Advertisement
ಇದರ ಬೆನ್ನಲ್ಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜನ ಆತಂಕಗೊಂಡು ಲಸಿಕೆಗಾಗಿ ಮುಗಿಬಿದ್ದರು. ಕೆಲವೆಡೆಯಂತೂ ಸರದಿಯಲ್ಲಿ ನಿಂತು ಪಡೆದರು. ಇದರಿಂದ ನಿತ್ಯ ನಗರದಲ್ಲಿ ಸರಾಸರಿ ಲಸಿಕೆ ಪಡೆಯು ವವರ ಸಂಖ್ಯೆ ಏಕಾಏಕಿ ದುಪ್ಪಟ್ಟಾಗಿತ್ತು.
Related Articles
Advertisement
ಜನರ ನೀರಸ ಸ್ಪಂದನೆಯು ಈಗಾಗಲೇ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿದಂತೆ ಸಾರ್ವಜನಿಕ ಸಾರಿ ಗೆ ಸೇವೆಯಲ್ಲಿ ಎರಡು ಡೋಸ್ ಲಸಿಕೆ ಕಡ್ಡಾಯಕ್ಕೆ ಕಾರಣವಾಗುವ ಸಾಧ್ಯತೆಯೂ ಇದೆ ಎಂದು ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದರು. ಮೂರ್‍ನಾಲ್ಕು ದಿನಗಳಿಂದ ಲಸಿಕೆ ಪಡೆಯುವವರ ಸಂಖ್ಯೆ ನಿತ್ಯ ಸರಾಸರಿ 35ರಿಂದ 40 ಸಾವಿರ ಆಗಿದೆ.
ಮನೆ ಮನೆಗೆ ಲಸಿಕೆ, ವಾರಕ್ಕೊಮ್ಮೆ ಅಭಿಯಾನ, ಮಾಲ್ ಗಳು ಮತ್ತು ವಾಣಿಜ್ಯ ಸಂಕೀರ್ಣಗಳಲ್ಲಿ ಎರಡು ಡೋಸ್ ಕಡ್ಡಾಯ, ಆರೋಗ್ಯ ಕಾರ್ಯಕರ್ತರಿಗೆ ಟಾ ರ್ಗೆಟ್ ಸೇರಿದಂತೆ ಹಲವು ಕ್ರಮಗಳ ನಂತರವೂ ಈ ನೀರಸ ಪ್ರತಿಕ್ರಿಯೆ ಕಂಡುಬರುತ್ತಿದೆ. ಹಾಗೆನೋಡಿದರೆ, ರಾಜ್ಯದಲ್ಲಿ ಗರಿಷ್ಠ ಲಸಿಕಾ ಪ್ರಕ್ರಿಯೆ ಆಗುತ್ತಿರುವುದು ರಾಜಧಾನಿ ಬೆಂಗಳೂರಿನಲ್ಲಿ ಆಗಿದ್ದರೂ, ಇಲ್ಲಿನ ಜನ ಸಂಖ್ಯೆಗೆ ಹೋಲಿಸಿದರೆ ಪ್ರಸ್ತುತ ಪ್ರಗತಿ ತೃಪ್ತಿಕರವಾಗಿಲ್ಲ ಎಂಬ ಅಸಮಾಧಾನ ಉನ್ನತ ಅಧಿಕಾರಿಗಳಿಂದ ವ್ಯಕ್ತವಾಗುತ್ತಿದೆ. ಇದು ಬಿಬಿಎಂಪಿ ನಿದ್ದೆಗೆಡಿಸಿದೆ ಎನ್ನಲಾಗಿದೆ.
ಇದನ್ನೂ ಓದಿ:- ತಂಗಿಯ ಮದುವೆ ಮಾಡಿಸಿ ಅಣ್ಣನ ಕರ್ತವ್ಯ ನಿಭಾಯಿಸಿದ ಯೋಧರು!
“ಕಳೆದ ನಾಲ್ಕು ದಿನಗಳಿಂದ ಲಸಿಕೆ ಪಡೆಯುವವರ ಸಂಖ್ಯೆ ಇಳಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಲಾಗುವುದು. ಈ ಮಧ್ಯೆಕೆಲ ಮಾಲ್‌ಗಳು, ವಾಣಿಜ್ಯ ಸಂಕೀರ್ಣಗಳಿಗೆ ಭೇಟಿ ನೀಡುವವರಿಗೆ ಎರಡು ಡೋಸ್ ಕಡ್ಡಾಯಗೊಳಿ ಸಿದ್ದು, ಉಳಿದೆಡೆ ಅಂದರೆ ಮೆಟ್ರೋ, ಬಿಎಂಟಿಸಿಯಲ್ಲಿ ಅನುಷ್ಠಾನಗೊಳಿಸಿರುವ ಬಗ್ಗೆ ಕೆಲ ವಾಣಿಜ್ಯ ಸಂಕೀರ್ಣಗಳ ಮಾಲಿಕರು ಅಸಮಾಧಾನ ಹೊರ ಹಾಕಿದ್ದಾರೆ.ಈ ಹಿನ್ನೆಲೆಯಲ್ಲಿ ಚಿಂತನೆ ನಡೆದಿದೆ’ ಎಂದು ಬಿಬಿ ಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಬಾಲಸುಂದರ್ ಸ್ಪಷ್ಟಪಡಿಸಿದರು.
