Advertisement
ಕೊಪ್ಪಳ ಜಿಲ್ಲೆಯಾಗಿ 24 ವರ್ಷಗಳು ಕಳೆದರೂ ಅನಾಥ ವಯೋವೃದ್ಧರು, ಬುದ್ಧಿಮಾಂಧ್ಯರು ಹಾಗೂ ಭೀಕ್ಷುಕರ ಪುನರ್ವಸತಿ ಕೇಂದ್ರಗಳಿಲ್ಲ. ದೂರದ ಬಳ್ಳಾರಿ, ರಾಯಚೂರು ಗದಗ ಹಾಗೂ ಬಾಗಲಕೋಟೆಯ ಪುನರ್ವಸತಿ ಕೇಂದ್ರಗಳಿಗೆ ಇವರನ್ನು ಕಳುಹಿಸಲು ಸ್ಥಳೀಯ ಅಧಿಕಾರಿಗಳು ಹೆಣಗಾಡಬೇಕಾದ ಸ್ಥಿತಿಯುಂಟಾಗಿದೆ.
Related Articles
Advertisement
ಗಂಗಾವತಿ ನಗರದಲ್ಲಿ ಅನಾಥ ವಯೋವೃದ್ಧರು ಮತ್ತು ಭಿಕ್ಷುಕರು ಮತ್ತು ಬುದ್ದಿಮಾಂಧ್ಯರ ಸಂಖ್ಯೆ ಹೆಚ್ಚಳವಾಗಿದೆ. ಕೇಂದ್ರ ಬಸ್ ನಿಲ್ದಾಣ, ಪಾರ್ಕ್ ಬಯಲು ರಂಗಮಂದಿರ ಹಾಗೂ ನಗರದ ವಿವಿಧ ವೃತ್ತಗಳಲ್ಲಿ ಇವರನ್ನು ಕಾಣಬಹುದಾಗಿದೆ. ರಾಜ್ಯ ಸರಕಾರ ಇವರನ್ನು ಸಂರಕ್ಷಣೆ ಚಿಕಿತ್ಸೆ ನೀಡಲು ಪುನರ್ವಸತಿ ಕೇಂದ್ರಗಳನ್ನು ಸ್ಥಳೀಯವಾಗಿ ಆರಂಭಿಸಬೇಕಾಗಿದೆ. ವಯೋವೃದ್ಧರು ಮಳೆ ಬಿಸಿಲು ಚಳಿ ಎನ್ನದೇ ರಸ್ತೆ ಬದಿಯಲ್ಲಿ ಬಿದ್ದಿರುವ ದೃಶ್ಯ ಮನಕಲಕುತ್ತಿದೆ.
ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಮತ್ತು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಹಾಲಪ್ಪ ಆಚಾರ್ ಯವರು ಕೊಪ್ಪಳ ಜಿಲ್ಲೆಯ ಎದುರಾಗಿರುವುದರಿಂದ ಕೊಪ್ಪಳ ಜಿಲ್ಲೆಯಲ್ಲಿ ಪುನರ್ವಸತಿ ಕೇಂದ್ರಗಳನ್ನು ಸ್ಥಾಪನೆ ಮಾಡುವ ಮೂಲಕ ಅನಾಥ ವಯೋವೃದ್ಧರೂ ಭಿಕ್ಷುಕರಿಗೆ ಪುನರ್ವಸತಿ ಕಲ್ಪಿಸಬೇಕಿದೆ .
ಪತ್ರ ಬರೆಯಲಾಗಿದೆ : ಅನಾಥ ವಯೋವೃದ್ಧರು,ಭೀಕ್ಷುಕರು ಮತ್ತು ಬುದ್ಧಿಮಾಂಧ್ಯ ಇರುವವರನ್ನು ನಿರ್ಗತಿಕ ಕೇಂದ್ರಕ್ಕೆ ಕರೆ ತರಲಾಗುತ್ತಿದೆ. ಪುನಹ ಅವರೆಲ್ಲ ನಗರದಲ್ಲಿ ತೆವಲಿಕೊಂಡು ಹೋಗುತ್ತಿದ್ದಾರೆ. ಈಗಾಗಲೇ ಜಿಲ್ಲಾಡಳಿತಕ್ಕೆ ಸ್ಥಳೀಯವಾಗಿ ಪುನರ್ವಸತಿ ಕೇಂದ್ರವನ್ನು ಆರಂಭಿಸುವಂತೆ ಕೋರಲಾಗಿದೆ. ಮಹಿಳಾ ಮಕ್ಕಳ ಕಲ್ಯಾಣ,ಪೊಲೀಸ್ ಮತ್ತು ಸಮಾಜಕಲ್ಯಾಣ ಇಲಾಖೆಯ ಅಧಿಕಾರಿಗಳ ಜತೆ ಸಮನ್ವಯ ಸಾಧಿಸಿ ಮತ್ತೊಮ್ಮೆ ಪುನರ್ವಸತಿ ಕೇಂದ್ರ ಆರಂಭಕ್ಕೆ ಪತ್ರ ಬರೆಯಲಾಗುತ್ತದೆ. ಕೆಲವರು ಅನಾಥ ವಯೋವೃದ್ಧರನ್ನು ರೈಲಿನ ಮೂಲಕ ಕರೆ ತಂದು ಬಿಟ್ಟು ಹೋಗುತ್ತಿರುವ ಕುರಿತು ಮಾಹಿತಿ ಇದ್ದು ನಗರಸಭೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ನಗರಸಭೆ ಪೌರಾಯುಕ್ತ ಅರವಿಂದ ಬಿ ಜಮಖಂಡಿ ಉದಯವಾಣಿ ಗೆ ತಿಳಿಸಿದ್ದಾರೆ.
–ಕೆ. ನಿಂಗಜ್ಜ