ಉಳ್ಳಾಲ: ದುಡಿಯುವ ಕೈಯನ್ನು,ಮಿಡಿಯುವ ಮನಸ್ಸನ್ನು ತರಬೇತಿಗೊಳಿಸುವ ಎನ್ನೆಸ್ಸೆಸ್ ಘಟಕಕ್ಕೆ ಉತ್ತಮ ಭವಿಷ್ಯವಿದ್ದು, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಎನೆಸ್ಸೆಸ್ ಪೂರಕ ಎಂದು ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಹೇಳಿದರು.
ತಲಪಾಡಿಯ ಶಾರದಾ ಪ್ರಥಮ ದರ್ಜೆ ಕಾಲೇಜು, ಎನೆಸ್ಸೆಸ್ ಘಟಕದ ವಾರ್ಷಿಕ ಶಿಬಿರ ಸಮಾಪನದಲ್ಲಿ ಸಮಾರೋಪ ಭಾಷಣ ಮಾಡಿದರು.
ಹತ್ತಾರು ಸದ್ವಿಚಾರಗಳಲ್ಲಿ ನಮ್ಮ ನೆಲದ ಸಂಸ್ಕƒತಿಯ ಹಿರಿಮೆಯಿದೆ.ಹಂಚಿ ತಿನ್ನುವುದನ್ನು ಕೂಡಿ ಬಾಳುವುದನ್ನು ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ಕಲಿಸಿಕೊಡುತ್ತದೆ. ಬೆನ್ನು ಬಾಗಿಸಿ ದುಡಿದು ಕೈಕೆಸರಾದರೆ ಮಾತ್ರ ಬಾಯಿಗೆ ಮೊಸರನ್ನ ಸಿಗುತ್ತದೆ ಈ ನಿಟ್ಟಿನಲ್ಲಿ ಎನ್‌ಎಸ್‌ಎಸ್ ಈ ಎಲ್ಲ ಕೌಶಲವನ್ನು ಕಲಿಸಿಕೊಡುತ್ತದೆ ಎಂದರು.
ಅಷ್ಟಾವಧಾನಿ ಡಾ. ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್ ಅವರು ಅಧ್ಯಕ್ಷತೆ ವಹಿಸಿದ್ದರು.
ಯೋಜನಾಧಿಕಾರಿಗಳಾದ ಸೂರಜ್ ಎಂ. ದೇವಾಡಿಗ ಪ್ರಾಸ್ತಾವಿಸಿದರು. ಆಡಳಿಧಿಕಾರಿ ವಿವೇಕ್ ತಂತ್ರಿ ಶುಭ ಹಾರೈಸಿದರು.
ಎನ್ನೆಸ್ಸೆಸ್‌ನ ಸಹ ಯೋಜನಾಧಿಕಾರಿ ಅಮಿತ ಆಳ್ವ, ಉಪ ಪ್ರಾಂಶುಪಾಲ ಪ್ರೊಣಮಾಧವ ಕೆ.ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ವರ್ಷಾ ಸ್ವಾಗತಿಸಿದರು. ಸಮೀಕ್ಷಾ ವಂದಿಸಿದರು.ರಕ್ಷಿತ್ ಕಿರಣ್ ನಿರೂಪಿಸಿದರು.