Advertisement

5 ವರ್ಷಗಳಲ್ಲಿ ಕುಬೇರರ ಸಂಖ್ಯೆ ಇಮ್ಮಡಿ

10:31 AM Mar 13, 2020 | Team Udayavani |

2019ರಲ್ಲಿ ಎದುರಾದ ಭೌಗೋಳಿಕ -ರಾಜಕೀಯ ಉದ್ವಿಗ್ನ ಮತ್ತು ಆರ್ಥಿಕ ಸಮಸ್ಯೆಯ ನಡುವೆಯೂ ದೇಶದ ಶೇ.51ಕ್ಕೂ ಹೆಚ್ಚು ನಿವ್ವಳ ಮೌಲ್ಯ ಆದಾಯ (ಅಲ್ಟ್ರಾ ಹೈ ನೆಟ್‌ವರ್ತ್‌/ ಯುಎಚ್‌ಎನ್‌ಡಬ್ಲ್ಯುಐಎಸ್‌) ಇರುವ ಆಗರ್ಭ ಶ್ರೀಮಂತರ ಆದಾಯ ಹೆಚ್ಚಿದ್ದು, ಮುಂಬರುವ 5 ವರ್ಷಗಳಲ್ಲಿ ಇವರ ಪ್ರಮಾಣ ದ್ವಿಗುಣಗೊಳ್ಳಲಿದೆ ಎಂದು ನೈಟ್‌ ಫ್ರಾಂಕ್ಸ್‌ ವೆಲ್ತ್‌ ವರದಿ – 2020 ಹೇಳಿದೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

Advertisement

ಶೇ.73ರಷ್ಟು ವೇಗವಾಗಿ ಬೆಳೆಯಲಿದೆ
ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿನ ಹೆಚ್ಚು ನಿವ್ವಳ ಮೌಲ್ಯ ಆದಾಯ (ಅಲ್ಟ್ರಾ ಹೈ ನೆಟ್‌ವರ್ತ್‌) ಇರುವ ಶ್ರೀಮಂತರ ಸಂಖ್ಯೆ ಶೇ.73ರಷ್ಟು ಹೆಚ್ಚಾ ಗಲಿದ್ದು, ಒಟ್ಟು ಸಂಖ್ಯೆ 10,354ಕ್ಕೆ ಏರಿಕೆಯಾಗಲಿದೆ ಎಂದು ವರದಿ ಅಂದಾಜಿಸಿದೆ. 2019ರಲ್ಲಿ ಇವರ ಸಂಖ್ಯೆ 5,986ರಷ್ಟಿತ್ತು.

215 ಕೋಟಿ ರೂ. ಆಸ್ತಿ
215 ಕೋಟಿ ರೂ. (30 ದಶಲಕ್ಷ ಡಾಲರ್‌)ಗಿಂತ ಅಧಿಕ ಆಸ್ತಿ ಹೊಂದಿರುವ 5,986 ಕುಬೇರರು ಭಾರತದಲ್ಲಿ ಇದ್ದಾರೆ. ಆ ಮೂಲಕ ಈ ವರ್ಗದ ಅತೀ ಹೆಚ್ಚು ಶ್ರೀಮಂತರು ಇರುವ ದೇಶಗಳ ಪೈಕಿ ಭಾರತ 12ನೇ ಸ್ಥಾನದಲ್ಲಿದೆ. ಅಲ್ಲದೆ ಮುಂದಿನ 5 ವರ್ಷಗಳಲ್ಲಿ ಈ ಸಂಖ್ಯೆ ದ್ವಿಗುಣಗೊಳ್ಳಲಿದೆ.

2022ರ ವೇಳೆ ಶೇ.7ರಷ್ಟು ಹೆಚ್ಚಳ
ಆರ್ಥಿಕ ಕುಸಿತದ ನಡುವೆಯೂ ಜಾಗತಿಕ ಆರ್ಥಿಕತೆ ಸಕಾರಾತ್ಮಕವಾಗಿ ಅಭಿವೃದ್ಧಿ ಕಂಡಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜತೆಗೆ 2022ರ ವೇಳೆಗೆ ದೇಶದ ಜಿಡಿಪಿ ಶೇ.7ರಷ್ಟು ಏರಿಕೆ ಆಗಲಿದ್ದು, ಇದರೊಂದಿಗೆ ಶ್ರೀಮಂತರ ಆದಾಯ ಪ್ರಮಾಣವೂ ಹೆಚ್ಚಾಗಬಹುದು ಎಂದು ತಜ್ಞರು ಹೇಳಿದ್ದಾರೆ.

ಏಶ್ಯಾದಲ್ಲಿ ಭಾರತ ಮುನ್ನಡೆ
ಸಮೀಕ್ಷೆಯಲ್ಲಿ ಭಾಗಿಯಾದ ಅಗ್ರ 20 ದೇಶಗಳಲ್ಲಿ ಆರು ದೇಶಗಳು ಏಶ್ಯಾದಲ್ಲಿದ್ದು, ಶೇ.73ರಷ್ಟು ಬೆಳವಣಿಗೆ ಹೊಂದುವ ಮೂಲಕ ಭಾರತ ಮೊದಲ ಸ್ಥಾನ ಪಡೆದುಕೊಂಡಿದೆ. ಅನಂತರದ ಸ್ಥಾನದಲ್ಲಿ ವಿಯೆಟ್ನಾಂ ಶೇ.64ರಷ್ಟು, ಚೀನ ಶೇ.58ರಷ್ಟು, ಮತ್ತು ಇಂಡೋನೇಶ್ಯಾ ಶೇ.57ರಷ್ಟು ಬೆಳವಣಿಗೆ ಸಾಧಿಸಿದೆ.

