Advertisement

ಕಪ್ಪುಪಟ್ಟಿ ಧರಿಸಿ ಶುಶ್ರೂಷಕರ ಕರ್ತವ್ಯ

03:36 PM Aug 17, 2020 | Suhan S |

ಕಲಬುರಗಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್‌) ಖಾಯಂ ಶುಶ್ರೂಷಕ ಅಧಿಕಾರಿಗಳ ಸಂಘದ ಪದಾಧಿಕಾರಿಗಳು ರವಿವಾರದಿಂದ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವ ಮೂಲಕ ಪ್ರತಿಭಟನೆ ಆರಂಭಿಸಿದ್ದಾರೆ.

Advertisement

ಕರ್ತವ್ಯಕ್ಕೆ ಹಾಜರಾದಾಗಿನಿಂದಲೂ ಶುಶ್ರೂಷಾಧಿಕಾರಿಗಳಿಗೆ ಪಿಂಚಣಿ ಸೌಲಭ್ಯ ಜಾರಿಗೊಳಿಸಿಲ್ಲ. ಎನ್‌ಪಿಎಸ್‌, ಕೆಜಿಐಡಿ, ಜ್ಯೋತಿ ಸಂಜೀವಿನಿ, ಡಿಸಿಆರ್‌ಜಿ ಮತ್ತು ಇತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಶುಶ್ರೂಷಾಧಿಕಾರಿಗಳಿಗೆ ಸಿಗುವಂತಹ ಎಲ್ಲ ಸೌಲಭ್ಯಗಳಿಂದಲೂ ಶುಶ್ರೂಷಾಧಿಕಾರಿಗಳು ವಂಚಿತರಾಗಿದ್ದಾರೆ. ಕನಿಷ್ಠ ಮೂಲ ಸೌಲಭ್ಯ ನೀಡಬೇಕೆಂದು ಒತ್ತಾಯಿಸಿದರೂ ಸರ್ಕಾರ ಕಡೆಗಣಿಸುತ್ತಿದೆ ಎಂದು ದೂರಿದರು.

ಕೋವಿಡ್‌ನ‌ಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಶುಶ್ರೂ ಷಾಧಿಕಾರಿಗಳ ಸರಿಯಾದ ಸೌಕರ್ಯಗಳು ಸಿಗುತ್ತಿಲ್ಲ. ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ಹಾಗೂ ಆರೋಗ್ಯ ಕ್ಷೇತ್ರದ ಬೆನ್ನೆಲುಬು ಆದ ಶುಶ್ರೂಷಾಧಿಕಾರಿಗಳಿಗೆ ಶೇ.50ರಷ್ಟು ಹೆಚ್ಚುವರಿ ವೇತನ ನೀಡುಬೇಕು ಹಾಗೂ ನಗದು ರಹಿತ ಚಿಕಿತ್ಸಾ ಸೌಲಭ್ಯ ಯೋಜನೆ ಜಾರಿ ಮಾಡಬೇಕು. ರೋಗಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಬಾರದು ಎನ್ನುವ ನಿಟ್ಟಿನಲ್ಲಿ ಕಪ್ಪು ಪಟ್ಟಿ ಧರಿಸಲಾಗಿದೆ. ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸುವವರೆಗೂ ಪ್ರತಿಭಟನಾರ್ಥವಾಗಿ ಇದೇ ರೀತಿ ಕಾರ್ಯ ನಿರ್ವಹಿಸುತ್ತೇವೆ ಎಂದು ಸಂಘದ ಅಧ್ಯಕ್ಷ ರಾಜಶೇಖರ ಬಿ. ಹೇಳಿದರು.

ಗೌರವಾಧ್ಯಕ್ಷ ಹಣಮಂತರಾಯ ಚಿತ್ತಾಪೂರಕರ, ಪ್ರಧಾನ ಕಾರ್ಯದರ್ಶಿ ಸಂಕೇತ ಸೂರ್ಯವಂಶಿ, ಅಶೋಕಕುಮಾರ ಗುತ್ತೇದಾರ, ಶ್ರೀಪಾದ ವಿಭೂತಿ, ಸಿದ್ದಾರ್ಥ, ವೀರೇಶ ಮೊದಲಾವರು ಕಪ್ಪು ಪಟ್ಟಿ ಧರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next