Advertisement

ವಿವಾಹ ನಿಯಮ ಉಲ್ಲಂಘಿಸಿದರೆ ಎಫ್‌ಐಆರ್‌: ಸಿಪಿಐ

05:28 PM Apr 10, 2020 | Naveen |

ಎನ್‌.ಆರ್‌.ಪುರ: ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಿವಾಹವನ್ನು ಮನೆಯಲ್ಲಿಯೇ ಮಾಡಬೇಕು. ವಧು ಮತ್ತು ವರನ ಕಡೆ ತಲಾ 5 ಜನರು ಮಾತ್ರ ಇರಬೇಕು. ಈ ನಿಯಮ ಉಲ್ಲಂಘಿಸಿದರೆ ಎಫ್‌ಐಆರ್‌ ದಾಖಲಿಸಿ ವಸತಿ ನಿಲಯದಲ್ಲಿ ಕ್ವಾರಂಟೈನ್‌ ಮಾಡಲಾಗುವುದು ಎಂದು ಸಿಪಿಐ ಎಸ್‌.ಸುರೇಶ್‌ ಹೇಳಿದರು.

Advertisement

ಪಪಂನಲ್ಲಿ ನಡೆದ ಕೋವಿಡ್  ಕುರಿತು ತಾಲೂಕು ಮಟ್ಟದ ಟಾಸ್ಕ್ಫೋರ್ಸ್‌ ಸಮಿತಿ ಸಭೆಯಲ್ಲಿ ಮಾತನಾಡಿದರು.ಲಾಕ್‌ಡೌನ್‌ ಇರುವುದರಿಂದ ಹೊರ ಜಿಲ್ಲೆಯಿಂದ ಯಾರಿಗೂ ಜಿಲ್ಲೆಯ ಒಳಗೆ ಬರಲು ಅವಕಾಶವಿಲ್ಲ. ಮಂಗಳೂರಿನಿಂದ ಬಿಜಾಪುರಕ್ಕೆ ಕಾರ್ಮಿಕರನ್ನು 15ಸಾವಿರ ರೂ. ಬಾಡಿಗೆ ಆಧಾರದ ಮೇಲೆ ದಾವಣ ಗೆರೆಗೆ ಸೇರಿದ ಖಾಸಗಿ ಆ್ಯಂಬುಲೆನ್ಸ್‌ ನಲ್ಲಿ 21 ಜನರನ್ನು ಸಾಗಿಸುತ್ತಿದ್ದ ಪ್ರಕರಣ ಕಂಡು ಬಂದಿದೆ. ಇವರನ್ನು ಬಂಧಿ ಸಿ, ಎಫ್‌ ಐಆರ್‌ ದಾಖಲಿಸಿ ಮೊರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನ್‌ ಮಾಡಲಾಗಿದೆ. ಇನ್ನು ಮುಂದೆ ಹೊರ ಜಿಲ್ಲೆಗೆ ಹೋಗ
ಬೇಕಾದರೆ ಡಿಸಿ, ಎಸ್ಪಿ ಸಹಿಯುಳ್ಳ ಪತ್ರ ಅಗತ್ಯ ಎಂದರು.

ಅಕ್ರಮವಾಗಿ ವಾಹನಗಳ ಒಳಬರುವಿಕೆ ತಡೆಗಟ್ಟಲು ಎನ್‌.ಆರ್‌.ಪುರದಲ್ಲಿ 3, ಬಾಳೆಹೊನ್ನೂರಿ ನಲ್ಲಿ 1 ಹೆಚ್ಚುವರಿ ತಪಾಸಣಾ ಘಟಕ ಸ್ಥಾಪಿಸಲಾಗಿದೆ ಎಂದರು. ತಾಪಂ ಇಒ ಎಸ್‌.ನಯನ, ಕೊಪ್ಪ ಡಿವೈಎಸ್‌ ಪಿ.ಎಸ್‌.ರಾಜು, ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ| ವೀರ ಪ್ರಸಾದ್‌ ಮಾತನಾಡಿದರು. ತಹಶೀಲ್ದಾರ್‌ ಎಚ್‌.ಎಸ್‌.ಪರಮೇಶ್ವರ್‌ ಅಧ್ಯಕ್ಷತೆ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next