Advertisement

2022ನೇ ಹಣಕಾಸು ವರ್ಷದಲ್ಲಿ ಐಟಿ ರಿಟರ್ನ್ಸ್ ಸಲ್ಲಿಕೆ ಸಂಖ್ಯೆ ಹೆಚ್ಚಳ: ಸಂಗೀತಾ ಸಿಂಗ್‌

08:36 PM Jun 11, 2022 | |

ಪಣಜಿ: 2021ಕ್ಕೆ ಹೋಲಿಸಿದರೆ 2022ನೇ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಸಂಖ್ಯೆಯು ಹೆಚ್ಚಳವಾಗಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ) ಅಧ್ಯಕ್ಷರಾದ ಸಂಗೀತಾ ಸಿಂಗ್‌ ಹೇಳಿದ್ದಾರೆ.

Advertisement

ಹಿಂದಿನ ವಿತ್ತ ವರ್ಷದಲ್ಲಿ 6.9 ಕೋಟಿ ರಿಟರ್ನ್ಸ್ ಸಲ್ಲಿಕೆಯಾಗಿದ್ದರೆ, ಕಳೆದ ವರ್ಷ ಇದು 7.14 ಕೋಟಿಗೇರಿದೆ. ತೆರಿಗೆದಾರರ ಸಂಖ್ಯೆಯಲ್ಲಿ ಏರಿಕೆ ಮತ್ತು ಪರಿಷ್ಕೃತ ರಿಟರ್ನ್ಸ್ ಸಲ್ಲಿಕೆ ಹೆಚ್ಚಾಗಿದ್ದೇ ಇದಕ್ಕೆ ಕಾರಣ ಎಂದೂ ಅವರು ತಿಳಿಸಿದ್ದಾರೆ.

ತೆರಿಗೆ ಸಂಗ್ರಹ ಹೆಚ್ಚಳವು ದೇಶ ಆರ್ಥಿಕವಾಗಿ ಪ್ರಗತಿ ಹೊಂದುತ್ತಿರುವುದರ ಸಂಕೇತವಾಗಿದೆ. ಪ್ರಧಾನಿ ಮೋದಿ ಅವರ ಡಿಜಿಟಲ್‌ ಇಂಡಿಯಾ ಕರೆ ಮತ್ತು ತೆರಿಗೆ ಪಾವತಿ ಬಗ್ಗೆ ಮೂಡಿಸಲಾಗುತ್ತಿರುವ ಜಾಗೃತಿಯೂ ಈ ಎಲ್ಲ ಬೆಳವಣಿಗೆಗಳಿಗೆ ಕಾರಣ ಎಂದೂ ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next