ಸ್ಟಾಕ್‌ಹೋಮ್ : ಪಾಕಿಸ್ಥಾನ ಮತ್ತು ಚೀನ ಕಳೆದೊಂದು ವರ್ಷದಲ್ಲಿ ತಮ್ಮ ಅಣ್ವಸ್ತ್ರಗಳನ್ನು ಸಂಖ್ಯೆಯನ್ನು ಹೆಚ್ಚಿಸಿಕೊಂಡಿವೆ. ಆದರೆ ಭಾರತ ಮಾತ್ರ ತನ್ನ ಅಣ್ವಸ್ತ್ರಗಳ ಸಂಖ್ಯೆಯನ್ನು ಯಥಾವತ್ ಉಳಿಸಿಕೊಂಡಿದೆ.
ಸ್ಟಾಕ್‌ಹೋಮ್ ಇಂಟರ್‌ನ್ಯಾಶನನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಸಿಪ್ರಿ) ಇಂದು ಸೋಮವಾರ ಬಿಡುಗಡೆ ಮಾಡಿರುವ 2019ರ ಇಯರ್ ಬುಕ್ ನಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದೆ.
ಪಾಕಿಸ್ಥಾನದ ಬಳಿ ಈಗ 150 ರಿಂದ 160 ಅಣ್ವಸ್ತ್ರಗಳಿವೆ. ಚೀನದ ಬಳಿ 290 ಅಣ್ವಸ್ತ್ರಗಳಿವೆ. ಭಾರತದ ಬಳಿ 130 ರಿಂದ 140 ಅಣು ಬಾಂಬ್ ಗಳಿವೆ ಎಂದು ಇಯರ್ ಬುಕ್ ತಿಳಿಸಿದೆ.
2019ರ ಆರಂಭದಲ್ಲಿ ಚೀನದ ಬಳಿ 280 ಅಣು ಬಾಂಬ್ ಗಳಿದ್ದವು. ಅದೀಗ 290ಕ್ಕೇರಿದೆ. ಇದೇ ರೀತಿ ಪಾಕಿಸ್ಥಾನದ ಬಳಿ ಇದ್ದ 140 ರಿಂದ 150ರ ಆಣು ಬಾಂಬ್ ಸಂಖ್ಯೆ ಈಗ 150 ರಿಂದ 160 ಕ್ಕೇರಿದೆ.
ಇಸ್ರೇಲ್ ಬಳಿ 80ರಿಂದ 90ರಷ್ಟು ಅಣು ಬಾಂಬ್ ಗಳು ಇವೆ; ಉತ್ತರ ಕೊರಿಯ ತನ್ನ ಬಳಿ ಇದ್ದ 20 ಅಣು ಬಾಂಬ್ ಗಳನ್ನು ಇದೀಗ 30ಕ್ಕೆ ಏರಿಸಿಕೊಂಡಿದೆ.
2018ರ ಆರಂಭದಲ್ಲಿ ಭಾರತದ ಬಳಿ 130 ರಿಂದ 140 ಅಣು ಬಾಂಬ್‌ಗಳಿದ್ದವು. ಈಗಲೂ ಭಾರತದ ಬಳಿ ಅಷ್ಟೇ ಅಣು ಬಾಂಬ್‌ಗಳಿವೆ.
ಒಟ್ಟಾರೆಯಾಗಿ ಅಮೆರಿಕ, ರಶ್ಯ, ಪಾಕಿಸ್ಥಾನ, ಇಸ್ರೇಲ್ ಮತ್ತು ಉತ್ತರ ಕೊರಿಯ ಬಳಿ ಇರುವ ಒಟ್ಟು ಅಣು ಬಾಂಬ್ ಗಳ ಸಂಖ್ಯೆ ಅಂದಾಜು 13,865. ಇದು 2018ರ ಆರಂಭದಲ್ಲಿದ ಸಂಖ್ಯೆಗಿಂತ 600 ಕಡಿಮೆ ಎಂದು ಸಿಪ್ರಿ ಹೇಳಿದೆ.