Advertisement

10ಕ್ಕೇರಿದ ಮೃತರ ಸಂಖ್ಯೆ

12:50 AM May 26, 2019 | Team Udayavani |

ಕಠ್ಮಂಡು: ಈ ಬಾರಿ ಮೌಂಟ್‌ ಎವರೆಸ್ಟ್‌ ಏರುವ ಸಾಹಸಿಗರಲ್ಲಿ ಮೃತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

Advertisement

ಕಳೆದ ವಾರ ಮೂವರು ಭಾರತೀಯರು ಸಾವನ್ನಪ್ಪಿದ್ದರು. ಶನಿವಾರ ಬ್ರಿಟನ್‌ನ ರಾಬಿನ್‌ ಹೈನೆಸ್‌ ಫಿಶರ್‌ ಪರ್ವತದ ತುದಿ ತಲುಪಿ ವಾಪಸಾಗುವಾಗ, 8700 ಮೀಟರ್‌ ಎತ್ತರದಲ್ಲಿ ದ್ದಾಗಿ ಹಠಾತ್‌ 150 ಅಡಿ ಕೆಳಕ್ಕೆ ಕುಸಿದಿದ್ದಾರೆ. ಇವರನ್ನು ರಕ್ಷಿಸಲು ಗೈಡ್‌ ಯತ್ನಿಸಿದರಾದರೂ ಯಶಸ್ವಿಯಾಗಲಿಲ್ಲ ಎಂದು ಹೇಳಲಾಗಿದೆ. ಶುಕ್ರವಾರ ಐರಿಶ್‌ನ ಕೆವಿನ್‌ ಸಾವನ್ನಪ್ಪಿದ್ದರು. ಕಳೆದ ವಾರ ಭಾರತೀಯರು ಇಬ್ಬರು ಮಹಿಳೆಯರು ಹಾಗೂ ಓರ್ವ ವ್ಯಕ್ತಿ ಸಾವನ್ನಪ್ಪಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next