Advertisement

ಷೇರು ಮಾರುಕಟ್ಟೆಯಲ್ಲಿ ಹೆಚ್ಚು ಹೂಡಿಕೆ
2019ರಲ್ಲಿ, ಶೇ.29ರಷ್ಟು ಭಾರತೀಯ ಕುಬೇರರು ಈಕ್ವಿಟಿ ಷೇರುಗಳ ಮೇಲೆ ಹೂಡಿಕೆ ಮಾಡಲು ಹೆಚ್ಚಿನ ಆಸಕ್ತಿಯನ್ನು ತೋರಿಸಿದ್ದಾರೆ. ಬಾಂಡ್‌ಗಳ ಮೇಲೆ ಶೇ.21ರಷ್ಟು ಮಂದಿ ಮತ್ತು ಶೇ.20ರಷ್ಟು ಜನ ಸ್ಥಿರಾಸ್ತಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಶೇ.83ರಷ್ಟು ಭಾರತೀಯ ಶ್ರೀಮಂತರು ಈಕ್ವಿಟಿಗಳಲ್ಲಿ ತಮ್ಮ ಹೂಡಿಕೆಯನ್ನು ಹೆಚ್ಚಿಸಲು ಯೋಜನೆ ಹಾಕಿಕೊಂಡಿದ್ದು, ಶೇ.77ರಷ್ಟು ಜನರು ಬಾಂಡ್‌ಗಳ ಮೇಲೆ ಮತ್ತು ಶೇ.51ರಷ್ಟು ಜನರು ಆಸ್ತಿಯಲ್ಲಿ ಹೂಡಿಕೆ ಮಾಡಲಿದ್ದಾರೆ.

ಹೆಚ್ಚಾಗಲು ಕಾರಣ
ಗ್ರಾಹಕ ನೆಲೆಯ ವಿಸ್ತರಣೆಯಿಂದಾಗಿ ಸಂಪತ್ತು ಸೃಷ್ಟಿಗೆ ವಿಪುಲ ಅವಕಾಶ.
1991ರ ಬಳಿಕ ಅಳವಡಿಸಿಕೊಂಡ ಉದಾರ ಆರ್ಥಿಕ ಮತ್ತು ವ್ಯಾಪಾರ ನೀತಿ.
ಜಾಗತಿಕ ಉತ್ಪನ್ನಗಳು ಮತ್ತು ಸೇವೆಗಳಿಗೆ ಪ್ರಮುಖ ಮಾರುಕಟ್ಟೆಯಾಗಿ ಗುರುತಿಸಿಕೊಂಡ ದೇಶ.
ಜಾಗತಿಕ ಕಂಪೆನಿಗಳಿಗೆ ಉತ್ಪಾದನಾ ತಾಣವಾಗಿ ದೇಶ ಬದಲಾಗುತ್ತಿರುವುದು.

ಕೊರೊನಾದ ಭೀತಿಯ ಮಧ್ಯೆಯೂ ಗಮನಾರ್ಹ ಬೆಳವಣಿಗೆ
ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ಭೀತಿಯ ಮಧ್ಯೆಯೂ ಆರ್ಥಿಕತೆ ಗಮನಾರ್ಹವಾದ ಬೆಳವಣಿಗೆ ಸಾಧಿಸಿದ್ದು, ಆಸ್ತಿ ಖರೀದಿಸುವ ಆಸಕ್ತಿ ಹೆಚ್ಚಿದೆ.

2024ರ ವೇಳೆಗೆ ಶೇ.44ರಷ್ಟು ಆರ್ಥಿಕ ಬೆಳವಣಿಗೆ ಹೊಂದುವ ಮೂಲಕ ಏಶ್ಯಾ ವಿಶ್ವದ ಎರಡನೇ ಅತಿದೊಡ್ಡ ಸಂಪತ್ತು ಕೇಂದ್ರವಾಗಿ ಗುರುತಿಸಿಕೊಳ್ಳಲಿದೆ ಎಂದು ನೈಟ್‌ ಫ್ರಾಂಕ್ಸ್‌ ವರದಿ ಉಲ್ಲೇಖ ಮಾಡಿದೆ.

74% ; 5 ವರ್ಷಗಳಲ್ಲಿ ಆಗಲಿರುವ ಕುಬೇರರ ಸಂಖ್ಯೆ ಏರಿಕೆ
ಭಾರತ 5,986- 10,354= 74 %
ಚೀನ 61,587- 97,082= 58%
ಇಂಡೋನೇಷ್ಯಾ 675-1060= 57 %
ವಿಯೆಟ್ನಾಂ 458- 753 = 64%

Advertisement

Udayavani is now on Telegram. Click here to join our channel and stay updated with the latest news.

Next