Advertisement

ಎನ್‌ಎಸ್‌ಎಸ್‌ ದೇಶಾಭಿವೃದ್ಧಿಗೆ ಪೂರಕ

07:15 AM Mar 19, 2019 | Team Udayavani |

ತುಮಕೂರು: ಹಲವು ಬಗೆಯ ಚಟುವಟಿಕೆಗಳಿಂದ ಹಾಗೂ ಸರ್ವ ಸಮುದಾಯದ ಸಮ್ಮಿಲನದಿಂದ ದೇಶದಲ್ಲಿ ಸೃಜನಶೀಲ ಕಾರ್ಯಕ್ರಮಗಳು ಪ್ರಸ್ತುತಗೊಳ್ಳುತ್ತಿವೆ. ಜತೆಗೆ ಎನ್‌ಎಸ್‌ಎಸ್‌ನ ಕಾರ್ಯಗಳು ದೇಶದ ಅಭಿವೃದ್ಧಿಗೆ ಪೂರಕವಾಗಿವೆ ಎಂದು ತುಮಕೂರು ವಿವಿ ಕುಲಪತಿ ಪ್ರೊ.ವೈ.ಎಸ್‌.ಸಿದ್ದೇಗೌಡ ತಿಳಿಸಿದರು.

Advertisement

ನಗರದ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕ್ರೀಡಾ ಮತ್ತು ಯುವ ಸಬಲೀಕರಣ, ರಾಜ್ಯ, ರಾಷ್ಟ್ರೀಯ ಸೇವಾ ಶಿಬಿರ ಮತ್ತು ಸಿದ್ಧಾರ್ಥ ಉನ್ನತ ಶಿಕ್ಷಣ ಅಕಾಡೆಮಿ ಜಂಟಿಯಾಗಿ ಸೋಮವಾರ ಆಯೋಜಿಸಿದ್ದ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಸೇವಾ ಮನೋಭಾವನೆ: ರಾಷ್ಟ್ರೀಯ ಭಾವೈಕ್ಯತೆ ಶಿಬಿರಗಳು ಸೇವಾ ಮನೋಭಾವನೆ ಬೆಳೆಸುತ್ತವೆ ಹಾಗೂ ದೇಶದ ಅಭಿವೃದ್ಧಿಗೆ ದಾರಿ ದೀಪವಾಗುತ್ತವೆ. ಯುವಕರು ತಮ್ಮ ಜೀವನದ ತಿರುವುಗಳನ್ನು ಕಂಡುಕೊಳ್ಳಲು ವೇದಿಕೆಯಾಗಿದ್ದು, ಇಲ್ಲಿ ಯಾವುದೇ ಜಾತಿ, ಧರ್ಮ, ಲಿಂಗ ಭೇದಗಳು ತಲೆದೂರುವುದಿಲ್ಲ. ಇದರಿಂದ ಸ್ಪರ್ಧಾತ್ಮಕ ಜಗದಲ್ಲಿ ಮುನ್ನುಗ್ಗಬಹುದು ಎಂದು ತಿಳಿಸಿದರು.

ಶಿಬಿರಾರ್ಥಿಯಾಗಿ ಸೇವೆ ಸಲ್ಲಿಸಿದ್ದೇನೆ: ಕ್ರೀಡೆ, ವಿವಿಧ ಬಗೆಯ ಕಲೆಗಳು, ರೆಡ್‌ ಕ್ರಾಸ್‌ ಇನ್ನಿತರ ಕಾರ್ಯಗಳು ಯುವಜನರ ಸೆಳೆಯುವಲ್ಲಿ ಸಫ‌ಲವಾಗುತ್ತದೆ. ಇದಲ್ಲದೆ ನಾನು ವಿದ್ಯಾರ್ಥಿ ದಿಸೆಯಲ್ಲಿ ಎನ್‌ಎಸ್‌ಎಸ್‌ನ ಶಿಬಿರಾರ್ಥಿಯಾಗಿ ಸೇವೆ ಸಲ್ಲಿಸಿದ್ದೇನೆಂದು ಸಂತಸ ವ್ಯಕ್ತಪಡಿಸಿದರು.

