Advertisement
ಶ್ರೀನಿವಾಸಪುರದ 26 ವರ್ಷದ ಮಹಿಳೆ ಪಿ.6907 ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದ್ದು, ಇದೀಗ ಸೋಂಕು ಪೀಡಿತರಾಗಿದ್ದಾರೆ. ಕೋಲಾರ ತಾಲೂಕಿನ ಜಂಗಮ ಗುಜೇì ನಹಳ್ಳಿ ಯ 50 ವರ್ಷ ಮಹಿಳೆಯಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿದ್ದು, ಸೋಂಕಿನ ಇತಿಹಾಸ ತನಿಖೆ ಮಾಡಲಾಗುತ್ತಿದೆ. ಬಂಗಾರಪೇಟೆ ತಾಲೂಕಿನ ಬನಹಳ್ಳಿ ಗ್ರಾಮದ 20 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ಚೆನ್ನೈಗೆ ಹೋಗಿ ಬಂದಿದ್ದ ಮಹಿಳೆಗೆ ಸೋಂಕು ತಗುಲಿದೆ. ಬೆಂ.ಗ್ರಾ.ಜಿಲ್ಲೆಯಿಂದ ಬಂದಿದ್ದ 65 ವರ್ಷದ ಮತ್ತೂರ್ವ ವ್ಯಕ್ತಿಯಲ್ಲಿ ಕೋವಿಡ್ 19 ಸೋಂಕು ಕಂಡುಬಂದಿದೆ. ಸದ್ಯ ಸೋಂಕಿತರು ಕೋವಿಡ್ ಆಸ್ಪತ್ರೆಗೆ ದಾಖಲಾಗಿ ದ್ದಾರೆ. ಇದರಿಂದಾಗಿ ಕೋಲಾರ ದಲ್ಲಿ ಸೋಂಕಿತರ ಸಂಖ್ಯೆ 52ಕ್ಕೇರಿದೆ.
Related Articles
ಬಂಗಾರಪೇಟೆ: ತಾಲೂಕಿನ ಬನಹಳ್ಳಿ ಮತ್ತು ಕುಪ್ಪನಹಳ್ಳಿ ಗ್ರಾಮಗಳಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ತಮಿಳುನಾಡಿನಿಂದ ಬಂದಿದ್ದ ಬನ ಹಳ್ಳಿಯ ಮಹಿಳೆಗೆ ಹಾಗೂ ಕುಪ್ಪನಹಳ್ಳಿ ಗ್ರಾಮದ ಸೋಂಕಿತನ ಅತ್ತೆಗೆ ಕೋವಿಡ್ 19 ಪಾಸಿಟಿವ್ ಬಂದಿದೆ. ತಮಿಳುನಾಡು ಕೃಷ್ಣ ಗಿರಿಯ ಗ್ರಾಮವೊಂದರಿಂದ ತವರು ಮನೆಗೆ ಬಂದಿದ್ದ ಬನಹಳ್ಳಿಯ ಮಹಿಳೆ ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದರು.
Advertisement
ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಕೋವಿಡ್ 19 ದೃಢ ಪಟ್ಟಿದೆ. ಕುಪ್ಪನಹಳ್ಳಿಯ ಸೋಂಕಿತ ಚಾಲಕ ನಿಂದ ಆತನ ಅತ್ತೆಗೂ ಶುಕ್ರವಾರ ಕೋವಿಡ್ 19 ಬಂದಿದೆ. ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಕುಪ್ಪನಹಳ್ಳಿ ಹಾಗೂ ಬೂದಿ ಕೋಟೆ ಹೋಬಳಿಯ ಬನಹಳ್ಳಿ ಗ್ರಾಮಗಳನ್ನು ಸೀಲ್‌ಡೌನ್ ಮಾಡಲಾಗಿದೆ.
ಈ ಗ್ರಾಮದಿಂದ ಯಾರೂ ಹೊರಗೆ ಹೋಗದಂತೆ ಮತ್ತು ಒಳಗೆ ಬರದಂತೆ ಕ್ರಮ ವಹಿಸಲಾಗಿದೆ. ಆ ಗ್ರಾಮಗಳಲ್ಲಿ ಮಾಸ್ಕ್, ಸ್ಯಾನಿ ಟೈಸರ್ ಮತ್ತು ಸಾಮಾಜಿಕ ಅಂತರದ ಬಗ್ಗೆ ಆಲಂಬಾಡಿ ಜ್ಯೋತೇನ ಹಳ್ಳಿ ಗ್ರಾಪಂ ಅಧಿಕಾರಿಗಳು ಅರಿವು ಮೂಡಿಸುತ್ತಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ಕೆ.ಬಿ.ಚಂದ್ರಮೌಳೇ ಶ್ವರ್, ತಾಪಂ ಇಒ ಎನ್. ವೆಂಕಟೇಶಪ್ಪ, ಸರ್ಕಲ್ ಇನ್ಸ್‌ಪೆಕ್ಟರ್ ಬಿ.ಎಂ.ಶ್ರೀಕಂಠಯ್ಯ, ಪಿಡಿಒ ಗಂಗೋಜಿರಾವ್ ಮುಂತಾದವರು ಭೇಟಿ ನೀಡಿ ಪರಿಶೀಲನೆ ಮಾಡಿದರು.