ಪಾಲಿಕೆಯನ್ನು ಪೇಚಿಗೆ ಸಿಲುಕಿಸಿದ “ಡಬಲ್ ಗೇಮ್’!
ಬೆಂಗಳೂರು: ಡಬಲ್ ಡೋಸ್‌ಗೆ ಡಬಲ್ ನಂಬರ್! – ನಗರದಲ್ಲಿ ಆರಂಭದಲ್ಲಿ ಕೆಲವರು ಹೀಗೆ ಎರಡು ಡೋಸ್‌ಗೆ ಎರಡು ಪ್ರತ್ಯೇಕ ಮೊಬೈಲ್ ನಂಬರ್ ನೀಡಿ, ಲಸಿಕೆ ಪಡೆದಿದ್ದಾರೆ. ಆದರೆ, ಈ ನಂಬರ್‌ಗಳ “ಡಬಲ್ ಗೇಮ್’ ಬಿಬಿಎಂಪಿಯನ್ನು ಪೇಚಿಗೆ ಸಿಲುಕಿಸಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಇದುವರೆಗೆ ಲಸಿಕೆ ಪಡೆದವರಲ್ಲಿ1.30 ಲಕ್ಷಕ್ಕೂಹೆಚ್ಚು ಜನ ಎರಡೆರಡು ಮೊಬೈಲ್ ನಂಬರ್ ನೀಡಿ, ಲಸಿಕೆ ಹಾಕಿಸಿ ಕೊಂಡಿದ್ದಾರೆ.
ಈಗಆಎರಡೂ ನಂಬರ್‌ಗೆ ಕರೆ ಮಾಡಿದಾಗ, ಬೇರೆ ನಂಬರ್ ಕೊಟ್ಟು ಎರಡೂ ಡೋಸ್ ಪಡೆದಿರುವುದಾಗಿ ಹೇಳುತ್ತಿದ್ದಾರೆ. ಆದರೆ, ಇವರನ್ನು ಯಾವ ಪಟ್ಟಿಗೆ ಸೇರಿಸಬೇಕು ಎನ್ನುವುದು ಗೊಂದಲವಾಗಿದೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿಡಾ.ಬಾಲಸುಂದರ್‌ತಿಳಿಸಿದರು. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲಾಗುತ್ತಿದ್ದು, ಯಾವ ಡೋಸ್‌ನ ಪಟ್ಟಿಗೆ ಹೆಸರು ಸೇರ್ಪಡೆ ಮಾಡಬೇಕು ಎಂದು ಸಲಹೆ ಕೇಳಲಾಗಿದೆ.
ಕೇಂದ್ರದಿಂದ ಬರುವ ಸೂಚನೆ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಕೋವಿನ್ ಪೋರ್ಟಲ್‌ನಲ್ಲಿ ಲಸಿಕೆ ಪಡೆದಿರುವ ಬಗ್ಗೆ ಪಟ್ಟಿ ಪಡೆದು ವಿಳಾಸವಾರು ಹೊಂದಾಣಿಕೆ ಮಾಡಿ, ಲಸಿಕೆಯಿಂದ ಹೊರಗುಳಿದವರ ಪತ್ತೆ ಮಾಡಲಾಗುತ್ತಿದೆ ಎಂದರು.
“ಈಗಾಗಲೇ ತಾಂತ್ರಿಕ ಸಲಹಾ ಸಮಿತಿಯು ಸಾರ್ವಜನಿಕ ಸ್ಥಳಗಳಲ್ಲಿ ಎರಡುಡೋಸ್‌ಕಡ್ಡಾಯಗೊಳಿಸುವ ಶಿಫಾರಸು ಮಾಡಿದೆ. ಅದರಂತೆ ಪ್ರಸ್ತುತ ಮಾಲ್‌ಗಳು, ವಾಣಿಜ್ಯ ಸಂಕೀರ್ಣಗಳಲ್ಲಿ ಜಾರಿಗೊಳಿಸಲಾಗಿದೆ. ಪರಿಸ್ಥಿತಿ ನೋಡಿ ಕೊಂಡುಹಂತ-ಹಂತವಾಗಿ ವ್ಯಾಪ್ತಿ ವಿಸ್ತರಿಸಲಾಗುವುದು.” ●ಡಾ.ತ್ರಿಲೋಕ್‌ಚಂದ್ರ, ವಿಶೇಷ ಆಯುಕ್ತರು (ಆರೋಗ್ಯ ಮತ್ತು ಐಟಿ), ಬಿಬಿಎಂಪಿ
– ವಿಜಯಕುಮಾರ ಚಂದರಗಿ