ಜ್ಞಾನ ಮುಖ್ಯವಾದದ್ದು: ಸಿದ್ಧಾರ್ಥ ಉನ್ನತ ಶಿಕ್ಷಣ ಅಕಾಡೆಮಿಯ ಉಪಕುಲಪತಿ ಡಾ.ಪಿ.ಬಾಲಕೃಷ್ಣ ಶೆಟ್ಟಿ ಮಾತನಾಡಿ, ದೇಶದ ಅಭಿವೃದ್ಧಿಗೆ ದತ್ತಾಂಶ ಸಂಗ್ರಹಣೆಗಿಂತ ಜ್ಞಾನ ಮುಖ್ಯವಾದದ್ದು, ಜಗತ್ತಿನಲ್ಲಿ ಬಲ, ಶ್ರೀಮಂತ ವ್ಯಕ್ತಿಗಳನ್ನು ಗುರುತಿಸಬಹುದು. ಆದರೆ, ಖುಷಿಯಾಗಿರುವವರನ್ನು ಈ ಶಿಬಿರಗಳಲ್ಲಿ ಕಾಣಬಹುದು. ಮತ್ತು ಜ್ಞಾನ ಕೇವಲ ಮಾತಲ್ಲ ಸೃಜನ ಶೀಲತೆಯ ಯೋಚನೆಯಾಗಬೇಕೆಂದು ತಿಳಿಸಿದರು.

Advertisement

ಅಭಿವೃದ್ಧಿಗೆ ಕೈಜೋಡಿಸಿ: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಎಂ.ಕೆ.ವೀರಯ್ಯ ಮಾತನಾಡಿ, ಈ ಶಿಬಿರವು ಸಮಾಜ ಸೇವೆ ಪ್ರತಿಪಾದಿಸುದಾಗಿದ್ದು, ಗಿಡಮರಗಳನ್ನು ಪೋಷಿಸುವುದು. ಪ್ರಾಣಿಸಂಕುಲ ವೀಕೋಪಗಳಲ್ಲಿ ಸಿಲುಕಿದವರನ್ನು ಕಾಪಾಡಲು ಮಹತ್ತರ ಪಾತ್ರ ವಹಿಸುತ್ತದೆ. ಆದ ಕಾರಣ ಶಿಬಿರಾರ್ಥಿಗಳು ಸಕಾರಾತ್ಮಕ ಯೋಚನೆಗಳಿಂದ ದೇಶದ ಅಭಿವೃದ್ಧಿಗೆ ಕೈಜೋಡಿಸಿ ಎಂದು ಕಿವಿಮಾತು ಹೇಳಿದರು.

ಸಮಾರಂಭದಲ್ಲಿ ಕಾಲೇಜಿನ ರಿಜಿಸ್ಟ್ರಾರ್‌ ಡಾ.ಎಂ.ಝಡ್‌. ಕುರಿಯನ್‌, ಡೀನ್‌ ಡಾ.ಎಂ ಸಿದ್ದಪ್ಪ, ಕಾರ್ಯಕ್ರಮ ಸಂಯೋಜಕ ಡಾ. ಬಿ.ಎಸ್‌. ರವಿಕಿರಣ್‌, ಎನ್‌ಎಸ್‌ಎಸ್‌ ಅಧಿಕಾರಿ ಪ್ರೊ.ಎಸ್‌.ಎಸ್‌.ಜೀವಿತ್‌, ಸಂಸ್ಥೆಯ ಆಡಳಿತಾಧಿಕಾರಿ ಡಾ.ವೈ.ಎಂ.ರೆಡ್ಡಿ, ಅನಂತಪುರ, ಪಾಂಡಿಚೇರಿ, ಮಧುರೈ, ಕೇರಳ, ಅಂಕೋಲ, ಮೈಸೂರು, ಬೆಂಗಳೂರು, ಮಂಗಳೂರು ವಿವಿಗಳ ಶಿಬಿರಾರ್ಥಿಗಳು ಮತ್ತಿತರರು ಪಾಲ್ಗೊಂಡಿದ್ದರು.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಹತ್ತು ಶಿಬಿರ ಹಮ್ಮಿಕೊಂಡಿದ್ದು ಇದು ಒಂದಾಗಿದೆ. ದೇಶ್ಯಾದ್ಯಂತ ನಲವತ್ತು ಲಕ್ಷ ಶಿಬಿರಾರ್ಥಿಗಳು ಇದ್ದು, ಸರ್ಕಾರವು ಇದನ್ನು ಪ್ರೋತ್ಸಾಹಿಸುತ್ತಿದೆ. ಹಾಗೆಯೇ ಎನ್‌ಎಸ್‌ಎಸ್‌ ಸಮುದಾಯ, ಜಾತಿ, ಧರ್ಮ ಮೀರಿ ಭಾವೈಕ್ಯತೆ ಮೆರೆಯಲು, ಪ್ರೀತಿ, ಗೌರವವನ್ನು ಹಂಚಿಕೊಳ್ಳಲು ಪೂರಕ.
-ಡಾ.ಗಣನಾಥ್‌ ಶೆಟ್ಟಿ, ರಾಜ್ಯ ರಾಷ್ಟ್ರೀಯ ಸೇವಾ ಶಿಬಿರದ ಅಧಿಕಾರಿ 

Advertisement

Udayavani is now on Telegram. Click here to join our channel and stay updated with the latest news.

Next