ಹೊಸದಿಲ್ಲಿ : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಇಂದು ಬುಧವಾರ 2019ರ ನೀಟ್ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಲಿದೆ.
ಎನ್‌ಟಿಎ ಇದರ ಅಧಿಕೃತ ntaneet.nic.in. ವೆಬ್ ಸೈಟ್‌ನಲ್ಲಿ ನೀಟ್ ಫಲಿತಾಂಶ ಪ್ರಕಟವಾಗಲಿವೆ.
ಜತೆಗೆ ನೀಟ್ ಫಲಿತಾಂಶ mcc.nic.in. ವೆಬ್ ಸೈಟಲ್ಲೂ ಲಭ್ಯವಿರುತ್ತದೆ.
2019ರ ನೀಟ್ ಪರೀಕ್ಷೆಯನ್ನು ಎನ್‌ಟಿಐ ಕಳೆದ ಮೇ 5 ಮತ್ತು ಮೇ 20ರಂದು ನಡೆಸಿತ್ತು.
Related Articles
ದೇಶದ ಹೆಚ್ಚಿನ ಭಾಗಗಳಲ್ಲಿ ನೀಟ್ ಪರೀಕ್ಷೆಯನ್ನು ಕಳೆದ ಮೇ 5ರಂದು ನಡೆಸಲಾಗಿತ್ತು.
ಆದರೆ ಫೋನಿ ಚಂಡಮಾರುತ ಸಂತ್ರಸ್ತ ಒಡಿಶಾ ಅಭ್ಯರ್ಥಿಗಳು ಮತ್ತು ರೈಲು ವಿಳಂಬವಾದ ಕಾರಣಕ್ಕೆ ಪರೀಕ್ಷೆ ಮಿಸ್ ಮಾಡಿಕೊಂಡಿದ್ದ ಕರ್ನಾಟಕದ ಅಭ್ಯರ್ಥಿಗಳಿಗೆ ಮೇ 20ರಂದು ಪರೀಕ್ಷೆ ನಡೆಸಲಾಗಿತ್ತು.