಾಕ್ ವಿಡಿಯೋ ಮಾಡಿದ ನಾಲ್ವರು ನರ್ಸ್‌ಗಳಿಗೆ ಕಡ್ಡಾಯ ರಜೆಯಲ್ಲಿ ಕಳುಹಿಸಲಾಗಿದೆ.
ವಿಡಿಯೋ ವೈರಲ್ ಆದ ಬೆನ್ನಲ್ಲೇ ಮಾಲ್ಕನ್‌ಗಿರಿ ಜಿಲ್ಲಾಆರೋಗ್ಯ ಅಧಿಕಾರಿ ನಾಲ್ವರು ನರ್ಸ್‌ಗಳಿಗೆ ಕಡ್ಡಾಯ ರಜೆಗೆ ಶಿಫಾರಸು ಮಾಡಿದ್ದರು. ಜಿಲ್ಲಾಧಿಕಾರಿ ಮನಿಶ್ ಅಗರ್ವಾಲ್ ಅವರು ನಾಲ್ವರನ್ನೂ ರಜೆಯಲ್ಲಿ ಕಳುಹಿಸಿದ್ದಾರೆ.
ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ರಚಿಸಲಾಗಿದ್ದು, ತನಿಖಾ ವರದಿ ಕೈಸೇರಿದ ಬಳಿಕ ನಾಲ್ವರ ವಿರುದ್ಧ ಕ್ರಮಕ್ಕೆ ನಿರ್ಧರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನರ್ಸ್‌ಗಳು ನಾವು ಕೆಲಸದ ಅವಧಿ ಮುಗಿದ ಬಳಿಕವೇ ವಿಡಿಯೋ ಮಾಡಿದ್ದೇವೆ, ಆದರೆ ನಾವು ಸಮವಸ್ತ್ರದಲ್ಲಿ ಚಿತ್ರೀಕರಿಸಿದ್ದು ತಪ್ಪಾಗಿದೆ ಎಂದು ಪಶ್ಚಾತಾಪ ಪಟ್ಟಿದ್ದಾರೆ.
ಮಾಲ್ಕನ್‌ಗಿರಿಯಲ್ಲಿ ನವಜಾತ ಶಿಶುಗಳ ಸಾವಿನ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗಿದೆ.