Advertisement
ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಸೋಂಕುಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಈಗಾಗಲೇ 95 ಲಕ್ಷ ದಾಟಿದೆ. ಇದೇ ಗತಿಯಲ್ಲಿ ಮುಂದುವರಿದರೆ ಇನ್ನು ನಾಲ್ಕೈದು ದಿನಗಳಲ್ಲಿ ಈ ಸಂಖ್ಯೆ ಒಂದು ಕೋಟಿ ಮುಟ್ಟಬಹುದು ಎಂಬ ಎಚ್ಚರಿಕೆ ನೀಡಿದೆ.
ಇಡೀ ಜಗತ್ತಿನಲ್ಲೇ ಅತೀ ಹೆಚ್ಚು ಕೊರೊನಾ ದಾಖಲಾಗಿರುವುದು ಅಮೆರಿಕದಲ್ಲಿ. ಇಲ್ಲಿ ಸುಮಾರು 24 ಲಕ್ಷ ಮಂದಿ ಸೋಂಕುಪೀಡಿತರಿದ್ದಾರೆ.
Related Articles
ಜಗತ್ತಿನಾದ್ಯಂತ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆಯೂ ಕೆಲವೇ ದಿನಗಳಲ್ಲಿ 5 ಲಕ್ಷ ದಾಟುವ ಸಾಧ್ಯತೆ ಇದೆ. ಈಗಾಗಲೇ 4.85 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. ಅಮೆರಿಕದಲ್ಲೇ 1.24 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಬ್ರೆಜಿಲ್ ಎರಡನೇ ಸ್ಥಾನದಲ್ಲಿದ್ದು, 53 ಸಾವಿರ ಮಂದಿ ಸಾವನ್ನಪ್ಪಿದ್ದಾರೆ.
Advertisement