Advertisement

ಪಿಎಫ್ಐ ನಿಷೇಧ ಮಾಡಿ; ಮುಸ್ಲಿಂ ಮುಖಂಡರ ಜತೆ ಅಜಿತ್‌ ದೋವಲ್‌ ಮಾತುಕತೆ

09:12 PM Jul 30, 2022 | Team Udayavani |

ನವದೆಹಲಿ: ತೀವ್ರಗಾಮಿ ಇಸ್ಲಾಮಿಕ್‌ ಸಂಘಟನೆಯಾದ “ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ’ವನ್ನು ನಿಷೇಧ ಮಾಡುವಂತೆ ಮತ್ತು ಸಾಮಾಜಿಕ ಜಾಲತಾಣಗಳ ದುರ್ಬಳಕೆಯನ್ನು ತಗ್ಗಿಸುವಂತೆ “ಆಲ್‌ ಇಂಡಿಯಾ ಸೂಫಿ ಸಜ್ಜಾದಾನಶಿನ್‌ ಕೌನ್ಸಿಲ್‌’ ಒತ್ತಾಯಿಸಿದೆ.

Advertisement

ಈ ಸಂಬಂಧ ನಡೆದ ಅಂತರ ಧರ್ಮೀಯ ಸಭೆಯಲ್ಲಿ ಈ ಬಗ್ಗೆ ನಿರ್ಣಯವನ್ನೂ ತೆಗೆದುಕೊಳ್ಳಲಾಗಿದೆ.

ನವದೆಹಲಿಯಲ್ಲಿ ಈ ಸಭೆ ನಡೆದಿದ್ದು, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರೂ ಉಪಸ್ಥಿತರಿದ್ದರು. ಸಭೆಯಲ್ಲಿ ಭಾಗಿಯಾಗಿದ್ದ ಸೂಫಿ ಮೌಲ್ವಿಗಳು, ಪಿಎಫ್ಐ ಅನ್ನು ನಿಷೇಧಿಸಬೇಕು ಎಂದು ಒತ್ತಾಯಿಸಲಾಗಿದೆ.

ಕರ್ನಾಟಕದ ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು, ಉಧಯಪುರದ ಟೈಲರ್‌ ಕನ್ನಯ್ಯಲಾಲ್‌, ಅಮರಾವತಿಯ ಫಾರ್ಮಸಿಸ್ಟ್‌ ಉಮೇಶ ಕೊಲ್ಹೆ ಅವರ ಹತ್ಯೆ ಹಿಂದೆ ಪಿಎಫ್ಐ ಕೈವಾಡವಿರುವ ಶಂಕೆ ಇದೆ. ಹೀಗಾಗಿ, ಇದನ್ನು ನಿಷೇಧ ಮಾಡುವುದು ಉತ್ತಮ ಎಂದು ನಿರ್ಣಯಿಸಲಾಗಿದೆ.

ಪಿಎಫ್ಐ ರೀತಿಯ ಸಂಘಟನೆಗಳು ಸಮಾಜದಲ್ಲಿ ದೇಶವಿರೋಧಿ ಚಟುವಟಿಕೆಗಳಲ್ಲಿ ಮಗ್ನವಾಗಿವೆ. ಇವರು, ಜನರಲ್ಲಿ ಒಡಕು ಮೂಡಿಸಿ, ಅವರಲ್ಲೇ ದ್ವೇಷ ಮೂಡುವಂತೆ ಮಾಡುತ್ತಿವೆ. ಹೀಗಾಗಿ, ಈ ನೆಲದ ಕಾನೂನಿನಂತೆ ಈ ಸಂಘಟನೆಯನ್ನು ನಿಷೇಧ ಮಾಡಬೇಕು ಎಂದು ಸಭೆ ತೀರ್ಮಾನಿಸಿದೆ.

Advertisement

ಸಭೆಯಲ್ಲಿ ಮಾತನಾಡಿದ ಅಜಿತ್‌ ದೋವಲ್‌, ಧಾರ್ಮಿಕ ನಂಬಿಕೆಗಳ ಆಧಾರದ ಮೇಲೆ ಕೆಲವರು ಅಶಾಂತಿ ಮೂಡಿಸುತ್ತಿದ್ದು, ಇದರಿಂದಾಗಿ ಸಮಾಜದ ಒಳಗೆ ಮತ್ತು ಹೊರಗೆ ವೈಷಮ್ಯದ ಪರಿಣಾಮಗಳನ್ನು ಬಿತ್ತುತ್ತಿದ್ದಾರೆ. ಆದರೆ, ಬಹಳಷ್ಟು ಮಂದಿ ಈ ಬಗ್ಗೆ ಮೌನದಿಂದ ಇದ್ದಾರೆ. ನಾವು ಮೌನವಾಗಿರಲು ಸಾಧ್ಯವಿಲ್ಲ. ನಾನು ಸಂಘಟಿತರಾಗಬೇಕು, ಧ್ವನಿ ಎತ್ತಬೇಕು. ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲ, ಧರ್ಮ ಮತ್ತು ಸಿದ್ಧಾಂತದ ಹೆಸರಿನಲ್ಲಿ ಕ್ರೌರ್ಯ ಮತ್ತು ಘರ್ಷಣೆಯನ್ನೂ ಸೃಷ್ಟಿಸುತ್ತಿದ್ದಾರೆ. ಇದು ದೇಶದ ಒಳಗೆ ಮತ್ತು ಹೊರಗೂ ಕೆಟ್ಟ ಹೆಸರಿಗೆ ಕಾರಣವಾಗಿದೆ ಎಂದು ದೋವಲ್‌ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೇಲೆ ಇರಲಿ ನಿಗಾ
ಇದೇ ಸಭೆಯಲ್ಲಿ ಸಾಮಾಜಿಕ ಜಾಲತಾಣಗಳಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆಯೂ ಚರ್ಚಿಸಲಾಯಿತು. ಇಲ್ಲಿ ಎಲ್ಲ ಧರ್ಮದ ದೇವರುಗಳನ್ನೂ ಅವಹೇಳನ ಮಾಡಲಾಗುತ್ತಿದೆ. ಇದರಿಂದಾಗಿ ನರೇಂದ್ರ ಮೋದಿ ಸರ್ಕಾರವು, ಈ ಸಾಮಾಜಿಕ ಜಾಲತಾಣಗಳ ಮೇಲೆ ಕಠಿಣ ನಿರ್ಬಂಧ ಹೇರಬೇಕಾಗಿದೆ ಎಂದು ಒತ್ತಾಯಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next