Advertisement

ಯಾದಗಿರಿ: 822ಕ್ಕೇರಿದ ಸೋಂಕಿತರ ಸಂಖ್ಯೆ

12:57 PM Jun 16, 2020 | Suhan S |

ಯಾದಗಿರಿ: ಜಿಲ್ಲೆಯಲ್ಲಿ ಜೂನ್‌ 15ರಂದು ಮತ್ತೆ 13 ಜನರಲ್ಲಿ ಕೋವಿಡ್ ಸೋಂಕು ದೃಢವಾಗಿದೆ. ಅಪ್ರಾಪ್ತ 17 ವರ್ಷದ ಯುವಕ ಪಿ-7071 ಸೇರಿದಂತೆ 13 ಜನ ಸೋಂಕಿತರಲ್ಲಿ 6 ಮಹಿಳೆಯರು, 7 ಪುರುಷರಿದ್ದು, ಎಲ್ಲರೂ ಮಹಾರಾಷ್ಟ್ರದ ನಂಟು ಹೊಂದಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 822ಕ್ಕೆ ಏರಿಕೆಯಾಗಿದೆ. 36 ವರ್ಷದ ಮಹಿಳೆ ಪಿ-7069, 29 ವರ್ಷದ ಪುರುಷ ಪಿ-7070, 20 ವರ್ಷದ ಮಹಿಳೆ ಪಿ-7072, 26 ವರ್ಷದ ಮಹಿಳೆ ಪಿ-7073, 30 ವರ್ಷದ ಮಹಿಳೆ ಪಿ-7074, 44 ವರ್ಷದ ಪುರುಷ 7075, 35 ವರ್ಷದ ಮಹಿಳೆ ಪಿ-7076, 40 ವರ್ಷದ ಪುರುಷ 7077, 24 ವರ್ಷದ ಮಹಿಳೆ ಪಿ-7078, 25 ವರ್ಷದ ಪುರುಷ ಪಿ-7079, 27 ವರ್ಷದ ಪುರುಷ ಪಿ-7080, 23 ವರ್ಷದ ಪುರುಷ ಪಿ-7081 ಸೋಂಕಿಗೆ ತುತ್ತಾಗಿದ್ದಾರೆ.

Advertisement

44 ಜನರು ಗುಣಮುಖ: ಜಿಲ್ಲೆಯಲ್ಲಿ ಕೋವಿಡ್‌ 19 ಖಚಿತಪಟ್ಟ 44 ಸೋಂಕಿತರು ಸೋಮವಾರ ಗುಣಮುಖರಾಗಿದ್ದಾರೆ. ಇಂದಿಗೆ ಸೋಂಕಿನಿಂದ ಗುಣಮುಖವಾದವರ ಸಂಖ್ಯೆ 373ಕ್ಕೆ ತಲುಪಿದೆ. ಕೋವಿಡ್ ವೈರಸ್‌ ಪರೀಕ್ಷೆಗಾಗಿ ಸೋಮವಾರ 576 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಈವರೆಗೆ 19912 ಜನರ ವರದಿ ನೆಗೆಟಿವ್‌ ಬಂದಿವೆ. ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 1300 ಜನ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 2697 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ. ಜಿಲ್ಲೆಯಲ್ಲಿ 46 ಕಂಟೇನ್ಮೆಂಟ್‌ ಝೋನ್‌ ರಚಿಸಲಾಗಿದೆ. ಹೊಸ ಜಿಲ್ಲಾಸ್ಪತ್ರೆಯಲ್ಲಿ 172 ಜನ, ಶಹಾಪುರ ಕೊರೊನಾ ಕೇರ್‌ ಸೆಂಟರ್‌ನಲ್ಲಿ 85, ಸುರಪುರ ಕೊರೊನಾ ಕೇರ್‌ ಸೆಂಟರ್‌ನಲ್ಲಿ 40 ಮತ್ತು ಬಂದಳ್ಳಿ ಏಕಲವ್ಯ ಕೊರೊನಾ ಕೇರ್‌ ಸೆಂಟರ್‌ನಲ್ಲಿ 127 ಜನರನ್ನು ಅವಲೋಕನೆಗಾಗಿ ಇರಿಸಲಾಗಿದೆ. ಜಿಲ್ಲೆಯ 21 ಸಾಂಸ್ಥಿಕ ಕ್ವಾರಂಟೈನ್‌ ಸೆಂಟರ್‌ಗಳಲ್ಲಿ ಒಟ್ಟು 1321 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next